ಜಂತು ಹುಳು ಬಗ್ಗೆ ನಿರ್ಲಕ್ಷ್ಯ ಬೇಡ: ಗೋಣೆಣ್ಣವರ

ಲೋಕದರ್ಶನ ವರದಿ

ಶಿರಹಟ್ಟಿ: ಮಕ್ಕಳು ತಿನ್ನುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಒಂದೆಡೆಯಾದರೆ, ಮಕ್ಕಳ ದೇಹದಲ್ಲಿ ಜಂತುಹುಳುಗಳು ಆಹಾರ ಕಬಳಿಸಿ ಮತ್ತೊಂದೆಡೆ ಮಕ್ಕಳನ್ನು ಅನಾರೋಗ್ಯಕ್ಕೆ ಸಿಲುಕಿಸುತ್ತವೆ ಎಂದು ತಹಶೀಲ್ದಾರ ಎಲ್ಲಪ್ಪ ಗೋಣರಣ್ಣವರ ಹೇಳಿದರು.

ಅವರು ಪಟ್ಟಣದ ಗಂಡು ಮಕ್ಕಳ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಇಲಾಖೆಯಿಂದ ಜಂತುಹುಳು ನಿವಾರಣೆಗಾಗಿ ನೀಡುವ ಮಾತ್ರೆಯನ್ನು  ಶಾಲಾ ಮಕ್ಕಳು ಅಗತ್ಯವಾಗಿ ಸೇವಿಸಬೇಕು. ಅಲ್ಲದೆ ಇಂದು ಶಾಲೆಗೆ ಬರದ ಮಕ್ಕಳು ಕೂಡಾ ಇಲಾಖೆಯಿಂದ ಮಾತ್ರಯನ್ನು ಪಡೆದು ಸೇವಿಸ ಬೇಕು. ಅಲ್ಲದೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಕೈ ತೊಳೆಯುವದು, ಊಟಕ್ಕೆ ಮೊದಲು ಮತ್ತು ಆಟವಾಡಿದ ನಂತರ ಕೈ ತೊಳೆಯುವ ಅಭ್ಯಾಸವನ್ನು ಇಗಿನಿಂದಲೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ಡಾ. ಚಂದ್ರು ಲಮಾಣಿ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಕಡಿಮೆಗೋಳಿಸಲು ಮತ್ತು ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡುವ ಮೂಲಕ  ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. ಇಂದು ಮಾತ್ರೆಯನ್ನು ಸೇವಿಸದೆಯಿರುವ ಮಕ್ಕಳಿಗೆ ಮತ್ತೆ ಇದೆ ತಿಂಗಳ 30ನೇ ತಾರೀಖನಂದು ನೀಡಲಗುವದು. ಕಾರಣ ಶಿಕ್ಷಕರು ಇಂದು ಗೈರಹಾಜರ ಇರುವ ಮಕ್ಕಳು ದಿನಾಂಕ 30ರಂದು ಶಾಲೆಯನ್ನು ತಪ್ಪಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬಿ.ಎಸ್.ಹಿರೇಮಠ, ಆರ್.ಎಚ್.ಪರಬತ, ಕುಬೇರ ಟೀಚರ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.