ವಿದ್ಯಾಕಾಶಿಗೆ ಕುಲಪತಿಗಳಾಗಿ ಡಾ. ಎ. ಎಂ. ಖಾನ ನೇಮಕ

ವಿದ್ಯಾಕಾಶಿಗೆ ಕುಲಪತಿಗಳಾಗಿ ಡಾ. ಎ. ಎಂ. ಖಾನ ನೇಮಕ  Dr. A. M. Khan appointed as chancellor

ಸಿಂಡಿಕೇಟ ಸದಸ್ಯರು, ಪ್ರಾಧ್ಯಾಪಕರು, ಡೀನ್ಸ್‌, ಶಿಕ್ಷಕೇತರರಿಂದ ಆತ್ಮೀಯ ಸ್ವಾಗತ 

ಧಾರವಾಡ 7: ಕರ್ನಾಟಕ ವಿಶ್ವವಿದ್ಯಾಲಯದ ಖಾಯಂ ಕುಲಪತಿಗಳಾಗಿ ಡಾ. ಎ. ಎಂ. ಖಾನ್ ಅವರು ಆಗಮಿಸಿದರು. ಖಾನ್ ಅವರ ಸ್ವಾಗತಕ್ಕೆ ಆಡಳಿತ ಕಚೇರಿಯ ಮುಂದೆ ಸಿಂಡಿಕೇಟ ಸದಸ್ಯರುಗಳಾದ ರಾಬರ್ಟ ದದ್ದಾಪುರಿ, ಡಾ. ಬಸವರಾಜ ಗೊರವರ, ಶ್ಯಾಮ ಮಲ್ಲನಗೌಡರ, ಹಾಗೂ ಮಹೇಶ ಹುಲೆನ್ನವರ ಮುಂದಾಳತ್ವ ವಹಿಸಿದ್ದರು. ಎಸ್‌.ಸಿ./ಎಸ್‌.ಟಿ. ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಸುಭಾಸಚಂದ್ರ ನಾಟೀಕಾರ, ಕವಿವಿ ಪ್ರಾಧ್ಯಾಪಕ ಸಂಘದ ಅಧ್ಯಕ್ಷರಾದ ಡಾ. ವೇದಮೂರ್ತಿ, ಡಾ. ಪವಾರ, ಡಾ. ಭಜಂತ್ರಿ, ಡಾ. ಎಸ್‌. ಆರ್‌. ಮಾನೆ, ಡಾ. ಸಿ. ಎಸ್‌. ಶಿರಾಳಶೆಟ್ಟಿ, ಕುಲಸಚಿವರು ಮೌಲ್ಯಮಾಪನ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಕೃಷ್ಣಮೂರ್ತಿ, ಕುಲಸಚಿವರು ಆಡಳಿತ ಡಾ. ಅರವಿಂದ ಮೂಲಿಮನಿ, ಡಾ. ನಾಗೂರ, ಡಾ. ಶೌಕತ್ ಅಲಿ, ಡಾ. ಜಯಶ್ರೀ ಎಸ್‌., ಮಂಜುನಾಥ ಚೆಬ್ಬಿ, ಡಾ. ಎನ್‌. ಎಚ್‌. ಕಲ್ಲೂರ, ಡಾ. ಮಲ್ಲಿಕಾರ್ಜುನ ಹುಲಿಬಂಡಿ, ಡಾ. ಶಾಲ್ಮಲಾ ರತ್ನಾಕರ, ಡಾ. ಪಿ. ಎಂ. ಪಾಟೀಲ, ಡಾ. ರಮಾನೆ, ಮೆಣಸಿನಕಾಯಿ, ಹಂಪಮ್ಮ, ಡಾ. ಚಂದುನವರ, ಕವಿವಿಯ ಘಟಕ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಕೆ. ಎಸ್‌. ಕಟಗಿ ಮುಂತಾದವರು ಹೂಗುಚ್ಛಗಳೊಂದಿಗೆ ಉಪಸ್ಥಿತರಿದ್ದರು. ಈ ಸಮಯದಲ್ಲಿ ಸಿಂಡಿಕೇಟ ಸದಸ್ಯರಾದ ರಾಬರ್ಟ ದದ್ದಾಪುರಿ ಹಾಗೂ ಡಾ. ಬಸವರಾಜ ಗೊರವರ ನೂತನ ಕುಲಪತಿಗಳಿಗೆ ಹಾಗೂ ಅವರ ಪತ್ನಿಗೆ ಶಾಲು, ಮೈಸೂರುಪೇಟಾ ಮತ್ತು ಯಾಲಕ್ಕಿ ಮಾಲೆಯನ್ನು ಹಾಕಿ ಬರಮಾಡಿಕೊಂಡರು. 

ನಂತರ ಕುಲಸಚಿವರು ಆಡಳಿತ, ಅವರೊಂದಿಗೆ ಕುಲಪತಿಗಳ ಕಚೇರಿಯವರೆಗೆ ರೆಡ್ ಕಾರ​‍್ಪಟ ಮೂಲಕ ಗೌರವ ನಡೆಯೊಂದಿಗೆ ತಲುಪಿದರು. ಕವಿವಿಯ ಎಲ್ಲ ಸಿಂಡಿಕೇಟ್‌ರುಗಳ, ವಿಭಾಗಗಳ ಮುಖ್ಯಸ್ಥರು, ಡೀನ್‌ರುಗಳು, ಪ್ರಾಧ್ಯಾಪಕರುಗಳು, ಸಹ ಪ್ರಾಧ್ಯಾಪಕರುಗಳು, ಶಿಕ್ಷಕಕೇತರ ಸಂಘದ ಪದಾಧಿಕಾರಿಗಳ, ಹಿತೈಷಿಗಳ, ಘಟಕ ಮಹಾವಿದ್ಯಾಲಯಗಳ ಪ್ರಾಧ್ಯಾಪಕರುಗಳ  ಹಾಜರಿಯಲ್ಲಿ ಪ್ರಭಾರಿ ಕುಲಪತಿಗಳಾದ ಡಾ. ಹೈದರಾಬಾದ ಅವರು ಅಧಿಕಾರವನ್ನು ನೂತನ ಕುಲಪತಿಗಳಾದ ಡಾ. ಎ. ಎಂ. ಖಾನ ಅವರಿಗೆ ಹಸ್ತಾಂತರಿಸಿದರು. ನೂತನ ಕುಲಪತಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಗಣ್ಯರು ಮಾತನಾಡಿ ನೂತನ ಕುಲಪತಿಗಳಿಗೆ ಶುಭ ಹಾರೈಸಿದರು. ಹಲವು ಪ್ರಾಧ್ಯಾಪಕರು, ಡೀನಗಳು, ಶಿಕ್ಷಕೇತರರು ಮಾತನಾಡಿ ವಿಶ್ವವಿದ್ಯಾಲಯದ ಸಾಧಕ ಬಾಧಕಗಳ ಬಗ್ಗೆ, ಪ್ರಗತಿಯ ಬಗ್ಗೆ, ನ್ಯೂನ್ಯತೆಗಳ ಬಗ್ಗೆ ಸೂಚ್ಯವಾಗಿ ತಿಳಿಸಿದರು. ಮುಖ್ಯವಾಗಿ ಡಾ. ಸುಭಾಸ ಚಂದ್ರ ನಾಟೀಕಾರ, ಡಾ. ವೇದಮೂರ್ತಿ, ಮೆಣಸಿನಕಾಯಿ, ಹಂಪಮ್ಮ ಮಾತನಾಡಿ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಸಿಂಡಿಕೇಟ ಸದಸ್ಯರುಗಳ ಪರವಾಗಿ ರಾಬರ್ಟ ದದ್ದಾಪುರಿ, ಡಾ. ಬಸವರಾಜ ಗೊರವರ,  ಶ್ಯಾಮ ಮಲ್ಲನಗೌಡರ, ಮಹೇಶ ಹುಲೆನ್ನವರ ಮಾತನಾಡಿ ಕವಿವಿಯು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಮತ್ತು “ಅರಿವೇಗುರು” ಧ್ಯೇಯವಾಕ್ಯದಡಿ ಕೆಲಸ ಮಾಡುತ್ತಿರುವ ಕವಿವಿಯ ಎಲ್ಲ ಶಿಕ್ಷಕ ಶಿಕ್ಷಕೇತರರು ಯಾವತತೂ ಕವಿವಿಯ ಶ್ರೇಯೋಭಿವೃದ್ಧಿಗಾಗಿ ಕಂಕಣಬದ್ಧರಾದ್ದಾರೆ ಎಂದು ಹೇಳಿದರು. ನೂತನ ಕುಲಪತಿಗಳಾದ ಡಾ. ಎ. ಎಂ. ಖಾನ ಅವರಿಗೆ ಭಾರತದ ಸಂವಿಧಾನದ ಪ್ರತಿಯನ್ನು ನೀಡಿದ ಸಿಂಡಿಕೇಟ ಸದಸ್ಯರು ಡಾ. ಎ. ಎಂ. ಖಾನ ಅವರ ಸೇವಾ ಅವಧಿಯಲ್ಲಿ ಅವರು ಪ್ರಗತಿಯ ಹೊಸ ಭಷ್ಯವನ್ನು ಬರೆಯಲಿ ಎಂದು ಹಾರೈಸಿದರು. 

ನೂತನ ಕುಲಪತಿಗಳು ಮಾತನಾಡಿ “ನಾನು ಧಾರವಾಡದಲ್ಲಿಯೇ ಶಿಕ್ಣವನ್ನು ಪೂರೈಸಿದ್ದೇನೆ. ನನ್ನ ಮನೆಯೂ ಧಾರವಾಡದಲ್ಲಿದೆ. ಕರ್ನಾಟಕ ವಿಶ್ವವಿದ್ಯಾಲಯದ ಏಳಿಗೆಯ ಬಗ್ಗೆ ನನಗೆ ಅನೇಕ ಕನಸುಗಳಿವೆ. ನಾವೆಲ್ಲರೂ ಸೇರಿ ಕನಾಟಕ ವಿಶ್ವವಿದ್ಯಾಲಯದ ಪ್ರಗತಿಗೆ ಶ್ರಮಿಸೋಣ ಎಂದು ಹೇಳಿದರು. ಪ್ರಾರಂಭದಲ್ಲಿ ಕುಲಸಚಿವರಾದ ಡಾ. ಅರವಿಂದ ಮೂಲಿಮನಿ ಸ್ವಾಗತಿಸಿದರು. ಮತ್ತು ಪ್ರಭಾರ ಕುಲಪತಿಯಾಗಿದ್ದ ಡಾ. ಹೈದರಾಬಾಎದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಕುಲಸಚಿವರು ಮೌಲ್ಯಮಾಪನ ನಿಜಲಿಂಗಪ್ಪ ಮಟ್ಟಿಹಾಳ ವಂದಿಸಿದರು,