ಡಾ. ಸಾಯಿ ಸೂರಜ ಕೋಟೇರ ಅವರಿಗೆ ಖವರ್ಷದ ಉದಯೋನ್ಮುಖ ಸಿಟಿವಿಸ್ ಸರ್ಜನ್ ಗರಿ
Dr. Sai Suraj Kotera was awarded the Emerging City Surgeon of the Year award.
ಡಾ. ಸಾಯಿ ಸೂರಜ ಕೋಟೇರ ಅವರಿಗೆ ಖವರ್ಷದ ಉದಯೋನ್ಮುಖ ಸಿಟಿವಿಸ್ ಸರ್ಜನ್ ಗರಿ
ಧಾರವಾಡ 15: ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನ ಹೃದಯ ಶಸ್ತ್ರಚಿಕಿತ್ಸಕ ಡಾ. ಸಾಯಿ ಸೂರಜ ಕೋಟೇರ ಅವರಿಗೆ ವಾಯ್ಸ್ ಆಫ್ ಹೆಲ್ತ್ ಕೇರ್ ನಿಂದ ಕೊಡಮಾಡಲ್ಪಡುವ ’ವರ್ಷದ ಉದಯೋನ್ಮುಖ ಅಖಿಗಿಖ (ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜರಿ) ಸರ್ಜನ್ - ಪ್ರಾದೇಶಿಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವ ದೆಹಲಿಯಲ್ಲಿ ನಡೆದ ಕಾರ್ಡಿಯಾಕ್ ಎಕ್ಸಲೆನ್ಸ್ -2025 ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಪಡೆದರು. ವಿಒಎಚ್ (ಗಿಓಊ) ಆಯೋಜಿಸಿದ್ದ ಮತ್ತು ನಾರಾಯಣ ಹೆಲ್ತ್ ಬೆಂಬಲಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮನ್ನಣೆಯು ಡಾ. ಕೋಟೇರ ಅವರಿಗೆ ಅವರ ಶಸ್ತ್ರಚಿಕಿತ್ಸಾ ಪರಿಣತಿ, ಕ್ಲಿನಿಕಲ್ ಶ್ರೇಷ್ಠತೆ ಮತ್ತು ಈ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಕೊಡುಗೆಗಳನ್ನು ಪರಿಗಣಿಸಿ ಕೊಡಲಾಗಿದೆ. ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಸಹೋದ್ಯೋಗಿಗಳು, ಸಿಬ್ಬಂದಿಗಳು ಹಾಗೂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಶಿಕುಮಾರ ಪಟ್ಟಣಶೆಟ್ಟಿಯವರು ಡಾ. ಸಾಯಿ ಸೂರಜ ಕೋಟೇರ ಅವರಿಗೆ ಅಭಿನಂದಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 