ಜ್ಯೋತಿ ಬುದ್ದಿಮಾಂದ್ಯ ಶಾಲೆಯಲ್ಲಿ ಡಾ. ಪ್ರಭಾಕರ ಕೋರೆ 79 ನೇ ಜನ್ಮ ದಿನ ಆಚರಣೆ
Dr. Prabhakar Kore's 79th birthday celebrated at the Jyothi School for the Mentally Challenged
ಲೋಕದರ್ಶನ ವರದಿ
ಹಾವೇರಿ 01 : ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ನಿ.,ಅಂಕಲಿ ಹಾವೇರಿ. ಶಾಖೆ ವತಿಯಿಂದ ಹಾವೇರಿಯ ಇಜಾರಿಲಕಮಾಪುರದಲ್ಲಿ ಇರುವಂತಹ ಜ್ಯೋತಿ ಬುದ್ದಿಮಾಂಧ್ಯ ಶಾಲೆಯ ವಸತಿಯುತ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ಮೂಲಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮತ್ತು ಸಂಸ್ಥೆಯ ಮೂಲ ಸಂಸ್ಥಾಪಕರು ಆದಂತಹ ಡಾ.ಪ್ರಭಾಕರ ಕೋರೆ ಸರ್ ಇವರ 79ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಹಾಗೂ ಶಾಖೆಯ ಅಧ್ಯಕ್ಷರಾದ ಬಸವರಾಜ ಮಾಸೂರ ಅವರು ಮಾತನಾಡಿ ಕೋರೆ ಸರ್ ಅವರು ನಾಡು ನುಡಿಗೆ ತಮ್ಮ ನಿಸ್ವಾರ್ಥ ಸೇವೆ ನೀಡಿ ದೇಶ ಅಭಿವೃದ್ದಿಯಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರ, ಸಹಕಾರಿ ಕ್ಷೇತ್ರ ವೈಧ್ಯಕೀಯ ಕ್ಷೇತ್ರ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಚಾಪನ್ನು ಮೂಡಿಸಿದ್ದು ಭಾರತ ಸರ್ಕಾರ ಇದನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಎಂದು ತಿಳಿಸುವುದರ ಜೊತೆಗೆ ಕೋರೆ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶಾಖೆಯ ಸಂಚಾಲಕರಾದ ಶಿವಯೋಗಿ. ಮ. ಕೊಳ್ಳಿ, ನಿರಂಜನ. ವಿ. ಹೇರೂರ, ವಿನಯ. ಶಿ. ಶಿರೂರ, ಸುಭಾಶಚಂದ್ರ. ಮ. ಹುರಳಿಕೊಪ್ಪಿ, ದಯಾನಂದ. ವಿ. ಯಡ್ರಾಮಿ, ಹಾಗೂ ಶಾಖಾ ವ್ಯವಸ್ಥಾಪಕರಾದ ಸುನೀಲ ಮ ಚನ್ನೂರ ಹಾಗೂ ಸಿಬ್ಬಂದಿ ವರ್ಗದವರು ಪವಿತ್ರಾ ಬಣಕಾರ, ವಿದ್ಯಾ ಗುಡಗೂರ, ದೇವರಾಜ ಬಿದರಿ, ಬಸವಣ್ಣ ಕಲ್ಯಾಣಿ, ಪರಶುರಾಮ ಸಂದಿಮನಿ, ಪಿಗ್ಮಿ ಸಂಗ್ರಾಹಕರಾದ ನಾಗರಾಜ ಸುಳ್ಳಳ್ಳಿ, ಪಂಚಾಕ್ಷರಯ್ಯ ಗಡ್ಡದಮಠ, ಮಲ್ಲಿಕಾರ್ಜುನ ಹೊಸಮನಿ, ಶ್ಯಾಮಲಾ ಹೊಸಮನಿ, ಸಿಧ್ಧಲಿಂಗೇಶ ಬಾಳಿ ಮತ್ತು ಗ್ರಾಹಕರು ಗುರುಪಾದಯ್ಯ ಸಾಲಿಮಠ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 