ಬೆಟಗೇರಿ ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ಆಚರಣೆ
Ashadha Ekadashi celebration at Betageri Pandurang Temple
ಲೋಕದರ್ಶನ ವರದಿ
ಬೆಟಗೇರಿ 26 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ದಿನವನ್ನು ಜು.25 ಮತ್ತು ಜು.26ರಂದು ವಿಠ್ಠಲ-ರುಕ್ಮಿಣಿ ನಾಮಸ್ಮರಣೆ, ವಿಶೇಷ ಪೂಜೆ ಮಾಡುವ ಮೂಲಕ ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜು.25ರಂದು ಬೆಳಗ್ಗೆ ಮತ್ತು ಸಂಜೆ ಹೊತ್ತು ಪಾಂಡುರಂಗ ವಿಠ್ಠಲನಿಗೆ ವಿಶೇಷ ಪೂಜೆ, ಅಭಿಷೇಕ ನಡೆದ ಬಳಿಕ ವಿಶೇಷ ಅಲಂಕಾರ ಮಾಡಲಾಗಿತ್ತು, ಪುರ ಜನರಿಂದ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದಿನವಿಡಿ ದೇವಾಲಯಕ್ಕೆ ಅಸಂಖ್ಯಾಂತ ಭಕ್ತರು ಆಗಮಿಸಿ ಪಾಂಡುರಂಗನ ದರ್ಶನ ಪಡೆದರು.
ಜು.25ರಂದು ಸಂಜೆ, ಜು.26ರಂದು ಮುಂಜಾನೆ ಹೊತ್ತು ಕರಿಕಟ್ಟಿಯ ಕೀರ್ತನ ಕೇಸರಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನ ಕಾರ್ಯಕ್ರಮ ಜರುಗಿದ ನಂತರ ಇಲ್ಲಿಯ ಪಾಂಡುರಂಗ ವಿಠ್ಠಲ ದೇವಾಲಯದ ಆಷಾಢ ಏಕಾದಶಿ ಆಚರಣಾ ಸಮಿತಿಯ ಸದಸ್ಯರು, ಸಂತರು ಕಾರ್ಯಕ್ರಮಕ್ಕೆ ಆಗಮಿಸಿದ ಈ ವೇಳೆ ಸತ್ಕರಿಸಿದರು. ಜು.25 ಮತ್ತು ಜು.26 ರಂದು ಆಷಾಢ ಏಕಾದಶಿ ದಿನದ ಪ್ರಯುಕ್ತ ಸ್ಥಳೀಯ ಪಾಂಡುರಂಗ ದೇವಾಲಯದಲ್ಲಿ ಸೇರಿದ ಭಕ್ತರು ಭಜನೆ, ಪಾಂಡುರಂಗನ ನಾಮಸ್ಮರಣೆ ಮಾಡಿದರು. ಶರಣರಾದ ರಾಮಣ್ಣ ದುಂಡಪ್ಪ ಮುಧೋಳ ಅವರಿಂದ ಮಹಾಪ್ರಸಾದ ಸೇವೆ ನಡೆಯಿತು.
ನಂತರ ಆಷಾಢ ಏಕಾದಶಿ ಮತ್ತು ದ್ವಾದಶಿ ದಿನದ ವಿಶೇಷ ಕಾರ್ಯಕ್ರಮ ಸಮಾರೂಪಗೊಂಡಿತು. ಬಸಪ್ಪ ಮುರಗೋಡ, ಸದಾಶಿವ ದಂಡಿನ, ಶಂಕರ ಸೂಜಿ, ಶಂಕರ ನಂದಿ, ಈರ್ಪ ದೇಯಣ್ಣವರ, ಬಸವರಾಜ ಪಣದಿ, ಫಕೀರ್ಪ ಹೊರಟ್ಟಿ, ವೀರನಾಯ್ಕ ನಾಯ್ಕರ, ಈರಣ್ಣ ದೇಯಣ್ಣವರ, ಬಸಪ್ಪ ಹುಬ್ಬಳ್ಳಿ, ಬಸವರಾಜ ಮುಂಡೇಶಿ, ಪಾರ್ವತೆವ್ವ ಬಳಿಗಾರ, ಬಸನಿಂಗವ್ವ ದೇಯಣ್ಣವರ, ಸುಮ್ಮವ್ವ ಆನೆಗುಂದಿ, ಗಣ್ಯರು, ಆಷಾಢ ಏಕಾದಶಿ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಂತರು, ಶರಣರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 