ಡಬಲ್ ಮರ್ಡರ್ ಕೇಸ್ ರಾಂಪಾಲ್ ಅಪರಾಧಿ
ಹಿಸಾರ್(ಹರ್ಯಾಣ) 11: ಡಬಲ್ ಮರ್ಡರ್ ಕೇಸ್
ನಲ್ಲಿ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ ಎಂದು ಹಯರ್ಾಣದ ಹಿಸಾರ್
ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣ ಅ.16 ಅಥವಾ 17ರಂದು
ಪ್ರಕಟವಾಗಲಿದೆ.
ಬಾರ್ವಾಲದಲ್ಲಿರುವ ರಾಂಪಾಲ್ ನ ಸತ್ಲೋಕ್ ಆಶ್ರಮದ
ಹೊರಗೆ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾದ ಹಿನ್ನಲೆಯಲ್ಲಿ
ರಾಂಪಾಲ್ ನನ್ನು ಬಂಧಿಸಲಾಗಿತ್ತು. ಮತ್ತೊಂದು ಬಾರಿ ಆಶ್ರಮದಲ್ಲಿ
ಮತ್ತೊಬ್ಬ ಮಹಿಳೆಯ ಶವ ಸಿಕ್ಕಿದ ಹಿನ್ನಲೆಯಲ್ಲಿ
ರಾಂಪಾಲ್ ವಿರುದ್ಧ ಮತ್ತೊಂದು ಕೇಸು ದಾಖಲಾಗಿತ್ತು.
2015ರಲ್ಲಿ ಪೊಲೀಸರು ಮತ್ತು ರಾಂಪಾಲ್ ನ ಭಕ್ತರ ನಡುವೆ ತೀವ್ರ ವಾದ-ವಿವಾದಗಳು ನಡೆದ ನಂತರ ಕೊನೆಗೂ ರಾಂಪಾಲ್ ನನ್ನು ಬಂಧಿಸಲಾಗಿತ್ತು. ಅಪಾರ ಅನುಯಾಯಿಗಳನ್ನು ಹೊಂದಿರುವ ರಾಂಪಾಲ್ ನನ್ನು ಹಿಸಾರ್ ನ ಕೇಂದ್ರ ಕಾರಾಗೃಹ-2ರಲ್ಲಿರಿಸಲಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಮಾರು 80 ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಹೇಳಲಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 