ಡಾ.ಕೋಲ್ಕಾರ್‌ರ ಕಿರುಹೊತ್ತಿಗೆ ಬಿಡುಗಡೆ
Dr. Kolkar's booklet released
ಡಾ.ಕೋಲ್ಕಾರ್‌ರ ಕಿರುಹೊತ್ತಿಗೆ ಬಿಡುಗಡೆ
ಕೊಪ್ಪಳ 02 :ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಕೊಪಣನಾಡು ಸಂಶೋಧನಾ ಸಂಸ್ಥೆ, ಗಂಗಾವತಿಇವರ ಸಂಯುಕ್ತಾಶ್ರಯದಲ್ಲಿಗಂಗಾವತಿಯ ಸಂಶೋಧಕರು ಹಾಗೂ ಪ್ರಾಚಾರ್ಯರಾದ ಡಾ.ಶರಣಬಸಪ್ಪಕೋಲ್ಕಾರ್‌ಇವರ ‘ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿ ಸೆರೆಮನೆ’ ಎಂಬ ಸಂಶೋಧನಾಕಿರುಹೊತ್ತಿಗೆ ರವಿವಾರರಂದು ಕೊಪ್ಪಳ ನಗರದಕುಷ್ಟಗಿ ರಸ್ತೆಯಲ್ಲಿರುವಸಪ್ತಗಿರಿ ಸಹ್ಯಾದ್ರಿ ನಿವಾಸದಲ್ಲಿಬಿಡುಗಡೆಗೊಳ್ಳಲಿದೆ. ಕೃತಿಯನ್ನು ನಿವೃತ್ತ ಪ್ರಾಧ್ಯಪಕರಾದಡಾ.ಬಸವರಾಜ ಪೂಜಾರ್‌ಇವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಹಾಗೂ ಗ್ರಂಥದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರ್ ವಹಿಸಿಕೊಳ್ಳಲಿದ್ದಾರೆ.ಪ್ರಾಧ್ಯಾಪಕರಾದ ಪ್ರೊ.ಶರಣಬಸಪ್ಪ ಬಿಯಲೆಯವರುಕೃತಿಯಕುರಿತು ಮಾತನಾಡಲಿದ್ದಾರೆ.ಕೃತಿಯ ಲೇಖಕರಾದಡಾ.ಶರಣಬಸಪ್ಪಕೋಲ್ಕಾರ್ ಹಾಗೂ ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತಿಯಾಗಲಿದ್ದಾರೆಂದು ಮೇಘನಾ ಪ್ರಕಾಶನದ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 