ಸಾಹಿತ್ಯ ಕ್ಷೇತ್ರದಲ್ಲಿ ಡಾ. ಶಿರೂರ ಅವರ ಹೆಸರು ಉತ್ತುಂಗ ಸ್ಥಾನದಲ್ಲಿದೆ : ಪ್ರೊ ಎಸ್.ಆರ್.ಆಶಿ
Dr. Shiroor's name is at the top of the literary field: Prof. S.R.Ashi
ಹುಬ್ಬಳ್ಳಿ 16: ಹಿರಿಯ ಸಾಹಿತಿಗಳಾದ ಶಾಂತಾ ಕೆ.ಬಸವರಾಜ ಹಾಗೂ ನಿವೃತ್ ಪ್ರಾಚಾರ್ಯ, ಸಾಹಿತಿ ಪ್ರೊ ಎಸ್.ಆರ್.ಆಶಿ ಅವರ ನೇತೃತ್ವದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಹೃದಯ ಸ್ಪರ್ಷಿ ಸನ್ಮಾನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಬಸವ ಕೇಂದ್ರದ ಹಿಂದಿನ ಅಧ್ಯಕ್ಷರು, ಸಾಹಿತಿ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ಜೈನ ಸಾಹಿತ್ಯ ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ, 85ರ ಹಿರಿಯರಾದ ಡಾ ಬಿ.ವಿ.ಶಿರೂರ ಅವರು ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರು. ಪಾಂಡಿತ್ಯ ಪರಂಪರೆಯ ಬಹುಶಿಸ್ತೀಯ ಅಧ್ಯಯನದ ಘನ ವಿದ್ವಾಂಸರು, ಚಿಂತನಶೀಲ ಬದ್ಧತೆಯ ಬರಹಗಾರರು. ಹಳಗನ್ನಡ, ಶಾಸನ, ಇತಿಹಾಸ, ಸಂಸ್ಕೃತಿ, ವಚನಸಾಹಿತ್ಯ, ಹಸ್ತಪ್ರತಿ, ಗ್ರಂಥ ಸಂಪಾದನಶಾಸ್ತ್ರ ಪರಿಣತರು ಡಾ. ಎಂ.ಎಂ.ಕಲಬುಗಿ9 ರಾಷ್ಟ್ರೀಯ ಸಂಶೋಧನ ಪ್ರಶಸ್ತಿ ಪುರಸ್ಕೃತರಾದ ಡಾ ಬಿ.ವಿ.ಶಿರೂರ ಅವರಿಗೆ ಸಾಹಿತಿಗಳು,
ಆತ್ಮೀಯರು ಶಾಲು, ಮಾಲಾರೆ್ಣ ಮಾಡಿ, ಹಣ್ಣುಗಳನ್ನು ಹಾಗೂ ಗ್ರಂಥಗಳನ್ನು ನೀಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಲಾಯಿತು. ಭಕ್ತಿಯಿಂದ ಶುಭಾಶಯಗಳನ್ನು ಕೋರಿದರು. ಸಾಹಿತಿ ಶಾಂತಾ ಕೆ.ಬಸವರಾಜ ಅವರು ಮಾತನಾಡಿ ಡಾ. ಶಿರೂರ ಗುರುಗಳು ನನ್ನೆಲ್ಲ ಸಾಹಿತ್ಯ ಕೃಷಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ನನಗೆ ಅವರು ದೊಡ್ಡಣ್ಣನ ಹಾಗೆ ಪ್ರೀತಿ ತೋರಿದ್ದಾರೆ. ನನ್ನ ಬರವಣೆಗೆಗೆ ಸರಿಯಾದ ಮಾರ್ಗದರ್ಶನ ನೀಡಿ ಸಾಹಿತ್ಯ ರಚನೆಗೆ ಪ್ರೊತ್ಸಾಹ ನೀಡಿ ಹರಿಸಿ ಹಾರೈಸಿದ್ದಾರೆ ಎಂದರು. ಸಾಹಿತಿ ಪ್ರೊ ಎಸ್.ಆರ್.ಆಶಿ ಅವರು ಮಾತನಾಡಿ ಡಾ. ಶಿರೂರ ಗುರುಗಳು ನನಗೆ ವಿದ್ಯಾ ಗುರುಗಳಾಗಿದ್ಧಾರೆ. ಅವರು ನನ್ನ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ್ದಾರೆ. ಅವರ ತಂದೆಯವರು ಶಾಸಕರಾಗಿ ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಡಾ. ಶಿರೂರ ಅವರ ಹೆಸರು ಉತ್ತುಂಗ ಸ್ಥಾನದಲ್ಲಿದೆ. ಜೈನ ಹಾಗೂ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ನಿವೃತ್ ವೈದ್ಯಾಧಿಕಾರಿ ಡಾ. ವಿ.ಬಿ.ನಿಟಾಲಿ, ಬಸವ ಕೇಂದ್ರದ ಕಾರ್ಯದರ್ಶಿ ಕೆ.ಎಸ್.ಇನಾಮತಿ, ಪ್ರಾಚಾರ್ಯ ಪ್ರೊ ಎಫ್.ಬಿ.ಸೊರಟೂರ, ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡಿದ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. ಕೃತಿಕಾ ಮಹೇಂದ್ರ ಶಿರೂರ, ಶಿವರುದ್ರ ಟ್ರಸ್ಟನ ಡಾ.ಬಸವಕುಮಾರ ತಲವಾಯಿ, ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 