ಡಾ. ಎಂ. ಎನ್‌. ಸತ್ಯನಾರಾಯಣರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಡಾ. ಎಂ. ಎನ್‌. ಸತ್ಯನಾರಾಯಣರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ  Dr. M. N. Satyanarayana receives the Best Teacher Award

ಬೆಳಗಾವಿ 08: ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಡಾ.ಎಂ.ಎನ್‌. ಸತ್ಯ ನಾರಾಯಣ ಅವರಿಗೆ ಬೆಂಗಳೂರು ಗಾಂಧಿ ಭವನದಲ್ಲಿ ಪ್ರೆಸ್ ಕ್ಲಬ್ ವೆಲ್ಫೇರ್ ವರ್ಲ್ಡ ವೈಡ್ ಫೌಂಡೇಶನ್ ಅವರು ಆಯೋಜಿಸಿದ್ದ ಅಂತರಾಷ್ಟ್ರೀಯ ಸಾಮಾಜಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಅಮೇರಿಕಾ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಹಾಗೂ ಸಮಾಜ ಕಲ್ಯಾಣ ನಿರ್ವಹಣೆಯಲ್ಲಿ ಚಿನ್ನದ ಪದಕ ಪುರಸ್ಕೃತ ಡಾ. ರಾಜಕುಮಾರ್ ಭಾರದ್ವಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಅವರು ಮಾತನಾಡುತ್ತ ’ಹೊಸ ಹೊಸ ಸಾಹಿತಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಈ ಸಂಸ್ಥೆ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.   

ಮುಂದೆ ಮಾತನಾಡುತ್ತ ಡಾ. ಭಾರದ್ವಾಜ್ ಅವರು ಬೆಳಗಾವಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿರುವ ಅಲ್ಲದೇ ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕರಾದ ಡಾ. ಎಂ. ಎನ್‌. ಸತ್ಯನಾರಾಯಣ ಅವರು ಸಂಗೀತ ಸೇವೆಗಾಗಿಯೇ ತಮ್ಮ ಜೀವನವನ್ನು ಸಮರ​‍್ಿಸಿಕೊಂಡವರು. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಹಿರಿಮೆ ಸತ್ಯನಾರಾಯಣರದ್ದು. ಇವರ ಅಮೂಲ್ಯ ಸೇವೆಗಾಗಿ ಪ್ರೆಸ್ ಕ್ಲಬ್ ವೆಲ್ಫೇರ್ ವೆಲ್ರ್ಡ್ವೈಡ್ ಫೌಂಡೇಶನ್ ಸಂಸ್ಥೆಯಿಂದ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲು ನನಗೆ ಹೆಮ್ಮೆ ಅನ್ನಿಸುತ್ತದೆ ಎಂದು ಅವರು ಹೇಳಿದರು.