ವಚನ ಸಾಹಿತ್ಯ ಉಳಿಸಿದ ಡಾ. ಎಫ್‌.ಜಿ. ಹಳಕಟ್ಟಿ: ಶಿವಾನಂದ ಬೆಳಕೂಡ

ವಚನ ಸಾಹಿತ್ಯ ಉಳಿಸಿದ ಡಾ. ಎಫ್‌.ಜಿ. ಹಳಕಟ್ಟಿ: ಶಿವಾನಂದ ಬೆಳಕೂಡ Dr. F.G. Halakatti: The Preserver of Vachana Literature – Shivananda Belakuda

ರಾಯಬಾಗ  02: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸದೇ ಹೋಗಿದ್ದರೆ, ವಚನ ಸಾಹಿತ್ಯದ ಸಮಗ್ರ ದರ್ಶನ ನಮಗೆ ಆಗುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.ಗುರುವಾರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,

ಮನುಷ್ಯ ಹುಟ್ಟಿ ಬಂದ ನಂತರ ಏನಾದರೂ ಸಾಧನೆ ಮಾಡದೇ ಹೋದರೆ ಮನುಷ್ಯ ಜನ್ಮ ಸಾರ್ಥಕವಾಗುವುದಿಲ್ಲ ಎಂದರು.ನಿವೃತ್ತ ಪ್ರಾಚಾರ್ಯ ಡಾ.ಬಿ.ಎನ್‌.ಪಾಟೀಲ ಮಾತನಾಡಿ, ಎಲ್ಲೆಡೆ ಚದುರಿ ಹೋಗಿದ್ದ ಶಿವಶರಣರ ವಚನಗಳನ್ನು ಸಂಗ್ರಹಿಸಿ, ವಚನಗಳನ್ನು ರಚಿಸಿ ಅವುಗಳನ್ನು ಓದುಗರಿಗೆ ತಲುಪಿಸುವ ಕಾರ್ಯ ಮಾಡಿರುವ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕಾರ್ಯ ಸದಾ ಸ್ಮರಣೀಯವಾಗಿದೆ. ಅವರ ಕೃತಿಗಳು ಪ್ರತಿಯೊಬ್ಬ ಓದುಗರಿಗೆ ದೊರಕುವಂತೆ ಸರ್ಕಾರ ಮಾಡಬೇಕಾಗಿದೆ ಎಂದರು. 

ಗ್ರೇಡ್2 ತಹಸೀಲ್ದಾರ ಡಿ.ಎಸ್‌.ಜಮಾದಾರ, ಪರಮಾನಂದ ಮಂಗಸೂಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ, ಕೃಷಿ ಅಧಿಕಾರಿ ವಿನೋದ ಮಾವರಕರ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ಉಪನೋಂದಣಾಧಿಕಾರಿ ಎಮ್‌.ಆರ್‌.ಪಾಟೀಲ, ನಿವೃತ್ತ ಬಿಇಒ ಎಚ್‌.ಎ.ಭಜಂತ್ರಿ, ಬಿ.ಎಮ್‌.ಪಾಟೀಲ, ಪಿ.ಬಿ.ಮುನ್ಯಾಳ, ಅಶೋಕ ಅಂಗಡಿ, ಸಂಗಣ್ಣ ದತ್ತವಾಡೆ, ಎಮ್‌.ಕೆ.ಶೇತಸನದಿ, ಬಾಬಾಗೌಡ ಪಾಟೀಲ, ಅಪ್ಪಾಸಾಹೇಬ ಮುಗಳಖೋಡ, ವಿನಾಯಕ ಭಾಟೆ, ಬಿ.ಎನ್‌.ನರಗುಂದೆ, ಅಶೋಕ ದೇಶಿಂಗೆ, ಕುಮಾರ ಅವಳೆ, ಶ್ರೀಶೈಲ ಹೊಸೂರ, ಸಂಗಮೇಶ ಹಿರಿಯ್ಯಾಳ ಸೇರಿ ತಹಸೀಲ್ದಾರ ಕಾರ್ಯಾಲಯ ಸಿಬ್ಬಂದಿ ಮತ್ತು ಸಾಹಿತ್ಯಾಭಿಮಾನಿಗಳು ಇದ್ದರು.