ಮೂರು ದಿನಗಳ ಕಾಲ ಇಸಿಜಿ ಕಾರಾ್ಯಗಾರ ಉದ್ಘಾಟಿಸಿದ ಡಾ. ಎನ್ ಎಸ್ ಮಹಾಂತಶೆಟ್ಟಿ
Dr. N. S. Mahantashetty inaugurated the three-day ECG workshop
ಬೆಳಗಾವಿ, 19 ; ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮೆಡಿಸಿನ್ ವಿಭಾಗವು ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಇಸಿಜಿ ಕಾರಾ್ಯಗಾರವನ್ನ ಏರಿ್ಡಸಲಾಗಿತ್ತು. ಕಾರಾ್ಯಗಾರವನ್ನು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‌್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅತ್ಯಂತ ಸರಳವಾದ ಇಸಿಜಿ ಪ್ರಕ್ರಿಯೆಯಿಂದ ಹೃದಯದಲ್ಲಿರುವ ತೊಂದರೆಗಳನ್ನು ಕಂಡುಹಿಡಿಯಬಹುದು. ಹೃದಯದ ರಕ್ತನಾಳದಲ್ಲಿ ಏನಾದರೂ ಅಡೆತಡೆಗಳಿದ್ದರೆ ಇಸಿಜಿಯಲ್ಲಿ ಏರುಪೇರು ಕಂಡು ಬರುತ್ತದೆ. ಅದರಿಂದ ಶೀಘ್ರ ಚಿಕಿತ್ಸೆ ಸಾಧ್ಯವಾಗಲಿದೆ. ಆದ್ದರಿಂದ ವೈದ್ಯಕೀಯ ವೃತ್ತಿಯಲ್ಲಿರುವವರು ಮುಖ್ಯವಾಗಿ ಪ್ರಾಥಮಿಕ ಚಿಕಿತ್ಸಾ ಮತ್ತು ರೋಗಪತ್ತೆ ವಿಧಾನಗಳನ್ನು ಅರಿತವರಾಗಿರಬೇಕು ಎಂದು ಸಲಹೆ ನೀಡಿದರು.
ಡಾ. ರಾಜು ಬಡಿಗೇರ ಅವರು ಮಾತನಾಡಿ, ಹೃದಯದ ಆರೋಗ್ಯ ರಕ್ಷಣೆ, ರೋಗ ಕಂಡುಹಿಡಿಯುವಿಕೆ ಸುಗಮವಾಗಿದೆ. ಹೃದಯಾಘಾತ ಇರುವ ಲಕ್ಷಣಗಳನ್ನು ತಕ್ಷಣವೇ ಗುರುತಿಸಿ, ತಡಮಾಡದೇ ಇಸಿಜಿ ಮಾಡಿಸಿಕೊಳ್ಳಬೇಕು. ಇದರಿಂದ ಸರಿಯಾದ ಚಿಕಿತ್ಸೆ ಸಾಧ್ಯವಾಗಲಿದೆ. ಆದರೆ ಎದೆನೋವು ಕಾಣಿಸಿಕೊಂಡರೂ ಕೂಡ ಜನರು ವೈದ್ಯರಿಂದ ತಪಾಸಿಸಿಕೊಳ್ಳದೇ ನಿರ್ಲಕ್ಷಿಸುತ್ತಾರೆ. ಇದರಿಂದ ಅಪಾಯ ಉಂಟಾಗಬಹುದು ಎಂದು ತಿಳಿಸಿದರು.
ಡಾ. ವಿ ಎ ಕೋಠಿವಾಲೆ ಹಾಗೂ ಡಾ. ರೇಖಾ ಪಾಟೀಲ ಅವರು ಮಾತನಾಡಿದರು. ಈ ಕಾರಾ್ಯಗಾರವು 3 ದಿನಗಳ ಕಾಲ ನಸಡೆಯಿತು. ಈ ಸಂದರ್ಭದಲ್ಲಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ, ಜೆಎನಎಂಸಿ ಉಪಪ್ರಚಾರ‌್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ, ಡಾ. ಮಾಧವ ಪ್ರಭು, ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ಆರಿಫ್ ಮಾಲ್ದಾರ, ಡಾ. ಅಂಜಲಿ ಮೆಟಗುಡಮಠ, ಡಾ. ಆರತಿ ದರ್ಶನ್ ಅವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 