ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದು: ಕಾಕಾಸಾಬ ಪಾಟೀಲ
ಕಾಗವಾಡ 07: ರಕ್ತದಾನವೂ ಇಲ್ಲ ದಾನಗಳಲ್ಲಿ ಶ್ರೇಷ್ಠವಾಗಿದ್ದು, ರಕ್ತದಾನ ಮಾಡಿ, ಮತ್ತೊಬ್ಬರ ಜೀವ ಉಳಿಸಬಹುದು. ಜೊತೆಗೆ ನಿಯಮಿತ ರಕ್ತದಾನದಿಂದ ಹೊಸ ರಕ್ತದ ಉತ್ಪತ್ತಿಯಾಗಿ, ಆರೋಗ್ಯವಂತರಾಗಿರಬಗುದೆಂದು ಜುಗೂಳ ಗ್ರಾಮ ಪಂಚಾಯತ ಅಧ್ಯಕ್ಷ ಕಾಕಾಸಾಬ ಪಾಟೀಲ ಹೇಳಿದ್ದಾರೆ.
ಶನಿವಾರ ದಿ. 70 ರಂದು ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಗುಪ್ಪಿ, ಗ್ರಾಮ ಪಂಚಾಯತಿ ಜುಗೂಳ ಹಾಗೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ರಕ್ತ ಭಂಡಾರ ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ಯುವಕರು ನಿಯಮಿತ ರಕ್ತದಾನ ಮಾಡಿ, ತಾವು ಆರೋಗ್ಯವಂತಾಗಿರುವುದಲ್ಲದೇ ರಕ್ತದ ಅವಶ್ಯಕತೆ ಇದ್ದ ನೂರಾರು ಜೀವಿಗಳಿಗೆ ಆಸರೆಯಾಗುತ್ತಾರೆ ಎಂದರು.ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯ ವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಸುಮಾರು 30 ಜನರು ರಕ್ತದಾನ ಮಾಡಿದರು. ಅವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ಈ ಸಮಯದಲ್ಲಿ ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅಭಿಜೀತ ಬಲ್ಲಾಡೆ, ಎಚ್‌ಎಸ್‌ಐಓ ಆನಂದ ಶಿಂಗೆ, ಸಿಎಚ್‌ಓ ನಾಗರಾಜ ಕಾಂಬಳೆ, ರೇಸ್ಮಾ ಹೈದರಲಿ, ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಪಿಡಿಓ ಶೈಲಶ್ರೀ ಭಜಂತ್ರಿ, ಮುಖಂಡರಾದ ಮಹಾದೇವ ಕಾಂಬಳೆ, ರಾಜುಗೌಡ ಪಾಟೀಲ, ಉದಯ ದೇಸಾಯಿ, ಅವಿನಾಶ ಪಾಟೀಲ, ನೀತೀನ ಪಾಟೀಲ, ಬಾಬಾಸಾಬ ತಾರದಾಳೆ, ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ವರ್ಗದವರು, ಜುಗೂಳ, ಶಿರಗುಪ್ಪಿ, ಶಹಾಪೂರ, ಮಂಗಾವತಿ ಗ್ರಾಮದ ಆಶಾ ಕಾರ್ಯಾಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.