ಕೈಗಾರಿಕೋದ್ಯಮಿಗಳಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ
ಬೆಂಗಳೂರು, ಮಾ.31,ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ವತಿಯಿಂದ ಬೃಹತ್ ಮೊತ್ತದ ದೇಣಿಗೆ ಘೊಷಿಸಿವೆ.ಏಷಿಯನ್ ಪೇಂಟ್ ಕಂಪನಿಯು 2 ಕೋಟಿ ರೂಗಳನ್ನು ಈಗಾಗಲೇ ಸಿಎಂ ನಿಧಿಗೆ ಅರ್ಪಿಸಿದ್ದಾರೆ. ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ವತಿಯಿಂದ 31 ಲಕ್ಷ ರೂ, ಜಿಯೋಮಿ ಟೆಕ್ನಾಲಜಿ, ಜೆ.ಎಂ. ಫಿನಾಶಿಯಲ್ ಕಂಪನಿಯು ತಲಾ 25 ಲಕ್ಷ ರೂ., ಟೊಯೋಟಾ ಕಿರ್ಲೋಸ್ಕರ್ ಆಟೋಪಾರ್ಟ್ಸ್ ವತಿಯಿಂದ 23 ಲಕ್ಷ ರೂ., ಕೆನ್ನಾ ಮೆಟಲ್ಸ್ ವತಿಯಿಂದ 15 ಲಕ್ಷ ರೂ, ಬ್ರಿಗೇಡ್ ಎಂಟರ್ಪ್ರೈಸಸ್ ವತಿಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿವೆ. ಜೊತೆಗೆ ಸ್ಯಾಮ್ಸಂಗ್ ಆರ್ ಆ್ಯಂಡ್ ಡಿ ಕಂಪನಿಯಿಂದ 1 ಕೋಟಿ ರೂ. ಮೊತ್ತದ ಹೆಲ್ತ್ ಕಿಟ್ ಅನ್ನು ಕೊರಿಯಾ ದೇಶದಿಂದ ಆಮದು ಮಾಡಿಕೊಳ್ಳುವುದಾಗಿ ಘೋಷಿಸಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ ವತಿಯಿಂದ 30 ಲಕ್ಷ ರೂ, ದೇಣಿಗೆ ಸಹಿತ ವೈದ್ಯರು ಹಾಗೂ ನರ್ಸ್ಗಳಿಗೆ 500 ಬಾಡಿ ಸ್ಯೂಟ್, 5 ಸಾವಿರ ಎನ್95 ಮಾಸ್ಕ್ ಹಾಗೂ ರಾಮನಗರ ಭಾಗದಲ್ಲಿ ಬಡ ಕುಟುಂಬಗಳಿಗೆ 1200 ಊಟದ ಪೊಟ್ಟಣ ನೀಡುತ್ತಿದೆ.ಹಿಮಾಟ್ಸಿಂಗ್ ಸೈಡ್ ಲಿಮಿಟೆಡ್ ವತಿಯಿಂದ 10 ಕೋಟಿ ರು. ಮೊತ್ತದ ಪಿಲ್ಲೋ ಕವರ್, ಬೆಡ್ಶೀಟ್, ಟವಲ್ಗಳನ್ನು ನೀಡುವ ಹೊಣೆ ಹೊತ್ತಿದೆ. ಜೊತೆಗೆ ಬ್ರಿಟಾನಿಯಾ ಇಂಡಸ್ಟ್ರೀ, ವಿಪ್ರೋ, ಜೆಎಸ್ಕೆ, ಜ್ಯೋತಿಲಾಲ್ ಮೆಡಿಸನ್ ಕಂಪನಿಗಳು ಸಹ ಇತರೆ ಆರೋಗ್ಯ ಕಿಟ್ ಹಾಗೂ ದೇಣಿಗೆ ಘೋಷಿಸಿವೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 