ಶೋಷಿತ ವರ್ಗಗಳ ಆಶಾದೀಪ ಡಾ ಬಾಬು ಜಗಜೀವನ್ ರಾಂ: ಸಂತೋಷ ಮ್ಯಾಗೇರಿ
Dr. Babu Jagjivan Ram is the hope of the oppressed classes: Santosh Mageri
ಕೊಲ್ಹಾರ 05: ಭವ್ಯ ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಭಾರತದ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ, ಅಪ್ಪಟ ಪ್ರಜಾಪ್ರಭುತ್ವವಾದಿ ಡಾ. ಬಾಬು ಜಗಜೀವನ್ ರಾಂ ಅವರ ಕೊಡುಗೆ ಅಪಾರ ಮತ್ತು ಅನುಪಮ ಎಂದು ಕೊಲ್ಹಾರ ತಹಶೀಲ್ದಾರ್ ಸಂತೋಷ್ ಮ್ಯಾಗೇರಿ ಹೇಳಿದರು
ಕೊಲ್ಹಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಂ ಅವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಾಬು ಜಗಜೀವನ್ ರಾಂ ಅವರು ಕೇಂದ್ರ ಸರ್ಕಾರದಲ್ಲಿ ನಾಲ್ಕು ದಶಕಗಳ ಕಾಲ ಮಂತ್ರಿಯಾಗಿ ದಾಖಲೆಯನ್ನು ನಿರ್ಮಿಸಿದ ಮಹಾನ್ ರಾಜಕೀಯ ಮುತ್ಸದ್ದಿ ಶೋಷಿತ ವರ್ಗಗಳ ಆಶಾ ದೀಪವಾಗಿ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ತಳ ಸಮುದಾಯಗಳ ಉದ್ದಾರಕ್ಕೆ ತಮ್ಮ ಜೀವನವನ್ನು ಸಮರ್ಿಸಿದ ಪ್ರತಿಭಾವಂತರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕಾಲದಲ್ಲಿ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ, ಆಹಾರ, ರೈಲ್ವೆ, ರಕ್ಷಣಾ, ಕೃಷಿ, ಸಾರಿಗೆ ಮತ್ತು ಸಂಪರ್ಕ ಮಂತ್ರಿಗಳಾಗಿ ಹಾಗೂ ಉಪ ಪ್ರಧಾನಿ ಯಂತಹ ಮಹತ್ತರವಾದ ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಹಸಿರು ಕ್ರಾಂತಿಯ ಹರಿಕಾರನೆಂದು ಪ್ರಖ್ಯಾತಿಯನ್ನು ಹೊಂದಿ ಭಾರತದ ದೇಶವನ್ನು ಆಧುನಿಕತೆಯ ಬಾಗಿಲಿಗೆ ತಂದು ನಿಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಉಪ ತಹಶೀಲ್ದಾರ್ ಕೃಷ್ಣ ಗೂಡೂರು, ಎನ್ ಕೆ ನದಾಫ, ಸೈಫಾನ್ ಕೊರ್ತಿ, ರಾಮನಗೌಡ ಪಾಟೀಲ, ಶ್ರೀಶೈಲ ಹಂಡಿ , ಆರ್ ಆಯ್ ಹುಡೇದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ ಎಸ್ ಗಿಡ್ಡಪ್ಪಗೋಳ, ಮುಖಂಡರಾದ ಧಶರತ ಈಟಿ, ಬಾಬು ಭಜಂತ್ರಿ,
ನಿಂಗು ಗಣಿ, ಶಿಡ್ಲಪ್ಪ ತಳಗೇರಿ, ಶಿಡ್ಲಪ್ಪ ಮಾದರ, ಚಂದ್ರಶೇಖರ ಈಟಿ, ಅಮ್ಮಿನಪ್ಪ ತೆಗ್ಗಿ, ಸೋಮು ಬ್ಯಾಲಾಳ, ಬಸವರಾಜ ಚಲವಾದಿ, ಶಿವಪುತ್ರ ಮೇತ್ರಿ, ಮಂಜುನಾಥ ಬಾಗಾನಗರ, ಗುರು ಚಲವಾದಿ ಒಳಗೊಂಡಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಮನು ಪತ್ತಾರ ಕಲಕೇರಿ ಮಾತನಾಡಿದರು, ಚಂದ್ರಶೇಖರ ಈಟಿ ವಂದನಾರೆ್ಣ ಸಲ್ಲಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 