ಡಾ.ಪ್ರಭಾಕರ ಕೋರೆಯವರಿಂದ ಎಂಎಲ್‌ಐಆರ್‌ಸಿಗೆ 1934ರ ಪೋರ್ಡ್ ಮಾಡೆಲ್ ಕಾರು ಹಸ್ತಾಂತರ
Dr. Prabhakar Kore hands over a 1934 Ford model car to MLIRC
ಬೆಳಗಾವಿ 09: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಪೋರ್ಡ್ ಸಲೂನ್ ಕಾರನ್ನು ಬೆಳಗಾವಿ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ ಇತ್ತೀಚಿಗೆ ಹಸ್ತಾಂತರಿಸಿದರು.
ಆಕರ್ಷಕ ವಿನ್ಯಾಸ ಹೊಂದಿದ್ದ 1934ರ ಮಾಡೆಲ್ ಫೋರ್ಡ್ ಸಲೂನ್ ಕಾರ್ ಇಂಜಿನ್ ಕ್ಷಮತೆಯಿಂದ ಕೂಡಿ ಇಂದಿಗೂ ಕಾರ್ಯನಿರ್ವಹಿಸುತ್ತಿತ್ತು. ಕೋರೆಯವರ ಪ್ರೀತಿಯ ಪ್ರತೀಕವಾಗಿದ್ದ ಫೋರ್ಡ್ ಕಾರ್‌ನ್ನು ತಂದೆಯವರ ನೆನಪಿನ ಪ್ರತೀಕವಾಗಿ ಜತನದಿಂದ ಇಟ್ಟುಕೊಂಡಿದ್ದರು.
ಇತ್ತೀಚಿಗೆ ಈ ಕಾರನ್ನು ಎಂಎಲ್‌ಆರ್‌ಸಿಯ ಕಮಾಂಡೆಂಟ್ ಬೀಗ್ರೇಡಿಯರ್ ಜಾಯದೀಪ ಮುಖರ್ಜಿ ಅವರಿಗೆ ಡಾ.ಕೋರೆಯವರು ಹಸ್ತಾಂತರಿಸಿದರು. ಈ ಕುರಿತು ಮಾತನಾಡಿದ ಅವರು “ಇದೊಂದು ಅತ್ಯಂತ ಹಳೆಯ ಮಾದರಿಯ ಅಪರೂಪದ ಫೋರ್ಡ್ ಸಲೂನ್ ಕಾರ್‌ವಾಗಿದ್ದು, ನಮ್ಮ ಪಾರಂಪರಿಕ ರೆಜಿಮೆಂಟಲ್ ಸೆಂಟರ್‌ಗೆ ಡಾ.ಕೋರೆಯವರ ಅಮೂಲ್ಯವಾದ ಕೊಡುಗೆಯಾಗಿದೆ. ಈ ವಿಂಟೇಜ್ ಕಾರು ನಮ್ಮ ಎಂಎಲ್‌ಐಆರ್‌ಸಿ ಸಂಗ್ರಹಾಲಯಕ್ಕೆ ಸೇರೆ್ಡಯಾಗಲಿದೆ ಹಾಗೂ ಇದು ಡಾ.ಕೋರೆಯವರ ನೆನಪಿನ ಸಂಕೇತವಾಗಿ ಉಳಿಯಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಕರ್ನಲ್ ವಿಕೆಬಿ ಪಾಟೀಲ ಹಾಗೂ ಮರಾಠಾ ಲಘು ಪದಾತಿದಳದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 