ಡಾ. ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ, ಬಲಿದಾನ ಸದಾ ಸ್ಮರಣೀಯ : ದೊಡ್ಡಗೌಡರ

ಡಾ. ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ, ಬಲಿದಾನ ಸದಾ ಸ್ಮರಣೀಯ  : ದೊಡ್ಡಗೌಡರ  Dr. Shyama Prasad Mukherjee's sacrifice and sacrifice will always be remembered: Dodda Gowda

ಕಿತ್ತೂರು 24 :  ದೇಶದ ಅಖಂಡತೆ, ಸಮಾನತೆಗೆ, ಏಕತೆಗೆ ಭಾರತ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿಧಾನ, ರಾಷ್ಟ್ರೇ​‍್ರಮ, ಏಕತೆ ಸದಾ ಸ್ಮರಣೀಯ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು. ಅವರು ಮಂಗಳವಾರದಂದು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಡಾ. ಶ್ಯಾಮ ಪ್ರಸಾದ ಮುಖರ್ಜಿ  ಅವರ ತ್ಯಾಗ ಬಲಿದಾನ ದಿವಸ ಪ್ರಯುಕ್ತ  ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.  ಬಿಜೆಪಿ ಯುವ ಮುಖಂಡ ವಿಕ್ರಂ ಇನಾಮದಾರ ಮಾತನಾಡಿ ಭಾರತ ದೇಶದ ಸಮಾನತೆ, ರಾಷ್ಟ್ರೀಯತೆ, ದೇಶದ ಅಭಿವೃದ್ಧಿಗೆ,ಉನ್ನತೆಗೆ ಡಾ. ಶ್ಯಾಮ ಮುಖರ್ಜಿ ಅವರ ಕಾರ್ಯ ಶ್ಲಾಘನೀಯ ಎಂದರು. 

ಈ ಸಂದರ್ಭದಲ್ಲಿ ಕಿತ್ತೂರು ಕ್ಷೇತ್ರದ ಖೋದಾನಪೂರ  ಗ್ರಾಮದ ಮುಖಂಡ ರಾಜೇಂದ್ರ ಇನಾಮದಾರ ಹಾಗೂ ನೂರಾರು ಜನ ಕಾರ್ಯಕರ್ತರು  ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ, ರಾಜ್ಯ ಸರ್ಕಾರಗಳ ಸಾಧನೆಗೆ ಮನಗಂಡು ಬಿಜೆಪಿ ಸೇರೆ​‍್ಡಗೊಂಡರು.  ಈ ವೇಳೆಯಲ್ಲಿ ಲಕ್ಷ್ಮೀ ಇನಾಮದಾರ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಚನ್ನಬಸಪ್ಪ ಮೋಖಾಸಿ, ಅಪ್ಪಣ್ಣ ಪಾಗದ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಸರಸ್ವತಿ ಹೈಬತ್ತಿ, ಬಸಪ್ಪ ಕಾದ್ರೋಳಿ, ಪ್ರಕಾಶ ಮೆಟ್ಯಾಲ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.