ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ನಿಮಿತ್ತ ರಕ್ತದಾನ ಶಿಬಿರ
ಬೆಳಗಾವಿ, 1: ಡಾ. ಪ್ರಭಾಕರ ಕೋರೆ ಉತ್ತರ ಕನರ್ಾಟಕದ ತಿಲಕ. ಇಂದು ನಮ್ಮ್ ಬೆಳಗಾವಿ ಜಿಲ್ಲೆ ವಿಶ್ವದಾದ್ಯಂತ ಹೆಸರುವಾಸಿಯಾಗಲು ಕೆ ಎಲ್ ಇ ಸಂಸ್ಥೆ ಹಾಗೂ ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವೆಂದು ಡಾ. ಪ್ರಭಾಕರ ಕೋರೆ ಸಹಕಾರಿ ಕೋಆಪರೇಟಿವ ಬ್ಯಾಂಕಿನ ಚೆರಮನ್ನರಾದ ಅಮೃತರಾಜ ನೇಸರಿ ಮಾತನಾಡುತ್ತಿದ್ದರು ಅವರು ಇಂದು ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಸಂಕೇಶ್ಬರ ಪಟ್ಟಣದಲ್ಲಿ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೆ ಎಲ್ ಇ ಸಂಸ್ಥೆಯು ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ಉದ್ದಿಮೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಭಾರತವಷ್ಟೇ ಅಲ್ಲದೇ ದೇಶವಿದೇಶಗಳಲ್ಲಿಯೂ ಹೆಸರುವಾಸಿಯಾಗುವಂತಹ ಕಾರ್ಯವನ್ನು ನಿರ್ವಹಿಸುವಂತೆ ಮಾಡಿದ ಡಾ. ಪ್ರಭಾಕರ ಕೊರೆ ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಸಂಜಯ ಶಿರಕೋಲಿ ಮಾತನಾಡುತ್ತ ರಕ್ತವೂ ಶರೀರ ಮುಖ್ಯ ಅಂಗವಾಗಿದೆ ಅದನ್ನು ಬೇರಾವ ಮಾರ್ಗಗಳಿಂದಲೂ ಉತ್ಪಾದಿಸಲು ಸಾಧ್ಯವಿಲ್ಲ. ಅಂತಹ ಅಮೂಲ್ಯವಾದ ಭಾಗವನ್ನು ಇಂದು ಡಾ. ಪ್ರಭಾಕರ ಕೋರೆ ಜನ್ಮ ದಿನದ ನಿಮಿತ್ತವಾಗಿ ದಾನಮಾಡುತ್ತಿರುವದು ನಿಜಕ್ಕೂ ಪ್ರಶಂಸನೀಯ. ಡಾ. ಪ್ರಬಾಕರ ಕೋರೆಯವರು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಆಯ್ಕೆಗೊಂಡಂದಿನಿಂದ ಇಂದಿನವರೆಗೂ ಜನೋಪಕಾರಿಯಾಗಿದ್ದಾರೆ, ಜನರ ಅಗತ್ಯತೆಗಳನ್ನು ಅರಿತು ಜನರ ಮನಗಳಲ್ಲಿ ಮನೆಮಾಡಿದ್ದಾರೆ. ಇದೇ ರೀತಿ ಅವರ ಸೇವೆಯು ಮುಂದುವರೆಯಲಿ ಎಂದು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ 41 ಜನರು ರಕ್ತದಾನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮುನ್ಸಿಪಲ ಕಾಪರ್ೊರೇಟ್ನ ಸದಸ್ಯ ಸುನಿಲ ಪರ್ವತರಾವ್, ಬಸವರಾಜ ಬಿ, ಅಭಿಜಿತ ಕುರನಕರ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತಭಂಡಾರ ಅಧಿಕಾರಿ ಡಾ. ವಸಂತ ಶಿಂಧೆ, ಸಾರ್ವಜನಿಕ ಸಂಪಕರ್ಾಧಿಕಾರಿ ಅರುಣ ನಾಗಣ್ನವರ ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ಸಂಕೇಶ್ವರ ಪಟ್ಟಣವಾಸಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 