ಡಾ. ಎಸ್.ಎಲ್. ಭೈರಪ್ಪನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ
Dr. S.L. Bhyrappa's thoughts are relevant for all times.
ಹುಲಿಕೋಟೆ 28: ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ, ಸಮಾಜ, ಸಂಗೀತ, ಮಾನವೀಯ ಜೀವನ ಮೌಲ್ಯಗಳನ್ನು ಕಾದಂಬರಿ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಚಿತ್ರಿಸಿ ಭಾರತೀಯ ಕಾದಂಬರಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತವಾಗಿಸಿರುವ ಡಾ. ಎಸ್.ಎಲ್. ಭೈರಪ್ಪನವರ (1931-2025) ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವೆಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಐಕ್ಯುಎಸಿ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಡಾ. ಎಸ್.ಎಲ್. ಭೈರ್ಪ ನುಡಿನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿಶಿಷ್ಟ ಶೈಲಿಯ ಬರಹದಿಂದ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿಕೊಂಡಿರುವ ಭೈರ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಕಾಯ್ದುಕೊಂಡ ಕನ್ನಡನಾಡಿನ ಅಪೂರ್ವ ಲೇಖಕರಾಗಿದ್ದು, ಅವರ ಬರಹ ಮತ್ತು ವ್ಯಕ್ತಿತ್ವ ಯುವಕರಿಗೆ ದಾರೀದೀಪವೆಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಎನ್.ಎಸ್.ಎಸ್. ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ‘ಭೈರ್ಪನವರ ಕಾದಂಬರಿಗಳಲ್ಲಿ ಐತಿಹಾಸಿಕ ಚಿಂತನೆಗಳು’, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಲ್ಲಾಸ ಶೆಟ್ಟಿ ‘ಭೈರ್ಪನವರ ಕಾದಂಬರಿಗಳಲ್ಲಿ ವೈಜ್ಞಾನಿಕ ವಿಚಾರಗಳು’, ಪ್ರೊ. ಲಕ್ಷ್ಮಣ ಮುಳಗುಂದ ‘ಭೈರ್ಪನವರ ಕಾದಂಬರಿಗಳಲ್ಲಿ ದೈನಂದಿನ ವ್ಯವಹಾರಿಕ ಸಂಗತಿಗಳು’, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಎಸಿ ಘಟಕದ ಸಂಯೋಜಕ ಡಾ. ಜಿತೇಂದ್ರ ಜಹಾಗೀರದಾರ ‘ಭೈರ್ಪನವರ ಕಾದಂಬರಿಗಳಲ್ಲಿ ತಾತ್ವಿಕ ಚಿಂತನೆಗಳು’, ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ‘ಭೈರ್ಪನವರ ಕಾದಂಬರಿಗಳಲ್ಲಿ ಮಾನವೀಯ ಜೀವನ ಮೌಲ್ಯಗಳು’, ಕನ್ನಡ ಪ್ರಾಧ್ಯಾಪಕ ಭೀಮೇಶ ‘ಭೈರ್ಪನವರ ಕಾದಂಬರಿಗಳಲ್ಲಿ ಗ್ರಾಮೀಣ ಬದುಕು’, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುಭಾಸ ಹರಿಹರ ‘ಭೈರ್ಪನವರ ಕಾದಂಬರಿಗಳಲ್ಲಿ ರಾಜಕೀಯ ವಿಚಾರಗಳು’, ಇಂಗ್ಲೀಷ ವಿಭಾಗದ ಮುಖ್ಯಸ್ಥೆ ಮಹಾನಂದಾ ಹಿರೇಮಠ ‘ಆಂಗ್ಲ ಭಾಷೆಗೆ ಅನುವಾದಿತ ಭೈರ್ಪನವರ ಕಾದಂಬರಿಗಳ ವೈಶಿಷ್ಟ್ಯತೆ’, ಇಂಗ್ಲೀಷ ಪ್ರಾಧ್ಯಾಪಕಿ ಸಾವಿತ್ರಿ ಟಿ. ‘ಭೈರ್ಪನವರ ಕಾದಂಬರಿಗಳ ಜನಪ್ರಿಯತೆ ಮತ್ತು ಪ್ರಸ್ತುತತೆ’ ಕುರಿತು ಮಾತನಾಡುತ್ತ ನುಡಿನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 