ದಿ. 28 ರಂದು ಸುಕ್ಷೇತ್ರ ಯೆಡೂರು ಗ್ರಾಮಕ್ಕೆ ಡಾ. ಮೋಹನ ಭಾಗವತ್‌ಜಿ ಭೇಟಿ

ದಿ. 28 ರಂದು ಸುಕ್ಷೇತ್ರ ಯೆಡೂರು ಗ್ರಾಮಕ್ಕೆ ಡಾ. ಮೋಹನ ಭಾಗವತ್‌ಜಿ ಭೇಟಿ Dr. Mohan Bhagwatji visits Sukshetra Yedur village on 28th

ಲೋಕದರ್ಶನ ವರದಿ 

ಮಾಂಜರಿ 27: ದಕ್ಷಿಣ ಕಾಶಿ ಎಂದು ಪ್ರಖ್ಯಾತವಾಗಿರುವ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಹಲವಾರು ಭಕ್ತಾದಿಗಳ ಶ್ರದ್ಧಾ ಸ್ಥಾನವಾಗಿರುವ ಸಮೀಪದ ಸುಕ್ಷೇತ್ರ ಯೆಡೂರು ಗ್ರಾಮಕ್ಕೆ ದಿ. 28 ರಂದು ಬೆಳಿಗ್ಗೆ 8.45 ಕ್ಕೆ. ಆರ್‌ಎಸ್‌ಎಸ್‌ನ ಸರಸಂಘ ಸಂಚಾಲಕರಾದ ಡಾ. ಮೋಹನ ಭಾಗವತ್‌ಜಿ ಆಗಮಿಸಲಿದ್ದು, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗುರುಕುಲ ಸಭಾಭವನದ ಉದ್ಘಾಟಣೆ, ಗೋ ತುಲಾಭಾರ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಬೆಳಿಗ್ಗೆ 10 ಗಂಟೆಗ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಯುವಕರಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ. 

ಅವರು ಇಂದು ಸಮೀಪದ ಸುಕ್ಷೇತ್ರ ಯಡೂರಿನ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಎರಿ​‍್ಡಸಿದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳು, ನೂಲದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳು. ಆರ್‌.ಎಸ್‌.ಎಸ್‌. ಚಿಕ್ಕೋಡಿ ವಿಭಾಗ ಕಾರ್ಯವಾಹಕ ಸಂಜಯ ಅಡಕೆ, ಅ.ಭಾ.ವೀ.ಮ, ಸಭಯ ಜಿಲ್ಲಾದ್ಯಕ್ಷ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಡಾ. ಭಾಗವತಜ ಅವರು ಮುಂಜಾನೆ 8.45 ರಿಂದ ಮದ್ಯಾನ 2.30 ರವರೆಗೆ ಯಡೂರಿನಲ್ಲಿರುವರು, ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಸಂಘದ ಕಾರ್ಯ ಮತ್ತು ಮಹಾರಾಷ್ಟ್ರ, ಆಂಧ್ರ ಮತ್ತು ಕರ್ನಾಟಕದಲ್ಲಿ ವೀರಶೈವ ಅಂಗಾಯತ ಸಮುದಾಯದ ಕೊಡುಗೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನೂಲಿನ ಗುರು ಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿಗಳು, ಶ್ರೀಕಾಂತ ಉಮರಾಣಿ, ಶಿವಾನಂದ್ ಹಕಾರೆ , ಅಡವಯ್ಯಾ ಅರಳಿಕಟ್ಟಿಮಠ, ಮುತ್ತಯ್ಯಾ ಮಠದ ವಿಶ್ವರಾಧ್ಯ ಹಿರೇಮಠ  ಸೇರಿದಂತೆ ಆರ್‌.ಎಸ್‌.ಎಸ್‌. ನ ಪದಾಧಿಕಾರಿಗಳು ಉಪಸ್ಥಿತರಿದ್ದರು.