ಬಡತನದಲ್ಲೇ ಎಂಬಿಬಿಎಸ್ ಮುಗಿಸಿದ ಡಾ.ಎನ್.ಗೀತಾ
Dr. N. Geetha, who completed her MBBS in poverty
ಲೋಕದರ್ಶನ ವರದಿ
ಕಂಪ್ಲಿ 29 : ವಿದ್ಯೆಗೆ ಬಡತನ ಅಡ್ಡಿ ಇಲ್ಲ ಎಂಬಂತೆ ಇಲ್ಲಿನ ವಿದ್ಯಾರ್ಥಿನಿ ತನ್ನ ಬಡವನವನ್ನೇ ಮೆಟ್ಟಿ ಶಿಕ್ಷಣ ಎಂಬ ರಂಗದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಡಾಕ್ಟರ್ರೇಟ್ ಪದವಿಯನ್ನು ರಾಯಚೂರು ನಗರದಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್)ಯಲ್ಲಿ ಮುಗಿಸಿದ್ದಾಳೆ. ಹೌದು...! ಕಂಪ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಗೇಟ್ ಬಳಿಯಲ್ಲಿ ಜೀವನದುದ್ದಕ್ಕೂ ಸಣ್ಣ ಹೋಟಲ್ನಲ್ಲೇ ಜೀವನ ಕಳೆಯುತ್ತಿರುವ ಸರಸ್ವತಿ ವೆಂಕಟೇಶ ದಂಪತಿಯ ಪುತ್ರಿ ಡಾ.ಎನ್.ಗೀತಾ ಎಂಬಿಬಿಎಸ್ ಮುಗಿಸಿ, ಇನ್ನೇನು ಪೋಷಕರು ಕನನು ನನಸು ಮಾಡಿದ್ದಾಳೆ. ನಮಗೆ ಏನೇ ಕಷ್ಟ ಬಂದರೂ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲದಿಂದ ಇಲ್ಲಿನ ಕಿರು ಹೋಟಲ್ ನಡೆಸಿಕೊಂಡು ಮಗಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಿರುವುದು ಮಾದರಿಯಾಗಿದೆ.
ದಿನದಿನತ್ಯದ ಕಷ್ಟ : ನಮ್ಮ ಪೋಷಕರು ದಿನನಿತ್ಯ ಹೋಟಲ್ನಲ್ಲಿ ಮಾಡುತ್ತಿರುವ ಕಷ್ಟವನ್ನು ನೋಡಿ, ಹೇಗಾದರೂ ಮಾಡಿ, ನಾನು ಒಳ್ಳೆಯ ಶಿಕ್ಷಣ ಪಡೆದು, ಪೋಷಕರಿಗೆ ಒಂದೊಳ್ಳೆ ಹೆಸರು ತರಬೇಕೆಂಬ ನಿಟ್ಟಿನಲ್ಲಿ ಕಂಪ್ಲಿ ಪಟ್ಟಣದಲ್ಲಿ ಪಾಥಮಿಕ, ಹಿರಿಯ ಪ್ರೌಢಶಾಲಾ ಶಿಕ್ಷಣವನ್ನು ಉತ್ತಮ ಮಟ್ಟದಲ್ಲಿ ಸಾಧನೆ ಪಡೆದಿದ್ದಾಳೆ. ನಂತರ ಪೌಢಶಾಲಾ ವಿದ್ಯಾಭ್ಯಾಸವನ್ನು ಕಂಪ್ಲಿ ನಗರ ಚೇತನವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಗಿಸುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಶೇ.98ಅ ರಷ್ಟು ಫಲಿತಾಂಶದ ಸಾಧನೆ ತನ್ನದಾಗಿಸಿಕೊಂಡಿದ್ದಾಳೆ. ತದನಂತರ ಬಳ್ಳಾರಿಯ ಶ್ರೀಚೈತನ್ಯ ಕಾಲೇಜಿನಲ್ಲಿ ದ್ವಿತೀಯ ವ್ಯಾಸಾಂಗದಲ್ಲಿ ಶೇ.92ರಷ್ಟು ಅಂಕ ಪಡೆದುಕೊಂಡಿದ್ದಾಳೆ. ನಂತರ ಓದಿನಲ್ಲಿನ ನಿರಂತರ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ 528 ಅಂಕಗಳೊಂದಿಗೆ ಎಂಬಿಬಿಎಸ್ ಸೀಟ್ಗೆ ಆಯ್ಕೆಗೊಂಡಿದ್ದಾಳೆ.
ಈಗ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ವೈದ್ಯರಾಗಿದ್ದಾರೆ. ತಮ್ಮ ಕನಸಿನಂತೆ ಶಿಕ್ಷಕರ, ಉಪನ್ಯಾಸಕರ ಪಾಠ, ಪ್ರವಚನದ ಜೊತೆಗೆ ನಿರಂತರ ಓದಿನಿಂದಾಗಿ ಇಂದು ಡಾಕ್ಟರೇಟ್ ಪದವಿ ಮುಗಿಸುವ ಕನಸು ನನಸು ಮಾಡಿದ ಸಾಧನೆ ಗೀತಾಳದ್ದಾಗಿದೆ. ಡಾ.ಎನ್.ಗೀತಾ ಮಾತನಾಡಿ, ನಮ್ಮ ಪೋಷಕರು ಫುಟ್ಬಾತ್ನಲ್ಲಿ ಸಣ್ಣದೊಂದು ಹೋಟಲ್ ಇಟ್ಟುಕೊಂಡು, ಇಲ್ಲಿತನದ ಓದಲು ಸಾಕಷ್ಟು ಅನುವು ಮಾಡಿಕೊಟ್ಟಿದ್ದಾರೆ. ಅವರ ಕಷ್ಟಗಳನ್ನು ಅರಿತು, ಹೇಗಾದರೂ ಮಾಡಿ ನಾನು ವೈದ್ಯೆಯಾಗಬೇಕೆಂಬ ಕನಸಿನೊಂದಿಗೆ ನಿರಂತರವಾಗಿ ಓದಿನ ಕಡೆಗೆ ಹೆಚ್ಚು ಒತ್ತು ನೀಡಿದ್ದೇನೆ. ಇದರಿಂದ ಈಗ ಎಂಬಿಬಿಎಸ್ ಮುಗಿಸಲು ಸಾಧ್ಯವಾಗಿದೆ. ಇನ್ನೇನು ವೈದ್ಯಳಾಗಿ ಜನರ ಸೇವೆ ಮಾಡುತ್ತೇನೆ ಎಂದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 