ರಕ್ತದಾನ ಮಾಡಿ, ಜೀವ ಉಳಿಸಿ: ವಿದ್ಯಾಥರ್ಿಗಳಿಗೆ ಡಾ. ಪ್ರಭಯ್ಯ ಕಿವಿಮಾತು

ಹೊಸಪೇಟೆ22: "ಜೀವ ರಕ್ಷಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾಥರ್ಿಗಳು ಭಾಗಿಯಾಗಬೇಕು" ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ.ಎಸ್. ಪ್ರಭಯ್ಯ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

        ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಶುಕ್ರವಾರ 22ರಂದು ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

"18ರಿಂದ 60 ವರ್ಷ ಒಳಗಿನ, ಮಾನಸಿಕ, ದೈಹಿಕ ಸದೃಢ ಹೊಂದಿದ 50 ಕೆ.ಜಿ. ತೂಕದ ವ್ಯಕ್ತಿಗಳು ರಕ್ತದಾನ ಮಾಡಲು ಅರ್ಹರು. ಆರೋಗ್ಯವಂತ ಮನುಷ್ಯನ ದೇಹದಲ್ಲಿ 5ರಿಂದ 6ಲೀಟರ್ ರಕ್ತ ಇರುತ್ತದೆ.

   ಇದರಲ್ಲಿ ಕೇವಲ 350 ಮಿ.ಲೀ. ಮಾತ್ರ ರಕ್ತ ಪಡೆಯಲಾಗುವುದು. ದೇಶಾದ್ಯಂತ ಪ್ರತಿ 2 ಸೆಕೆಂಡಿಗೆ ಒಬ್ಬರಂತೆ ರಕ್ತದ ಅವಶ್ಯಕತೆ ಇದೆ. ರಕ್ತದಾನದಿಂದ ಜೀವ ಉಳಿಸಬಹುದಾಗಿದ್ದು ಇದು ಶ್ರೇಷ್ಠ ದಾನವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾಥರ್ಿಗಳು ಪ್ರಯತ್ನಿಸಬೇಕು, ಪಿಡಿಐಟಿಯ ನೂರಾರು ವಿದ್ಯಾಥರ್ಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ನೋಂದಾಯಿಸಿಕೊಂಡಿರುವುದು ಶ್ಲಾಘನೀಯ" ಎಂದು ಡಾ. ಪ್ರಭಯ್ಯ ಹೇಳಿದರು.

ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ "ರಕ್ತಕ್ಕೆ ಬೇರೆ ಪಯರ್ಾಯವಿಲ್ಲ. 

 ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಎಷ್ಟೇ ಕೋಟಿ ಕೊಟ್ಟರೂ ರಕ್ತ ಸೃಷ್ಟಿ ಮಾಡಲಾಗುವುದಿಲ್ಲ.

   ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

       ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜಕ ಆರ್. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರತಾಪ್ ಕುಲಕಣರ್ಿ ವಂದನಾರ್ಪಣೆ ಸಲ್ಲಿಸಿದರು. ಶಿಬಿರದಲ್ಲಿ ಅರ್ಹ ನೂರಕ್ಕೂ ಹೆಚ್ಚು ವಿದ್ಯಾಥರ್ಿ, ವಿದ್ಯಾಥರ್ಿನಿಯರು ರಕ್ತದಾನ ಮಾಡಿದರು.