ಡಾ. ಬಾಬು ಜಗಜೀವನರಾಮ್ ಅವರ ಸಾಧನೆಗಳು ನಮ್ಮೆಲ್ಲರಿಗೂ ಸದಾ ದಾರೀದೀಪವಾಗಿವೆ: ವಿಶ್ವಾಸ ವೈದ್ಯ

ಡಾ. ಬಾಬು ಜಗಜೀವನರಾಮ್ ಅವರ ಸಾಧನೆಗಳು ನಮ್ಮೆಲ್ಲರಿಗೂ ಸದಾ ದಾರೀದೀಪವಾಗಿವೆ: ವಿಶ್ವಾಸ ವೈದ್ಯ Dr. Babu Jagjivanram's achievements have always been a beacon of hope for all of us: Vishwas Vaidya

ಸವದತ್ತಿ 05: ಭಾರತದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರು ಹಾಕಿಕೊಟ್ಟ ದಾರಿ ಹಾಗೂ ಅವರ ಸಾಧನೆಗಳು ನಮ್ಮೆಲ್ಲರಿಗೂ ಸದಾ ದಾರೀದೀಪವಾಗಿವೆ, ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.    

ಇಲ್ಲಿನ ಕೃಷಿ ಇಲಾಖೆಯ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿ ಅವರು ದೇಶದ ರಕ್ಷಣೆ, ಕೃಷಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬಾಬುಜೀ ಅವರ ಕೊಡುಗೆ ಅಪಾರ.  

ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಅವರ ತತ್ತ್ವಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಲಿ,ಎಂದು ಆಶಯ  ವ್ಯಕ್ತಪಡಿಸಿದರು. ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು ಮಾತನಾಡಿ ಡಾ. ಬಾಬು ಜಗಜೀವನ್ ರಾಮ್ ಅವರು ಈ ದೇಶದ ಶೋಷಿತ ವರ್ಗಗಳ ಧ್ವನಿಯಾಗಿ, ಹಸಿರು ಕ್ರಾಂತಿಯ ಹರಿಕಾರರಾಗಿ ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಅನನ್ಯ ಎಂದು ಅವರು ಬಣ್ಣಿಸಿದರು.

ಭಾರತವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಕೃಷಿ ಸಚಿವರಾಗಿ ಜಗಜೀವನ್ ರಾಮ್ ಅವರು ಕೈಗೊಂಡ ನಿರ್ಧಾರಗಳು ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದವು. ಬಾಲ್ಯದಿಂದಲೂ ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧ ಹೋರಾಡಿದ ಅವರು, ಸಂವಿಧಾನ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿ ದಲಿತರ ಮತ್ತು ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದರು. ಸತತವಾಗಿ ಹಲವು ದಶಕಗಳ ಕಾಲ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ ಅವರು,ಉಪಪ್ರಧಾನಿಯಾಗಿ ದೇಶದ ಆಡಳಿತಕ್ಕೆ ಹೊಸ ದಿಕ್ಕು ನೀಡಿದರು. 

ಬಾಬುಜಿಯವರ ಜೀವನ ನಮಗೆಲ್ಲರಿಗೂ ಆದರ್ಶ.ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ದೇಶದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನ ಅವರಾಗಿದ್ದರು. ಅವರ ಆಶಯಗಳನ್ನು ಜಾರಿಗೆ ತರುವುದು ನಮ್ಮೆಲ್ಲರ ಕರ್ತವ್ಯ,ಎಂದರು. 

ಈ ವೇಳೆ  ಗ್ರೇಡ್(2) ತಹಶೀಲ್ದಾರ ಎಮ್‌.ಎನ್‌.ಮಠದ, ಆರ್‌.ಆರ್‌.ಕುಲಕರ್ಣಿ, ಪಿಐ ಸುರೇಶ ಬೆಂಡೆಗುಂಬಳ, ಅಶೋಕ ಮುರಗೋಡ, ಮಹಾದೇವ ಬಡ್ಲಿ, ಬಸವರಾಜ ತಳವಾರ, ಮುಂಜು ನಿಕ್ಕಂ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿನಮಠ, ಎಚ್‌.ಐ.ಕದ್ರಾಪೂರಕರ, ಪಿಎಸ್‌ಐ ಕೆಲ್ಲ್ಮಶ ಬನ್ನೂರ,ಹಾಗೂ ಸಮಾಜ ಮುಖಂಡರು ಸೇರಿ ಉಪಸ್ಥಿತರಿದ್ದರು.