ಲಕ್ಷ್ಮೇಶ್ವರ ತಸಿಲ್ದಾರ್ ಕಚೇರಿಯಲ್ಲಿ ಡಾ,ಬಾಬು ಜಗಜೀವನರಾಮ್ 119ಅವರ ಜಯಂತಿ ಆಚರಣೆ

ಲಕ್ಷ್ಮೇಶ್ವರ ತಸಿಲ್ದಾರ್ ಕಚೇರಿಯಲ್ಲಿ ಡಾ,ಬಾಬು ಜಗಜೀವನರಾಮ್ 119ಅವರ ಜಯಂತಿ ಆಚರಣೆ  Dr. Babu Jagjivan Ram's 119th birth anniversary celebrated at Lakshmeshwara Tasildar's office

ಲಕ್ಷ್ಮೇಶ್ವರ" 05:  ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ ಬಾಬು ಜಗಜೀವನರಾಮ್ ಅವರ119ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಫಕ್ಕಿರೇಶ ಮ್ಯಾಟಣ್ಣವರ ಅವರು ಡಾ ಬಾಬು ಜಗಜೀವನ್ ರಾಮ್ (ಏಪ್ರಿಲ್ 5, 1908 - ಜುಲೈ 6, 1986) ಭಾರತದ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ಸಾಮಾಜಿಕ ಸುಧಾರಕ ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡಿದ ಹಿರಿಯ ರಾಜಕಾರಣಿ. ಬಿಹಾರದ ಚಾಂದ್ವಾದಲ್ಲಿ ಜನಿಸಿದ ಇವರು, ನೆಹರೂರವರ ಮಧ್ಯಂತರ ಸರ್ಕಾರದಲ್ಲಿ ಕಿರಿಯ ಸಚಿವರಾಗಿ, ನಂತರ ದೀರ್ಘಕಾಲ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ (ಕಾರ್ಮಿಕ, ರಕ್ಷಣೆ, ಕೃಷಿ) ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಾಬು ಜಗಜೀವನ್ ರಾಮ್ ಅವರ ಜೀವನದ ಆರಂಭಿಕ ಜೀವನ ಮತ್ತು ಶಿಕ್ಷಣ: ಬಾಬುಜೀ ಎಂದೇ ಪ್ರಸಿದ್ಧರಾದ ಇವರು, ಬಿಹಾರದ ಭೋಜ್ಪುರ ಜಿಲ್ಲೆಯ ಚಾಂದ್ವಾದಲ್ಲಿ ಜನಿಸಿದರು. ಬಾಲ್ಯದಲ್ಲಿ ಜಾತಿ ತಾರತಮ್ಯ ಎದುರಿಸಿದರೂ, ಛಲಬಿಡದೆ ಅಧ್ಯಯನ ಮಾಡಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸ್ವಾತಂತ್ರ್ಯ ಹೋರಾಟ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದತ್ತ ಆಕರ್ಷಿತರಾಗಿ, 1934ರ ಬಿಹಾರ ಭೂಕಂಪದ ಸಮಯದಲ್ಲಿ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1935ರಲ್ಲಿ ’ಆಲ್ ಇಂಡಿಯಾ ಡಿಪ್ರೆಸ್ಡ್‌ ಕ್ಲಾಸಸ್ ಲೀಗ್‌’ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ರಾಜಕೀಯ ವೃತ್ತಿಜೀವನ 1937ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು.  

1946ರಲ್ಲಿ ಜವಾಹರಲಾಲ್ ನೆಹರು ಅವರ ತಾತ್ಕಾಲಿಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ, ಸ್ವತಂತ್ರ ಭಾರತದ ಮೊದಲ ಕ್ಯಾಬಿನೆಟ್ನಲ್ಲಿ ಸೇವೆ ಸಲ್ಲಿಸಿದ ಅವರು ದೇಶದ ಕಾರ್ಮಿಕ ಕಲ್ಯಾಣ ನೀತಿಗಳಿಗೆ ಅಡಿಪಾಯ ಹಾಕಿದರು.ಕೃಷಿ ಸಚಿವರಾಗಿ 1971ರ ಯುದ್ಧದ ಸಮಯದಲ್ಲಿ ಆಹಾರದ ಕೊರತೆ ನೀಗಿಸಿ, ಹಸಿರು ಕ್ರಾಂತಿಯ ಯಶಸ್ಸಿಗೆ ಕಾರ್ಣಿ ಕರ್ತರಾದರ ಅವರುರಕ್ಷಣಾ ಸಚಿವರಾಗಿ 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತವನ್ನು ಮುನ್ನಡೆಸಿದರು. 1977-1979ರವರೆಗೆ ಜನತಾ ಪಕ್ಷದ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ಅವರುಸಾಮಾಜಿಕ ಕಳಕಳಿ ಜಾತಿ ಆಧಾರಿತ ಶೋಷಣೆಯ ವಿರುದ್ಧ ಧ್ವನಿ ಎತ್ತಿ, ದಲಿತರ ಸಮಾನತೆಗಾಗಿ ಜೀವನಪೂರ್ತಿ ಹೋರಾಡಿದವರು ಅವರ ಜನ್ಮದಿನವಾದ ಏಪ್ರಿಲ್ 5 ಅನ್ನು ಭಾರತದಲ್ಲಿ "ಸಮತಾ ದಿವಸ್" (ಸಮಾನತೆ ದಿನ) ಎಂದು ಆಚರಿಸಲಾಗುತ್ತದೆ ಎಂದರುಈ ಸಮಯದಲ್ಲಿ ತಹಶೀಲ್ದಾರ್ ಧನಂಜಯ್ ಎಂ ಮಾಲಗಿತ್ತಿ ಉಪ ತಹಸಿಲ್ದಾರ್ ಮಂಜುನಾಥ ಅಮಾಸಿ ಸಮಾಜ ಕಲ್ಯಾಣ ಇಲಾಖೆಯ ಎಂಎಸ್ ಸಂಕನೂರ ಬಿಎಸ್ ಹಡಪದ ಮುಖಂಡರಾದ ಬಸವಣ್ಣಪ್ಪ ನಂದೆಣ್ಣವರ ಮನೋಹರ್ ಕರ್ಜಿಗಿ ಫಕೀರ​‍್ಪ ಬಜಕ್ನವರ ರಾಮು ಅಡಗಿಮನಿ ಬಸವರಾಜ್ ಹಿರೇಮನಿ ಎಸ್ ಡಿ ಸಂಜೀವಣ್ಣನವರ ಅನಿಲ ಮುಳಗುಂದ ಜುಂಜಪ್ಪ ಮುದಿಯಮ್ಮನವರ ಅನಿಲ್ ನಂದೆಣ್ಣವರ ಜಗದೀಶ್ ಹುಲಿಗೆಮ್ಮನವರ ಮಾಂತೇಶ್ ಮುಸ್ರ​‍್ಪನವರ ರಮೇಶ ಹಗನಕಟ್ಟಿ ಫಕ್ಕಿರೇಶ ಹಾದಿಮನಿ ಸತೀಶ್ ನಾರಾಯಣಕರ ತುಕ್ಕಪ್ಪ ಪೂಜಾರ ಎಸ್ ಬಿ ಲಕ್ಷ್ಮೇಶ್ವರ ಕರಿಯಪ್ಪ ಶಿರಹಟ್ಟಿ ಫಕ್ಕಿರೇಶ ನಂದೆಣ್ಣವರ ಸೇರಿದಂತೆ ಇನ್ನೂ ಅನೇಕ ಮುಖಂಡರು ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.