ಡಾ.ಬಾಬು ಜಗಜೀವನ ರಾಂ ಹಸಿರುಕ್ರಾಂತಿಯ ಹರಿಕಾರ: ಶಾಸಕ ವಿಠ್ಠಕ ಕಟಕದೊಂಡ

ಡಾ.ಬಾಬು ಜಗಜೀವನ ರಾಂ ಹಸಿರುಕ್ರಾಂತಿಯ ಹರಿಕಾರ: ಶಾಸಕ ವಿಠ್ಠಕ ಕಟಕದೊಂಡ  Dr. Babu Jagjivan Ram was the pioneer of the Green Revolution: MLA Vithaka Katakadonda

ವಿಜಯಪುರ 05: ಡಾ. ಬಾಬು ಜಗಜೀವನ ರಾಂ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ, ಕೃಷಿ ಪದ್ಧತಿಗಳಲ್ಲಿ ಅಧುನಿಕತೆಯನ್ನು ಬಳಸಿ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿ ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ ಮಹಾನ್ ಚಿಂತಕರು ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಕೆ ಸಹಯೋಗದಲ್ಲಿ ಇಲ್ಲಿನ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.  

ಇಂತಹ ಮಹನೀಯರನ್ನು ನಾವು ಪ್ರತಿನಿತ್ಯ ನೆನೆಪಿಸಿಕೊಳ್ಳಬೇಕು. ಅಂದಾಗ ಅವರ ಚಿಂತನೆಗಳು ಸಾಕಾರಗೊಳ್ಳುತ್ತವೆ. ಶೋಷಿತರ ಸಮಸ್ಯೆಗಳ, ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದರು.  

ಡಾ. ಬಾಬು ಜಗಜೀವನ ರಾಂ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿಗೆ ಕಾರಣೀಕರ್ತರಾದರು ಎಂದು ಬಣ್ಣಿಸಿದರು.   

ತಮ್ಮ ನಿರಂತರ ಹೋರಾಟಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಾಗಿದ್ದ ಡಾ. ಜಗಜೀವನರಾಂ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.  

ಡಾ.ಬಾಬು ಜಗಜೀವನ ರಾಂ ಅವರ ಜಯಂತಿ ಮೂಲಕ ಸರ್ಕಾರದ ಯೋಜನೆಗಳು ಮಹನೀಯರ ಮಹತ್ವ ತಿಳಿಸಿಕೊಡುವುದಾಗಿದೆ. ಅವರು ಮಾಡಿದ ಸೇವೆ, ಸಾಮಾಜಿಕ ಹೋರಾಟಗಳ ಅವರ ಕಾರ್ಯಗಳ ನೆನೆಯುವುದಾಗಿದೆ ಎಂದರು.  

ಅಪ್ಪಟ ದೇಶ ಪ್ರೇಮಿಯಾದ ಬಾಬುಜಗಜೀವನರಾಂ ಅವರು ಏಪ್ರಿಲ್ 1908 ಬಿಹಾರದ ಛಂದ್ವಾ ಗ್ರಾಮದಲ್ಲಿ ಹುಟ್ಟಿದರು. ಅವರು ಹುಟ್ಟಿದಂದಿನದ ಜೀವಿತಾವಧಿಯುದ್ದಕ್ಕೂ ಮಾಡಿದ ಅವರ ಸಾಧನೆಗಳು ಸದಾ ಹೊಳೆಯುತ್ತಿವೆ. ಸಮಾಜ ಸುಧಾರಣೆ, ಅಸ್ಪ್ರಶ್ಯತೆ ನಿವಾರಣೆಗೆ ಅವರು ಮಾಡಿದ ಕಾರ್ಯ ಅಸಾಧರಣವಾದುದು ಎಂದರು.  

ದೇಶದ ಪ್ರಗತಿಯಲ್ಲಿ ನನ್ನ ಪ್ರಗತಿ. ದೇಶದ ಆತ್ಮೋದ್ಧಾರವೇ ನಮ್ಮೆಲ್ಲರ ಆತ್ಮೋದ್ಧಾರ. ದೇಶದ ಉನ್ನತಿಯೇ ಎಲ್ಲರ ಉನ್ನತಿ ಎಂದೇ ಹೋರಾಟದ ಬದುಕು ರೂಪಿಸಿಕೊಂಡಿದ್ದ ಡಾ. ಜಗಜೀವನರಾಂ ಅವರನ್ನು ದೇಶದ ಜನತೆ ಬಾಬೂಜಿ ಎಂದು ಕರೆಯುತ್ತಿದ್ದರು ಎಂದರು.  

ಡಾ.ಜಗಜೀವನರಾಂ ಅವರು, 1935 ರಲ್ಲಿ ಬಿಹಾರ ವಿಧಾನ ಸಭೆಗೆ ಅವಿರೋಧ ಆಯ್ಕೆಯಾಗಿದ್ದರು. ಈ ಸಮಾಜಕ್ಕೆ ತಮ್ಮನ್ನೇ ತಾವು ಸಮರೆ​‍್ಣ ಮಾಡಿದ್ದ ಅವರು ಎಲ್ಲ ಖಾತೆಗಳನ್ನು ನಿಭಾಯಿಸಿದ ಮಹಾನ್ ಮುತ್ಸದ್ಧಿ ಎಂದರು.  ಬಾಬು ಜಗಜೀವನರಾಂ ಎರಡು ಬಾರಿ ಕೃಷಿ ಸಚಿವರಾಗಿದ್ದರು. ಆಹಾರೋತ್ಪಾದನೆಗೆ ಹಸಿರು ಕ್ರಾಂತಿ ಮಾಡಿದ ಮಹನೀಯರಾಗಿದ್ದಾರೆ.  

ಕಾರ್ಮಿಕ ಸಚಿವರಾಗಿ ಅನೇಕ ಜನಪರ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ಮಹನೀಯರ 119ನೇ ಜಯಂತಿ ಆಚರಣೆ ಮಾಡುತ್ತಿದ್ದು, ಅಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.  

ಜಿಲ್ಲಾಧಿಕಾರಿ ಡಾ. ಆನಂದ ಕೆ.ಅವರು ಅಧ್ಯಕ್ಷತೆ ವಹಿಸಿ, ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಬದುಕೇ ಆದರ್ಶವಾಗಿದೆ ಎಂದರು.  

ಹಿಂದೆ ನಮ್ಮ ದೇಶಕ್ಕೆ ಆಹಾರ ಭದ್ರತೆ ಇರಲಿಲ್ಲ. ಅಂತಹ ಸಮಯದಲ್ಲಿ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ಸಮಸ್ಯೆ ಎದುರಾಗಿತ್ತು. ಆಗ ಡಾ. ಬಾಬು ಜಗಜೀವನರಾಂ ಅವರು ದೇಶಕ್ಕೆ ಆಹಾರ ಭದ್ರತೆಗೆ ಅಡಿಪಾಯ ಹಾಕಿದರು. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಿದ್ದರೂ, ಅವುಗಳಿಗೆ ಬೆಂಬಲ ಬೆಲೆ ನೀಡುವುದರ ಮೂಲಕ ದೇಶವನ್ನು ಗಂಡಾಂತರದಿಂದ ಪಾರು ಮಾಡಿದ ಹೆಮ್ಮೆಯ ನಾಯಕರೆನಿಸಿಕೊಂಡ ಮಹಾನ್ ನಾಯಕ ಎಂದು ಬಣ್ಣಿಸಿದರು.  

ಕಷ್ಟ ಕೋಟಲೆಯಲ್ಲಿ ಡಾ. ಬಾಬು ಜಗಜೀವನರಾಂ ಅವರು ರಾಷ್ಟ್ರವನ್ನು ಮುನ್ನಡೆಸಿದ ಮುತ್ಸದ್ಧಿ. ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರುವುದರ ಮೂಲಕ ಪ್ರತಿಯೊಬ್ಬರಿಗೂ ಗೌರವ, ಸಮಾನತೆ ತಂದು ಕೊಟ್ಟ ಮಹಾನ್ ದಾರ್ಶನಿಕರು ಎಂದರು.  

ಪ್ರೊ. ಲಕ್ಷ್ಮೀದೇವಿ ಡಾ. ಬಾಬುಜಗಜೀವನರಾಮ್ ಅವರು ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿ, ಡಾ. ಜಗಜೀವನರಾಂ ಅವರು ಪ್ರಬುದ್ಧ ರಾಜನೀತಿಜ್ಞ ಆಗಿದ್ದರು. ಜೊತೆಗೆ ಅವರು ಬದುಕು ಆದರ್ಶ. ಅವರ ಜೀವನವೇ ನಮಗೆಲ್ಲ ದಾರಿ ದೀಪವಾಗಿದೆ. ಸಂವಿಧಾನವನ್ನು ನಮಗೆ ನಾವೇ ಅರ​‍್ಿಸಿಕೊಂಡಿದ್ದೇವೆ. ಈ ದೇಶದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿಗತಿ ಸುಧಾರಣೆಗೆ ಡಾ. ಬಾಬುಜೀವನರಾಂ ಅಪಾರವಾಗಿ ದುಡಿದಿದ್ದಾರೆ ಎಂದರು.  

ಕಾರ್ಮಿಕ, ಕೃಷಿ, ಆಹಾರ, ರಕ್ಷಣಾ ಇಲಾಖೆ, ರೈಲ್ವೆ ಸಚಿವರಾಗಿ ಡಾ.ಬಾಬು ಜಗಜೀವನರಾಮ್ ಅವರು ಅತ್ಯುತ್ತಮ ಕೆಲಸ ಮಾಡಿದ್ದು, ಇದು ಮಾದರಿಯಾಗಿದೆ. ನಮಗೆ ಕಾಯ್ದೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ನಾವು ಅವುಗಳನ್ನು ದುರುಪಯೋಗ ಮಾಡಿಕೊಳ್ಳದೇ, ಒಳ್ಳೆಯತನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಶೋಷಿತರು, ಹಿಂದುಳಿದವರು ಭವಿಷ್ಯದ ಭರವಸೆ ಇಟ್ಟುಕೊಂಡು ಬದುಕಬೇಕು. ಮಾನವೀಯತೆ ನಮ್ಮನ್ನು ಬದುಕಿಸುತ್ತದೆ. ಡಾ.ಬಾಬುಜಗಜೀವನರಾಮ್ ಅವರು ಈ ದೇಶದ ಆಹಾರ ಸಚಿವರಾಗಿ, ಭಾರತದ ಜನತೆಗೆ ಹಸಿರು ಕ್ರಾಂತಿ ಯೋಜನೆ ಜಾರಿಗೊಳಿಸುವ ಮೂಲಕ ಈ ದೇಶದ ಜನತೆ ಹಸಿವಿನಿಂದ ಬಳಲದಂತೆ ನೋಡಿಕೊಂಡ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.   ಕಾರ್ಯಕ್ರಮ ಆರಂಭಕ್ಕೆ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು.  

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಸಮಾಜ ಮುಖಂಡರಾದ  ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ ,ಶ್ರೀನಿವಾಸ ಶಹಾಪೂರ, ಪರಶುರಾಮ ರೋಣಿಹಾಳ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಇದ್ದರು.  

ಡಾ.ಬಾಬು ಜಗಜೀವನ ರಾಂ ಜಯಂತ್ಯುತ್ಸವ: ಪ್ರತಿಮೆಗೆ ಮಾಲಾರೆ​‍್ಣ  ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ  

119ನೇ ಜಯಂತಿ ಹಿನ್ನೆಲೆಯಲ್ಲಿ, ಏಪ್ರೀಲ್ 05ರಂದು ನಗರದ ಸೆಟ್‌ಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಾಬು ಜಗಜೀವನ ರಾಂ ಪ್ರತಿಮೆಗೆ ಶಾಸಕರಾದ ವಿಠ್ಠಲ ಕಟಕಧೋಂಡ,ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ,ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಮಾಲಾರೆ​‍್ಣ ಮಾಡಿ, ಗೌರವ ನಮನ ಸಲ್ಲಿಸಿದರು.  

ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ,ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರಿ​‍್ಜಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಮತ್ತು ಇತರರು ಇದ್ದರು.  

ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ಬಾಬು ಜಗಜೀವನರಾಂ ವೃತ್ತದಿಂದ ಡಾ. ಬಾಬು ಜಗಜೀವನರಾಮ್ ಅವರ ಭವ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಕಲಾತಂಡಗಳ ಕಲಾವಿದರು ತಮ್ಮ ಕಲೆ ಪ್ರದರ್ಶಿಸುವ ಮೂಲಕ ಮೆರವಣಿಗೆ ಕಳೆ ಹೆಚ್ಚಿಸಿದ್ದು ವಿಶೇಷವಾಗಿತ್ತು.