ಡಾ. ಮನೋಜಿತ್ ಎಸ್.ಎಸ್ ಅವರು ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ
Dr. Manojit S.S. selected for Bharat Seva Ratna award
ಬೆಂಗಳೂರು 31 : ಕರ್ನಾಟಕ ಪ್ರೆಸ್ ಕ್ಲಬ್ ಪ್ರತಿ ವರ್ಷವು ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ. 2025ನೇ ಸಾಲಿನ ಸಾಧಕರ ಸಮಾಗಮ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ 2026ನೇ ಜನವರಿ 13 ರಂದು ಸಂಜೆ 4.30 ಗಂಟೆಗೆ ರಾಜ್ಯದ ಗಣ್ಯರ ವೇದಿಕೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಾಡಿನ 11 ಸಾಧಕರಿಗೆ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಪವಾಡ ಬಸವಣ್ಣ ದೇವರ ಮಠದ ಪೀಠಾದ್ಯಕ್ಷರಾದ ಸಿದ್ದಲಿಂಗ ಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ವಿರೋಧ ಪಕ್ಷದ ಮುಖಂಡರಾದ ಆರ್.ಅಶೋಕ ಮತ್ತು ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ ಸೇರಿದಂತೆ ಹಲವಾರು ಮುಖ್ಯ ಅತಿಥಿಗಳ ಅಮೃತ ಹಸ್ತದಿಂದ ವಿತರಿಸಲಾಗುತ್ತದೆ.
ರಾಜ್ಯದ ಸಾಧಕ ರತ್ನಗಳಲ್ಲಿ ಒಂದಾಗಿ ಡಾಽಽ ಮನೋಜಿತ್ ಎಸ್.ಎಸ್ ರವರು ಬೆಂಗಳೂರು ನಗರದಲ್ಲಿ 1988ರಲ್ಲಿ ಜನಿಸಿ ಎಂ.ಬಿ.ಬಿ.ಎಸ್,ಎಂ.ಎಸ್ ಅಧ್ಯಯನ ಮುಗಿಸಿ ಉನ್ನತ ತರಬೇತಿ ಪಡೆದು ಹಲವಾರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೆ 15000ಕ್ಕೂ ಹೆಚ್ಚು ಶಸ್ತೊ ಚಿಕಿತ್ಸೆಗಳನ್ನು ಮಾಡಿ ರೋಗಿಗಳ ಪ್ರಾಣ ಉಳಿಸಿದ್ದಾರೆ. ಅತ್ಯಂತ ನುರಿತ ಶಸ್ತೊ ಚಿಕಿತ್ಸಕರಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಖ್ಯಾತಿಗಳಿಸಿದ್ದಾರೆ.ವೈಧ್ಯಕೀಯ ಸೇವೆ ಮತ್ತು ವೃತ್ತಿ ಅನುಭವಕ್ಕಾಗಿ ಕರ್ನಾಟಕ ಪ್ರೆಸ್ ಕ್ಲಬ್ನಢ ಭಾರತ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಆಯ್ಕೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 