ಪದವಿ ಪೂರ್ವ ಕಾಲೇಜುಗಳ ಸಂಘಟನೆಗೆ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ನಾಗರಾಜ್ ಮರೆಣ್ಣವರ್ ಆಯ್ಕೆ
Dr. Nagaraj Marennavar elected as new District President of Pre-University Colleges Association
ಲೋಕದರ್ಶನ ವರದಿ
ಬೆಳಗಾವಿ 11 : ಜಿಲ್ಲೆಯ ಶಿವಬಸವನಗರದಲ್ಲಿರುವ ಪ್ರಭುದೇವ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ, ಮಹಾಮಂಡಳದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪದವಿಪೂರ್ವ ಮಹಾವಿದ್ಯಾಲಯಗಳ ಸಂಘಟನೆಗೆ ಬೆಳಗಾವಿ ಅವರನ್ನು ಅಧ್ಯಕ್ಷರಾಗಿ ಡಾ ನಾಗರಾಜ್ ಮರೆಣ್ಣವರ್ ಅವರು ನೂತನವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ನಾಗರಾಜ್ ಮರೆಣ್ಣವರ್ ಅವರು, ಪದವಿಪೂರ್ವ ಮಹಾವಿದ್ಯಾಲಯಗಳ ಎಲ್ಲ ನೌಕರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದಾಗಿ ಹಾಗೂ ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಹಳಿಂಗಳಿ, ಅನುದಾನಿತ ಶಾಲಾ-ಕಾಲೇಜುಗಳ ನೌಕರ ಸಂಘದ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದು ಸನ್ಮಾನಿಸಿ ಶುಭಾಶಯ ಕೋರಿದರು.
ಜೊತೆಗೆ ಸಂಜಯ್ ಚಿಗರಿ, ಸುರೇಶ್ ಚೌಗುಲಾ, ದಯಾನಂದ ಮಗದುಮ್, ಮನೋಹರ್ ಉಳ್ಳಾಗಡ್ಡಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಪದಾಧಿಕಾರಿಗಳ ವಿವರ ಹೀಗಿದೆ: ಎನ್.ಬಿ. ಶಿರಸ್ಯಾಡ ಹಿ ಅಧ್ಯಕ್ಷರುಆರ್. ಜಿ.ಮಠ ಹಿ ಉಪಾಧ್ಯಕ್ಷರು ಶ್ರೀಕಾಂತ ಶಾನವಾಡ ಹಿ ಕಾರ್ಯದರ್ಶಿಗಳುವೈ. ಎಂ. ಪಾಟೀಲ ಹಿ ಖಜಾಂಚಿಕೆ. ಶಾಮಪ್ರಸಾದ ಹಿ ಸಂಘಟನಾ ಕಾರ್ಯದರ್ಶಿಗಳುಕೆ. ಬಿ.ಮೆಳೇದ ಹಿ ಕಾನೂನು ಸಲ . ನಾಗರಾಜ್ ಮರೆಣ್ಣವರ ಹಿ ನಿರ್ದೇಶಕರು ಪ್ರಭು ಶಿವನಾಯಕರ ಹಿ ನಿರ್ದೇಶಕರು ಬಿ. ಎಸ್. ಬುಳ್ಳಾರ ಹಿ ನಿರ್ದೇಶಕರು ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಹಕ್ಕು, ಸೌಲಭ್ಯ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 