ಸದೃಢ ಆರೋಗ್ಯಕ್ಕಾಗಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಿ: ಇಂಗಳಗಿ
Donate blood once every 4 months for good health - Ingalagi
ರಾಣೇಬೆನ್ನೂರ 01: ಮಾನವನ ಅತ್ಯುತ್ತಮ ಅಂಗಗಳಲ್ಲಿ ಕಣ್ಣು ಮತ್ತು ರಕ್ತ ಬಹುಮುಖ್ಯವಾಗಿವೆ. ಹೊರ ಜಗತ್ತನ್ನು ನೋಡಲು ಕಣ್ಣನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಸದೃಢ ವ್ಯಕ್ತಿಗಳು ಕನಿಷ್ಠ 4ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಎಫ್ ಐ ಇಂಗಳಗಿ ಹೇಳಿದರು. ಅವರು ಸೋಮವಾರ ನಗರದ ಹೊರ ವಲಯದ ಅಡವಿ ಆಂಜನೇಯ ಬಡಾವಣೆ ಶಾಲೆ ನಂ 3 ಮತ್ತು ಶಾಲೆ ನಂ10 ರಲ್ಲಿ ಶ್ರೀ ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ , ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ) , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿವಾರಣಾ ಸಂಸ್ಥೆ ಹಾವೇರಿ, ಜಿಲ್ಲಾ ನೇತ್ರ ಸಂಚಾರಿ ಘಟಕ ಹಾವೇರಿ, ಎನ್.ಎಸ್. ಸ್ನೇಹಜ್ಯೋತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು..
ಕಣ್ಣು ಬಹು ಸೂಕ್ಷ್ಮವಾದ ಮನುಷ್ಯನ ಅಂಗಗಳಲ್ಲಿ ಒಂದಾಗಿದೆ. ಕಣ್ಣಲ್ಲದೇ ಜೀವನ ಇಲ್ಲ ಎನ್ನುವವರು ಕಣ್ಣಿನ ಬಗ್ಗೆ ಬಹಳಷ್ಟು ಜಾಗರೂಕತೆ ವಹಿಸಬೇಕು . ಜೊತೆಗೆ ಸಾವಿನ ಆನಂತರ ಕಣ್ಣು ದಾನ ಮಾಡಿ ಇತರರಿಗೆ ಬೆಳಕಾಗಬೇಕು. ಹೃದಯಾಘಾತ ತಡೆಗೆ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆಗೊಳಿಸಲು ರಕ್ತದಾನ ಮಾಡಿ ಆರೋಗ್ಯವಂತರಾಗಬೇಕು ಎಂದರು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ ಹಿಂದುಳಿದ ಭಾಗಗಳಲ್ಲಿ ಒಂದಾಗಿರುವ ಅಡವಿ ಆಂಜನೇಯ ಬಡಾವಣೆಯಲ್ಲಿನ ಕನ್ನಡ ಮತ್ತು ಉರ್ದು ಶಾಲೆಗಳು ಸುವ್ಯವಸ್ಥಿತವಾಗಿರಲು ಹಾಗೂ ಅಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಅವ್ಯವಸ್ಥೆಯಿಂದ ದೂರವಾಗಲು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಬೇಕೆಂದು ಈಗಾಗಲೇ ವೇದಿಕೆ ವತಿಯಿಂದ ಒತ್ತಾಯಿಸಲಾಗಿದೆ. ಈ ಶಾಲೆಗಳಿಗೆ ಕಂಪೌಂಡ ಸೇರಿ ಮೂಲಭೂತ ಸೌಲಭ್ಯಗಳನ್ನು ನಗರಸಭೆ ವತಿಯಿಂದ ಕಲ್ಪಿಸಿ ಬಡಾವಣೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಗ್ರಹಿಸಿದರು. ಜೊತೆಗೆ ಈ ಬಾರಿ ಈ ಹಿಂದುಳಿದ ಭಾಗದಲ್ಲಿಯೇ ನೇತ್ರ ತಪಾಸಣಾ ಹಾಗೂ ಜಾಗೃತಿಗಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭೆ ಅಧ್ಯಕ್ಷೆ ಚಂಪಕ ರಮೇಶ್ ಬಿಸಲಳ್ಳಿ ಮಾತನಾಡಿ ಈ ಶಾಲೆಗಳಿಗೆ ಕಂಪೌಂಡ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಒಟ್ಟು 70ಕ್ಕೂ ಅಧಿಕ ಜನರ ನೇತ್ರ ತಪಾಸಣೆ ಮಾಡಲಾಯಿತು. ಇದರಲ್ಲಿ 13 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು. 6ಜನರು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ್, ಕೊಟ್ರೇಶಪ್ಪ ಎಮ್ಮಿ , ಮಲ್ಲಿಕಾರ್ಜುನ ಸಾವಕ್ಕಳ್ಳವರ, ಚಂದ್ರ್ಪ ಬಣಕಾರ, ಪರಸಪ್ಪ ಕುರುವತ್ತಿ , ಮುತ್ತಣ್ಣ ಕರಿಯಜ್ಜಿ, ರಿಯಾಜ್ ದೊಡ್ಡಮನಿ, ಅಣ್ಣಪ್ಪ ಚಲವಾದಿ, ಎಸ್ ಡಿಎಂಸಿ ಅಧ ಮಾಲಾ ಕುಸಗೂರ, ಜಾವೀದ್ ಶಿಕಾರಿಪುರ, ಪ್ರಧಾನ ಗುರುಗಳಾದ ಎನ್.ಹೆಚ್. ಭಜಂತ್ರಿ, ಸಲೀಂ ಬಡಿಗೇರ, ಪತ್ರಕರ್ತ ಎಂ.ಚಿರಂಜೀವಿ, ರಮೇಶ ಜಾಧವ, ಮಾಲತೇಶ ಸಾವಂತಲವರ, ಬಸವೇಶ್ವರ ರಕ್ತ ಕೇಂದ್ರ ಸಂಯೋಜಕ ಡಾ. ಪ್ರಶಾಂತ, ಶಂಕರ ಕಣ್ಣಿನ ಆಸ್ಪತ್ರೆ ಸಂಯೋಜಕ ಅರುಣ ಜಿ. ಹೆಚ್. ಸೇರಿದಂತೆ ಶಾಲಾ ಶಿಕ್ಷಕರು, ನಾಗರೀಕರು, ನೇತ್ರ ಹಾಗೂ ರಕ್ತದಾನ ಶಿಬಿರದ ಸಿಬ್ಬಂದಿಗಳು ಇದ್ದರು .
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 