ದೇಶದ ಹಸಿವು ನೀಗಿಸಿದ ಮಹಾನ್ ನಾಯಕ ಡಾ.ಬಾಬುಜಗಜೀವನರಾಮ್‌: ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ

  ದೇಶದ ಹಸಿವು ನೀಗಿಸಿದ ಮಹಾನ್ ನಾಯಕ ಡಾ.ಬಾಬುಜಗಜೀವನರಾಮ್‌: ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ Dr. Babujagjeevanram, a great leader who alleviated the hunger of the country: Vice Chancellor Prof.

ಲೋಕದರ್ಶನ ವರದಿ  

ವಿಜಯಪುರ 06:  ದೇಶದ ಹಸಿವು ನೀಗಿಸಿದ ಮಹಾನ್ ನಾಯಕ ಡಾ.ಬಾಬು ಜಗಜೀವನರಾಮ್ ಅವರ ಜೀವನವು ಪ್ರತಿಯೊಬ್ಬರಿಗೂ ಮಹತ್ವದ ಪ್ರೇರಣೆಯಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ಹೇಳಿದರು. 

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಘಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಬಾಬು ಜಗಜೀವನರಾಮ್ ಅವರ ಜೀವನ ಸಾಧನೆಗಳನ್ನು ಸ್ಮರಿಸಿದ ಅವರು, ಹಸಿರು ಕ್ರಾಂತಿಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ದೇಶದ ಜನರ ಆಹಾರ ಭದ್ರತೆಗೆ ಅವರು ಮಾಡಿದ ಸೇವೆ ಅಪಾರವಾಗಿದೆ. ಅಷ್ಟೇ ಅಲ್ಲದೇ ಜಗಜೀವನರಾಮ್ ಅವರು ಸಮಾಜದ ಹಿತಕ್ಕಾಗಿ ಶ್ರಮಿಸಿದ ದಿಟ್ಟ ನಾಯಕರು ಹಾಗೂ ಮಹಾನ್ ವ್ಯಕ್ತಿಯಾಗಿದ್ದು, ಅವರ ಜೀವನದಿಂದ ಎಲ್ಲರೂ ಪಾಠ ಕಲಿಯಬೇಕು ಎಂದು ಹೇಳಿದರು. 

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಡಾ.ಬಾಬು ಜಗಜೀವನರಾಮ್ ಅವರು ಭಾರತ ಕಂಡ ಧೀಮಂತ ನಾಯಕರು. ಹುಟ್ಟು ಹೋರಾಟಗಾರರಾಗಿದ್ದ ಜಗಜೀವನರಾಮ್ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದರು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಜಿ. ತಡಸದ ಮಾತನಾಡಿ, ಭಾರತ ಸರ್ಕಾರದ ಮಂತ್ರಿಯಾಗಿ ಜಗಜೀವನರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ರಾಜಕುಮಾರ ಮಾಲಿಪಾಟಿಲ, ಪ್ರೊ. ಅನಿತಾ ನಾಟೆಕರ್, ಪ್ರೊ. ಅಶೋಕ ಬಿ ಸುರಪುರ, ಪ್ರೊ.ಜ್ಯೋತಿ ಉಪಾಧ್ಯಾಯ, ಡಾ.ದೀಪಕ್ ಶಿಂಧೆ, ಡಾ.ಚಂದ್ರಶೇಖರ ಮಠಪತಿ, ಡಾ.ಅಮರನಾಥ ಪ್ರಜಾಪತಿ, ಅತಿಥಿ ಉಪನ್ಯಾಸಕರುಗಳು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಮತ್ತಿತರಿದ್ದರು. 

ಡಾ.ಬಿ.ಆರ್‌.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಂಜೀವಕುಮಾರ ಗಿರಿ ಸ್ವಾಗತಿಸಿ, ನಿರೂಪಿಸಿದರು, ಪರಿಶಿಷ್ಠ ಜಾತಿ-ಪರಿಶಿಷ್ಠ ಪಂಗಡಗಳ ಘಟಕದ ಉಪ-ನಿರ್ದೇಶಕ ಡಾ.ಬಾಬು ಆರ್‌. ಎಲ್‌. ವಂದಿಸಿದರು. 

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಪುಷ್ಪ ನಮನ ಸಲ್ಲಿಸಿದರು. ಚಿತ್ರದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮತ್ತಿತರರು ಇದ್ದಾರೆ.