ಡೋಣಿ ನದಿಗೆ ಪ್ರವಾಹ: ಪ್ರಮುಖ ರಸ್ತೆಗಳ ಸಂಚಾರ ಸ್ಥಗಿತ
Doni River floods: Traffic on major roads disrupted
ಡೋಣಿ ನದಿಗೆ ಪ್ರವಾಹ: ಪ್ರಮುಖ ರಸ್ತೆಗಳ ಸಂಚಾರ ಸ್ಥಗಿತ
ತಾಳಿಕೋಟಿ 10: ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಪ್ರವಾಹ ಬಂದಿರುವುದರಿಂದ ಪಟ್ಟಣದಿಂದ ಮುದ್ದೇಬಿಹಾಳ ಹಾಗೂ ವಿಜಯಪುರಕ್ಕೆ ಹೋಗುವ ಎರಡೂ ಮಾರ್ಗಗಳು ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಳಿಕೋಟಿ ವಿಜಯಪುರ ಮಾರ್ಗದ ಮುಖ್ಯ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕೆಳ ಸೇತುವೆ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಆದರೀಗ ಅದು ಸಂಪೂರ್ಣ ಜಲಾವೃತಗೊಂಡಿರುವುದರಿಂದ ಮೂಕಿಹಾಳ ಗ್ರಾಮದ ಹತ್ತಿರ ಸೋಗ್ಲಿ ಹಳ್ಳಕ್ಕೆ ನಿರ್ಮಾಣ ಮಾಡಿದ ಸೇತುವೆಯ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು ಇವತ್ತು ಅದು ಕೂಡಾ ಜಲಾವೃತಗೊಂಡು ಸಂಚಾರ ಮಾಡದ ಪರಿಸ್ಥಿತಿ ಉದ್ಭವಿಸಿದೆ, ಹೀಗಾಗಿ ತಾಳಿಕೋಟಿ ಪಟ್ಟಣದಿಂದ ಮುದ್ದೇಬಿಹಾಳ ಹಾಗೂ ವಿಜಯಪುರಕ್ಕೆ ಹೋಗುವ ಎರಡು ಪ್ರಮುಖ ಮಾರ್ಗಗಳು ಸಂಪರ್ಕ ಕಳೆದುಕೊಂಡಿದ್ದು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಹೋಗಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಡೋಣಿ ನದಿ ತಟದ ಬಾಡಿಹಾಳ, ಬೊಮ್ಮನಹಳ್ಳಿ ಗ್ರಾಮಗಳಲ್ಲಿಯೂ ಡೋಣಿ ನದಿಯ ಹಿನ್ನೀರಿನಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ತಮ್ಮ ಜಮೀನುಗಳಲ್ಲಿ ಬೆಳೆದು ನಿಂತ ಬೆಳೆ ಹಾಳಾಗಿ ಹೋಗುವ ಸಾಧ್ಯತೆಗಳಿವೆ ಎಂದು ರೈತರು ಕಂಗಲಾಗಿದ್ದಾರೆ. ಪ್ರವಾಹ ಪರಿಸ್ಥಿತಿ ಹಾಗೂ ನೀರಿನ ಮಟ್ಟ ಪರೀಶೀಲಿಸಲು ತಾಳಿಕೋಟಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 