ಡಾ. ಪ್ರಭಾಕರ ಕೋರೆ ಜನ್ಮದಿನ: ಕೆ.ಎಲ್‌.ಇ. ಜಿ.ಹೆಚ್‌. ಕಾಲೇಜಿನಲ್ಲಿ ಸಸಿ ನೆಡುವಿಕೆ

ಡಾ. ಪ್ರಭಾಕರ ಕೋರೆ ಜನ್ಮದಿನ: ಕೆ.ಎಲ್‌.ಇ. ಜಿ.ಹೆಚ್‌. ಕಾಲೇಜಿನಲ್ಲಿ ಸಸಿ ನೆಡುವಿಕೆ Dr. Prabhakar Kore's Birthday: Sapling Plantation at K.L.E. G.H. College

ಲೋಕದರ್ಶನ ವರದಿ 

ಹಾವೇರಿ 03: ಕೆ.ಎಲ್‌.ಇ. ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷರು ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು, ಶಿಕ್ಷಣ, ಆರೋಗ್ಯ, ಸಹಕಾರ, ಓದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸನ್ಮಾನ್ಯಶ್ರೀ ಡಾ. ಪ್ರಭಾಕರ ಕೋರೆಯವರ 79ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಜಿ. ಎಚ್‌. ಕಾಲೇಜಿನಲ್ಲಿ ಸಸಿ ನೆಡುವ ಮೂಲಕ ಮತ್ತು ಜ್ಞಾನಜ್ಯೋತಿ ಅಂಧ ಮಕ್ಕಳ ಶಾಲೆಗೆ ಸಿಹಿ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಿ. ಬಿ. ಹಿರೇಮಠ, ಎಸ್‌. ಜೆ. ಅರಣಿ, ಬಸವರಾಜ ಮಾಸೂರ, ಎಸ್‌. ಎಂ. ಹುರಳಿಕುಪ್ಪಿ, ಪ್ರಾಚಾರ್ಯರಾದ ಪ್ರೊ. ಎಂ. ಎಂ. ಹೊಳ್ಳಿಯವರ, ಡಾ. ಜೆ. ಆರ್‌. ಶಿಂಧೆ, ಪ್ರೊ. ಶಿವಯೋಗಿ ಕೋರಿಶೆಟ್ಟರ್, ಪ್ರೊ. ರೂಪಾ ಕೋರೆ, ಡಾ. ಈ. ಬಿ. ಸೇಡಂಕರ, ಡಾ. ಎಸ್‌. ಆರ್‌. ನಾಯಕ, ಡಾ. ಶಮಂತಕುಮಾರ್ ಕೆ.ಎಸ್‌. ಮೊದಲಾದವರು ಉಪಸ್ಥಿತರಿದ್ದರು.