ಬೆಳಗಾವಿ 06: ಡಾ. ಬಾಬಾ ಸಾಹೇಬ ಅವರು ಎಲ್ಲರಿಗೂ ಸಮಾನತೆ ನ್ಯಾಯ ಮತ್ತು ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಹಾನ ನಾಯಕ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ ಹಾಗೂ ಸಮಾಜ ಸುಧಾರಕರಾಗಿ ಈ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಗಾಧವಾದ್ದು, ಕಾರಣ ಅವರ ಸ್ಮರಣೆಯನ್ನು ಗೌರವಿಸಲು ಅವರ ಪುಣ್ಯ ತಿಥಿಯ ದಿನವಾದ ಡಿಸೆಂಬರ 6ರಂದು ಮಹಾಪರಿನಿರ್ವಾಣ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಎಂದು ಕಾರಾಗೃಹದ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರಿ ಅವರು ಹೇಳಿದರು.
ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವ್ಹಿ. ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ದಿ. 6ರಂದು ಮಹಾಪರಿನಿರ್ವಾಣ ದಿನ ನಿಮಿತ್ಯ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವರು ಆಧುನಿಕ ಭಾರತವನ್ನು ರೂಪಿಸಿದ ಸಹಾಯ ಮಾಡಿದ ಮಹಾನ ಮಾನವತಾದಿ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸಲು ಅವರ ನಿರಂತರ ಪ್ರಯತ್ನಗಳು ಭಾರತೀಯ ಸಮಾಜದ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿವೆ. ನಾವೆಲ್ಲರೂ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಾರೆ್ಪಣಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಜೈಲರಗಳಾದ ರಾಜೇಶ ಧರ್ಮಟ್ಟಿ, ಬಸವರಾಜ ಭಜಂತ್ರಿ, ಆರ್. ಬಿ. ಕಾಂಬಳೆ, ಶಿಕ್ಷಕ ಎಸ್.ಎಸ್. ಯಾದಗೂಡೆ, ಸಹಾಯಕ ಜೈಲರ ಎ.ಪಿ. ಕಾಂಬಳೆ ಹಾಗೂ ಗೋಪಾಲ ಹೊನಕಾಂಡೆ ಹಾಗೂ ಸಿಬ್ಬಂದಿಗಳು ಮತ್ತು ಬಂಧಿಗಳು ಉಪಸ್ಥಿತರಿದ್ದರು.