‘ಧರೆಗೆದೊಡ್ಡವರು’ ಕಾರ್ಯಕ್ರಮದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತಾನಾಡಿದ ಡಾ. ಲೀಲಾದೇವಿ
Dr. Leela Devi spoke about the role of women in the ‘Dharege Doddavaru’ program
ಧಾರವಾಡ 13: ಭಾರತ ಮಹಿಳಾ ಪ್ರಧಾನದೇಶವಾಗಬೇಕು. ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ದೊರೆತಾಗ ಮಾತ್ರ ಅದು ಸಾಧ್ಯ ಎಂದು ಕರ್ನಾಟಕದ ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ್ ಅಭಿಪ್ರಾಯಪಟ್ಟರು.
ಅವರು ದಿ: 12-11-2025 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ‘ಧರೆಗೆದೊಡ್ಡವರು’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಎದುರಾದ ಸಮಸ್ಯೆಗಳಿಗೆ ಧೃತಿಗೆಡಬಾರದು. ಗುಲಾಬಿ ಹೂವು ಮುಳ್ಳುಗಳನ್ನು ಅಳುಕಿಲ್ಲದೇ ಎದುರಿಸಿ ಅರಳಿ ಸುವಾಸನೆ ಬಿರುವ ಗುಲಾಬಿಯಂತೆ ಇರಬೇಕು.ಛಲ ಹಾಗೂ ಆತ್ಮಬಲಗಳು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು. ಎಲ್ಲರಂತೆ ಸುಮ್ಮನೆ ಬದುಕದೇ ಎಲ್ಲರಿಗಾಗಿ ಬದುಕಬೇಕೆಂದು ಯಾವ ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಪಠ್ಯಕ್ರಮವಿಲ್ಲ. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಶಿಲ್ಪಿಗಳು ನೀವೇ ಆಗಬೇಕು. ನಿಮ್ಮ ಸಾಮರ್ಥ್ಯವನ್ನು ನೀವೇ ರೂಪಿಸಿಕೊಳ್ಳಬೇಕೆ ವಿನಹ ಬೇರೆಯವರು ರೂಪಿಸುತ್ತಾರೆಯೇ?
ನಾನು ನನ್ನ ಅತ್ಯಂತಕಿರಿಯ ವಯಸ್ಸಿನಲ್ಲಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವಳು. ವಿಧಾನಸಭೆ, ಸಂಸತ್ತಿನ ಒಳಗೂ ಹಾಗೂ ಹೊರಗೂ ನಿಷ್ಠುರತೆ, ನಿರ್ಭಿಡೆಯಿಂದಲೇ ನಡೆದುಕೊಂಡಿದ್ದೇನೆ. ನನ್ನ ನೇರ ದಿಟ್ಟ ಮಾತಿಗೆ ನನ್ನನ್ನು ಶಾಸನ ಸಭೆಯಲ್ಲಿ ಚನ್ನಮ್ಮನೆಂದೆ ಕರೆಯಲಾಗುತ್ತಿತ್ತು. ಇಂದು ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಮಹಿಳೆಯನ್ನೇ ಹೊಣೆಗಾರಳನ್ನಾಗಿ ಮಾಡುತ್ತಿರುವುದು ಸರಿ ಸಲ್ಲ. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಷ್ಟೇ.ಇಂದು ವಿದ್ಯಾರ್ಥಿಗಳಾದ ನೀವೇ ಬುದ್ಧಿವಂತರು. ಹಾಗಾಗ ಬೇಕೆಂಬುದು ನನ್ನ ಬಯಕೆ. ನಮ್ಮ ಭಾವನೆಗಳಲ್ಲಿ ಇಂದು ಸಮಾನತೆ ಬರಬೇಕಿದೆ. ನನ್ನ 70 ವರ್ಷಗಳ ರಾಜಕೀಯ ಜೀವನದಲ್ಲಿ ಏನೆಲ್ಲಾ ಕಂಡಿದ್ದೇನೆ. ಮಹಿಳಾಪರ ಧ್ವನಿ ಎತ್ತಿ ಸಮಾಜಮುಖಿ ಕಾರ್ಯ ಮಾಡಿದ್ದೇನೆ. ವಿದ್ಯಾರ್ಥಿಗಳ ಬದುಕು ಇಂದು ಭವ್ಯವಾಗಿರುವುದು ಬೇಡ, ದಿವ್ಯವಾಗಿರಲಿ ಎಂದು ಶುಭ ಹಾರೈಸಿದರು.
ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಧರೆಗೆದೊಡ್ಡವರನ್ನು ಪರಿಚಯಿಸಿ, ಡಾ. ಲೀಲಾವತಿಆರ್. ಪ್ರಸಾದಅವರದು ಸುಸಂಸ್ಕೃತ ಕುಟುಂಬ.ತಂದೆ ಹಾಗೂ ಪತಿ ನೀಡಿದ ಸಂಸ್ಕಾರದಿಂದ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದಾರೆ. ಅವರುಯಾರ ಹಂಗಿಲ್ಲದೇ ಸ್ವಾಭಿಮಾನದ ಬದುಕು ಸಾಗಿಸಿದವರು.ತಂದೆ ಜಿಲ್ಲಾಧಿಕಾರಿಯಾಗಿದ್ದರೂ ತಂದೆಯ ಪದವಿಯನ್ನು ಕೀರೀಟವನ್ನಾಗಿ ಮಾಡಿಕೊಳ್ಳದೇ ಬದುಕಿ ಸಾಧನೆ ಮಾಡಿದ್ದಾರೆ. ಅವರದು ಸುಮಧುರ ದಾಂಪತ್ಯಜೀವನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ.ವಿ.ವ. ಸಂಘಕ್ಕೆ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಡಾ.ತಮಿಳ ಸೆಲ್ವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಮಲಾ, ಸುಜಾತಾ ಇದ್ದರು. ಹರ್ಲಾಪೂರದ ಸಿ.ವಾಯ್.ಸಿ.ಡಿ. ಕಲಾವಿದರುಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ, ಗಣೇಶಅಮೀನಗಡ, ಎಂ.ಎಂ. ಚಿಕ್ಕಮಠ, ಎಚ್.ಜಿ.ದೇಸಾಯಿ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 