70ನೇ ರಾಜ್ಯೋತ್ಸವದ ಅಂಗವಾಗಿ ಸಾಧಕರಾದ ಡಾ.ಮಹೇಶ ವಾಳ್ವೇಕರಿಗೆ ಸನ್ಮಾನ
Dr. Mahesh Walvekar, a distinguished scholar, was felicitated as part of the 70th Rajyotsava.
ಲೋಕದರ್ಶನ ವರದಿ
70ನೇ ರಾಜ್ಯೋತ್ಸವದ ಅಂಗವಾಗಿ ಸಾಧಕರಾದ ಡಾ.ಮಹೇಶ ವಾಳ್ವೇಕರಿಗೆ ಸನ್ಮಾನ
ಧಾರವಾಡ 09: ಕನ್ನಡದ ಗುಡಿ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಬೇರನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಈ ಸಂಘ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ.ಮಹೇಶ ವಾಳ್ವೇಕರ ಅಭಿಪ್ರಾಯಪಟ್ಟರು.
ಅವರು ದಿ: 08-11-2025 ರಂದುಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕವಿವ ಸಂಘವು ಕನ್ನಡ ಭಾಷೆ, ನೆಲ, ಗಡಿ ವಿಷಯದಲ್ಲಿ ಅನ್ಯಾಯವಾದಾಗ ಕನ್ನಡ ಪರಧ್ವನಿ ಎತ್ತಿಕನ್ನಡಿಗರಿಗೆ ನ್ಯಾಯ ಒದಗಿಸಿದ್ದು ಕನ್ನಡಿಗರಾದ ನಾವು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಉದಾಸೀನ ಮನೋಭಾವ ಹೊಂದಬಾರದು. ರಾಜಧಾನಿ ಬೆಂಗಳೂರಲ್ಲಿ ಕನ್ನಡಿಗರ ಸಂಖ್ಯೆಯೇ ಶೇ.21 ಆದರೆಅನ್ಯ ಭಾಷಿಕರ ಸಂಖ್ಯೆ ಶೇ.79 ಕನ್ನಡದ ನೆಲದಲ್ಲಿಕನ್ನಡಿಗರ ಮನಸ್ಸು ಒಂದಾಗಬೇಕು.
ಕವಿವ ಸಂಘವು ದಕ್ಷಿಣ ಕರ್ನಾಟಕದ ಕಡೆ ತನ್ನಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಬೇಕು. ಅಂದಾಗ ಕನ್ನಡಿಗರಲಿ ್ಲಜಾಗೃತಿ ಮೂಡಿಸಲು ಸಾಧ್ಯ. ಸಾರ್ವಜನಿಕರು ಸರ್ಕಾರದ ಯೋಜನೆ, ರೂಪರೇಷೆಗಳ ಪೂರಕ ಅಭಿವೃದ್ದಿಗೆ ಸಂಬಂಧ ಪಟ್ಟಂತಹ ಮಾಹಿತಿ ಕೇಳಿದಾಗ ಮಾಹಿತಿ ಆಯುಕ್ತರಾಗಿ ತಾವು ಸಾರ್ವಜನಿಕರ ಹಾಗೂ ಸರ್ಕಾರದ ನಡುವೆ ಸಮನ್ವಯತೆಯ ಕೊಂಡಿಯಾಗಿ ಕಾರ‌್ಯನಿರ್ವಹಿಸುತ್ತಿದ್ದೇನೆಎಂದು ಹೇಳಿದರು.
ಹು-ಧಾ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾದ ಅರವಿಂದ ಜಮಖಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಭಾಷೆ ಶಕ್ತಿಯುತ ಭಾಷೆ, ಭಾಷೆಯ ಉಳಿವಿಗಾಗಿ ನಾವೆಲ್ಲಾ ಶಕ್ತಿಶಾಲಿಗಳಾಗಿ ದುಡಿಯಬೇಕು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಉದಾತ ಭಾವನೆ ಸಾಕಾರಗೊಳಿಸಲು ಯುವಕರು ಶ್ರದ್ಧೆ ಪೂರ್ವಕಕಾರ‌್ಯ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿದಾಸ ಶ್ರೇಷ್ಠ ಭಕ್ತಕನಕದಾಸರ 534 ಜಯಂತಿ ಪ್ರಯುಕ್ತಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪ್ರಾರಂಭದಲ್ಲಿ ಡಾ.ಸದಾಶಿವ ಐಹೊಳೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾ ಸಾಥ್ ಪ್ರಸಾದ ಮಡಿವಾಳರ ಹಾಗೂ ತಂಡದವರು ಸಾಥ್ ನೀಡಿದರು.
ಸೀತಾ ಛಪ್ಪರ ನೇತೃತ್ವದಅಭಿವ್ಯಕ್ತಿ ಕಲಾ ತಂಡದಿಂದ ನೃತ್ಯರೂಪಕ ಹಾಗೂ ಭರತನಾಟ್ಯಕಾರ್ಯಕ್ರಮಜರುಗಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವೇದಿಕೆಯಲ್ಲಿದ್ದರು.ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿ, ವಂದಿಸಿದರು. ಸತೀಶತುರಮರಿ ಸನ್ಮಾನ ಪತ್ರಓದಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣಒಡ್ಡೀನ, ಡಾ.ಜಿನದತ್ತ ಅ. ಹಡಗಲಿ, ಗುರು ಹಿರೇಮಠ, ಡಾ. ಚಿದಾನಂದ ಮನ್ಸೂರ, ಎಸ್.ಬಿ. ಕೊಡ್ಲಿ, ಗೀರೀಶ ಪದಕಿ, ಬೆಂಗೇರಿ, ಎಂ.ಎಂ.ಚಿಕ್ಕಮಠ, ಡಾ.ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಶಿವಾನಂದ ಹೂಗಾರ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 