ಡಾ.ಕೈಲಾಸನಾಥರಿಗೆ ಪ್ರತಿಷ್ಠಿತ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಲಭಿಸಿದ್ದು ಸಾಧನೆಗೆ ದೊರೆತ ಗೌರವ
Dr. Kailasanath receives the prestigious Jagadguru Renukacharya Award, an honor for his achievements
ಕೊಲ್ಹಾರ 28 : ಯುನೈಟೆಡ್ ರಾಷ್ಟ್ರ ಸೇವಾ ಫೌಂಡೇಶನ್ ಕರ್ನಾಟಕ ಹಾಗೂ ಕ್ಷೇತ್ರ ಧರ್ಮದ್ವಜ ಪ್ರತಿಷ್ಠಾನ ಬೆಂಗಳೂರ ಇವರು ಕೊಡ ಮಾಡುವ 2025-26ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಆವಾರ್ಡ "ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ" ಕೋಲ್ಹಾರ ಪಟ್ಟಣದ ಘಣ ಮಹಿಮ ಪೂರ್ಣಜ್ಞ ಧರ್ಮರತ್ನ ಭಾರತ ಭೂಷಣ ಡಾ.ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತ ಹಿರೇಮಠ ಪೂಜ್ಯರಿಗೆ ಲಭಿಸಿದೆ, ಈ ಪ್ರಶಸ್ತಿಯು 25 ಸಾವಿರ ರೂಪಾಯಿಯ ನಗದು ಸಹಿತ ಪುರಸ್ಕಾರ ಒಳಗೊಂಡಿದೆ, ಪೂಜ್ಯರು ನಾಡಿನಾದ್ಯಂತ ಧರ್ಮ ಪ್ರಚಾರ ಕಾರ್ಯ ನಿರ್ವಹಿಸುತ್ತ ಆಧ್ಯಾತ್ಮಿಕತೆಯ ಭೋಧನೆ ನೀಡುವ ಮೂಲಕ ಸರ್ವ ಧರ್ಮದ ಸಿದ್ಧಾಂತ ಮೈಗೂಡಿಸಿಕೊಂಡು ಸನಾತನ ಧರ್ಮ ಪರಂಪರೆಯ ಸಂದೇಶ ಸಾರುವ ಮೂಲಕ ತಮ್ಮದೆಯಾದ ಘಣತೆಯೊಂದಿಗೆ ಕೊಲ್ಹಾರ ಪಟ್ಟಣದ ಕೀರ್ತಿಯನ್ನು ಹೆಚ್ಚಿಸುವ ಶ್ರೀಗಳಿಗೆ ಈಗಾಗಲೆ ಬಸವಜ್ಞಾನ ಪ್ರವಚಣ ಭಾಸ್ಕರ, ಹಾನಗಲ್ಲ ಗುರು ಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ, ಸ್ವಾತಂತ್ರ್ಯ ಹೋರಾಟಗಾರ ವೀರಸೇನಾನಿ ವೀರಸಾವರ್ಕರ್ ಸಮ್ಮಾನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಡಾ ಎಪಿಜೆ ಅಬ್ದುಲ್ ಕಲಾಂ ಎಕ್ಸಲೇನ್ಸ ರಾಷ್ಟ್ರೀಯ ಆವಾರ್ಡ, ಇಂಡಿಯನ್ ಆಯ್ಕಾನ ಆವಾರ್ಡ ಪ್ರದಾನವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ದೇಹಲಿಯ ರಾಷ್ಟ್ರೀಯ ಸಂತರ ಚಿಂತನ ಮಂಥನ ನಡೆದಾಗ ಜಗಜ್ಯೋತಿ ಬಸವೇಶ್ವರ ಸಂಪೂರ್ಣ ಬಸವ ಪುರಾಣ 48 ನಿಮೀಷದಲ್ಲಿ ಪಾರಾಯನ ಮಾಡಿ ವಿಶ್ವ ಧಾಖಲೆಯಾಗಿ ರಿಯಾಲಿಟಿ ಬುಕ್ ಆಫ್ ವರ್ಡ ರೆಕಾರ್ಡ್ ಗಿನ್ನಿಸ್ ದಾಖಲೆ ಸೇರೆ್ಡಯಾದದ್ದು ಬಸವ ನಾಡಿನ ಹೆಮ್ಮೆ ಕೊಲ್ಹಾರ ಪಟ್ಟಣದ ಕೀರ್ತಿಯನ್ನು ತಂದ ಪೂಜ್ಯರಿಗೆ ಪ್ರತಿಷ್ಠಿತ "ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ"ಯು ಲಭಿಸಿದ್ದು ಶ್ರೀಗಳ ಸಾಧನೆಗೆ ದೊರೆತ ಗೌರವ ಎಂದು ಪಟ್ಟಣದ ಗುರು ಹಿರಿಯರು ಶಿಷ್ಯ ಬಳಗ ಹರ್ಷ ವ್ಯಕ್ತಪಡಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 