ಪ್ರವಾಹ ಪೀಡಿತರ ಗೋಳು; ಪ್ರವಾಹದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿ

ಪ್ರವಾಹ ಪೀಡಿತರ ಗೋಳು; ಪ್ರವಾಹದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿ Dr. Amola Sarade submitted a request to the Chief Minister..!

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಡಾ. ಅಮೋಲ ಸರಡೆ..! 

ಕಾಗವಾಡ: ತಾಲೂಕಿನ ಪ್ರವಾಹ ಪೀಡಿತ ಜುಗೂಳ, ಶಹಾಪೂರ, ಮಂಗಾವತಿ, ಉಗಾರ ಬುದ್ರಕ್ ಹಾಗೂ ಕುಸಾನಾಳ-ಮೊಳವಾಡ ಗ್ರಾಮಗಳಲ್ಲಿ ಸನ್ 2019-20 ಹಾಗೂ 2021 ನೇ ಸಾಲಿನ ಪ್ರವಾಹದಿಂದ ಹಾನಿಗೊಳಗಾದ ಸುಮಾರು ಮನೆಗಳ ಪೈಕಿ ಅನೇಕ ಮನೆಗಳಿಗೆ ಪರಿಹಾರ ದೊರಕದೇ ಬ್ಲಾಕ್ ಆಗಿದ್ದು, ಸಂತ್ರ​‍್ತರು ಇಂದಿಗೂ ಪರಿದಾಡುತ್ತಿದ್ದಾರೆ. ಕೂಡಲೇ ಅಂತಹ ಮನೆಗಳು ಬ್ಲಾಕ್ ಆಗಿರುವುದನ್ನು ತೆಗೆಯಿಸಿ, ಅವರಿಗೆ ಸಹ ಪರಿಹಾರ ನೀಡಬೇಕೆಂದು ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಡಾ. ಅಮೋಲ ಸರಡೆ ದಿ. 19 ರಂದು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

ಪರಿಹಾರ ದೊರಕದೇ ಪರದಾಡುತ್ತಿರುವ ಕುಟುಂಬದ ಸದಸ್ಯರೊಂದಿಗೆ ಮುಖ್ಯಮಂತ್ರಿಗಳನ್ನು, ವಸತಿ ಸಚಿವರನ್ನು ಸರ್ಕಾರದ ಕಾರ್ಯದರ್ಶಿಗಳನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟ್ಟಿ ಮಾಡಿದ ಅವರು, ಮನೆ ಹಾನಿಯ ಪರಿಹಾರ ಸಿಗದೇ ಪರದಾಡುತ್ತಿರುವ ಕುಟುಂಬಗ ಸಂಕಷ್ಟವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ತಾಂತ್ರಿಕ ವಿಭಾಗದಲ್ಲಿ ಅನೇಕ ಮನೆಗಳು ಬ್ಲಾಕ್ ಆಗಿದ್ದು, ಅವುಗಳಿಗೆ ಪರಿಹಾರ ದೊರಕಿಲ್ಲ. ಈ ಕುರಿತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಅದು ಬ್ಲಾಕ್ ಆಗಿರುವುದು ಏನು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಿತ್ತಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ, ಪ್ರವಾಹದಿಂದ ಹಾನಿಗೊಳಗಾದ ನೊಂದ ಕುಟುಂಬಗಳಿಗೆ ಪರಿಹಾರ ನೀಡಿ, ನ್ಯಾಯ ಒದಗಿಸಿಬೇಕೆಂದು ಮನವಿ ಮಾಡಿದ್ದಾರೆ. 

ಈ ವೇಳೆ ಲಕ್ಷ್ಮಣ ಗುಂಜಾಳೆ, ರಾಜಗೌಡಾ ಪಾಟೀಲ, ದೀಲೀಪ ಪಾಟೀಲ, ಸುರೇಶ ಪಾಟೀಲ, ಕಾಡಗೊಂಡ ಪಾಟೀಲ, ಮಾದಗೌಡ ಪಾಟೀಲ, ಉಮೇಶ ಸರಡೆ, ದತ್ತು ಕುಮಟೊಳೆ ಧನಪಾಲ್ ಭೀಷ್ಟಣ್ಣವರ, ರಾಜು ನಾಂದನಿ, ಶೇಷಗೌಡ ಪಾಟೀಲ, ಶಿವಗೌಡ ಪಾಟೀಲ, ಅಣ್ಣಪ್ಪ ಅಮ್ಮಣಗೆ, ಭರತ ಕಂಬಾರ, ಗೋವಿಂದ ಕಾಂಬಳೆ, ಹರುಣ ಲಾಟಕರ, ವಿಜಯ ಕಾಮಗೊಂಡ, ಶಿವಪ್ಪ ಬೆಕ್ಕೇರಿ, ಗಣೇಶ್ ಕಮತೆ, ಶಾಂತು ಸ್ವಾಮಿ, ತಂಗೆವ್ವ ಸೌಸುದ್ದಿ, ರುದ್ರಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.