ಡಾ. ಫ. ಗು.ಹಳಕಟ್ಟಿ ಜಯಂತಿ ಕಾರ‌್ಯಕ್ರಮ

ಡಾ. ಫ. ಗು.ಹಳಕಟ್ಟಿ ಜಯಂತಿ ಕಾರ‌್ಯಕ್ರಮ Dr. F. Gu. Halakatti Jayanti Program: Hubballi

ಹುಬ್ಬಳ್ಳಿ 21: ಖ್ಯಾತ ಸಂಶೋಧಕರು, ಸಾಹಿತಿ, ವಕೀಲರು, ವಚನ ಸಾಹಿತ್ಯದ ಪಿತಾಮಹ ಡಾ. ಫಕೀರ​‍್ಪ ಗುರುಬಸಪ್ಪ ಹಳಕಟ್ಟಿ, (ಡಾ. ಫ. ಗು. ಹಳಕಟ್ಟಿ) ಅವರ ಜಯಂತಿ ಅಂಗವಾಗಿ ದಾನೇಶ್ವರಿ ಸಂಗೀತ ವಿದ್ಯಾಲಯದಲ್ಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಲಾರೆ​‍್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಸಂಗೀತ, ವಚನಗಳನ್ನು ಹಾಡುವುದರ ಮೂಲಕ ಗೌರವಾರೆ​‍್ಣ ಸಲ್ಲಿಸಲಾಯಿತು. ಡಾ. ಫ. ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆ, ಲಿಂಗಾಯತ ಧರ್ಮ, ಮುಂತಾದ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಸ್ಮರಿಸಲಾಯಿತು.  

ಮುಖ್ಯ ಅತಿಥಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಮಕ್ಕಳು ಶಿಸ್ತು, ಸಮಯ ಪ್ರಜ್ಞೆಯನ್ನು ರೂಡಿಸಿಕೊಳ್ಳಬೇಕು. ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ಡಾ. ಫ. ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟಿದ್ದನ್ನು ಸ್ಮರಣೆ ಮಾಡಿದರು. ಡಾ. ಫ. ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಮಾಡಿದ ಅಮೋಘ ಕೊಡುಗೆಗೆ ಡಾ. ಫ. ಗು.ಹಳಕಟ್ಟಿ ಅವರಿಗೆ ವಚನ ಪಿತಾಮಹ ಎಂಬ ಗೌರವ ಸಂದಿದೆ ಎಂದು ಹೇಳಿದರು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ ಅವರು ವೇದಿಕೆ ಮೇಲಿದ್ದರು. ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾ ಜಾಬಿನ ಹಾಗೂ ಮಕ್ಕಳು ವಚನಗಳನ್ನು ಹಾಡಿದರು. ಪ್ರೊ ಉಮಾ ಕೇರಿ, ಕವಿತಾ ಎಂ.ಯು, ಡಾ. ಮಿನಲ್ ಸಾಳುಂಕೆ,  ಆವನಿ, ಶ್ರೇಯಾ, ಮಾನ್ಯ, ಹರ್ಷಿಕಾ, ಅನ್ವಿಕಾ, ತಾನ್ವಿ,  ಅನ್ವಿತಾ, ವೀಣಾ, ಸ್ನೇಹಾ, ವೇದಾ, ಆರೋಹಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.