ಕಂಪ್ಲಿಯ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲೆಗೆ ಕಲ್ಲಂಗಡಿ ಹಣ್ಣುಗಳ ದೇಣಿಗೆ
Donation of watermelons to Kamadhenu Goshala, Kalyanachowki Math, Kampli
ಲೋಕದರ್ಶನ ವರದಿ
ಕಂಪ್ಲಿ 27: ತಾಲ್ಲೂಕಿನ ದೇವಸಮುದ್ರ ಕ್ರಾಸ್ ಹತ್ತಿರದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ಯಾಕ್ಟರ್ ನಷ್ಟು ಕಲ್ಲಂಗಡಿ ಹಣ್ಣುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಮೂರ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿ ಬೆಲೆ ಅತ್ಯಂತ ಪಾತಾಳಕ್ಕೆ ಇಳಿದಿದ್ದರಿಂದ ಹಾಗೂ ಹಣ್ಣು ಕೀಳುವ ಕೂಲಿಯೂ ಬಾರದೇ ಇರುವುದರಿಂದ ಅವುಗಳನ್ನು ಜಮೀನಿನಲ್ಲಿಯೇ ಹಾಳುಮಾಡುವ ಬದಲಿಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಹಾಗೂ ಗೋಶಾಲೆಯನ್ನು ಆರಂಭಿಸುವ ಮೂಲಕ ಜಾನುವಾರುಗಳಿಗೆ ಆಶ್ರಯದಾತವನಾಗಿರುವ ಜೊತೆಗೆ ಗೋವುಗಳಿಂದಾಗುವ ಅನುಕೂಲಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಗೆ ನೀಡುತ್ತಿರುವುದಾಗಿ ತಿಳಿಸಿದರು.
ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆಯ ಮುಖ್ಯಸ್ಥರಾದ ಕೆ.ಎಂ.ಬಸವರಾಜ ಶಾಸ್ತ್ರಿಗಳು ಮಾತನಾಡಿ ಗೋಶಾಲೆಯಲ್ಲಿ ನೂರಾರು ಗೋವುಗಳನ್ನು ಸಾಕಲಾಗುತ್ತಿದೆ. ಈ ಭಾಗದಲ್ಲಿ ಎರಡನೇ ಬೆಳೆ ಇಲ್ಲದೇ ಇರುವುದರಿಂದ ಗೋವುಗಳಿಗೆ ತೊಂದರೆಯಾಗತ್ತಿದ್ದು, ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಒಂದು ಲೋಡ್ ಕಲ್ಲಂಗಡಿಗಳನ್ನು ದೇಣಿಗೆಯಾಗಿ ನೀಡಿದ್ದು ಗೋವುಗಳಿಗೆ ಅನುಕೂಲವಾಗಿದೆ. ಅವರ ಗೋವುಗಳ ಸೇವೆಗೆ ಭಗವಂತನು ಒಳಿತನ್ನು ಮಾಡಲಿಎಂದರು.
ಗೋಶಾಲೆಗೆ ಮೇವು ಕೊಡಿ : ತಾಲ್ಲೂಕಿನಲ್ಲಿ ಗೋಶಾಲೆಯನ್ನು ಆರಂಭಿಸಿದ್ದು, ಗುಡ್ಡದ ಪ್ರದೇಶದಲ್ಲಿ ಗೋಶಾಲೆ ಇರುವುದರಿಂದ ಹಾಗೂ ಮಳೆ ಇಲ್ಲದೇ ಇರುವುದರಿಂದ ಯಾವುದೇ ಬೆಳೆಯನ್ನು ಬೆಳೆಯಲಾಗುತ್ತಿಲ್ಲ ಜೊತೆಗೆ ಈ ಭಾಗದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಗೋವುಗಳ ಮೇವಿಗೆ ತೊಂದರೆಯಾಗಿದ್ದು,ತಾಲ್ಲುಕಿನ ಹಾಗೂ ಅಕ್ಕಪಕ್ಕದ ತಾಲ್ಲೂಕಿನ ರೈತರು ನಮ್ಮ ಗೋಶಾಲೆಗೆ ಮೇವನ್ನು ನೀಡುವಂತೆ ಮನವಿ ಮಾಡಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 