ಅಭಿಜಿತ್ ಬ್ಯಾನರ್ಜಿ ಸಾಧನೆ ಕಿರಿದಾಗಿಸಬೇಡಿ; ಬಿಜೆಪಿ ನಾಯಕರಿಗೆ ಪ್ರಿಯಾಂಕಾ ಗಾಂಧಿ ಸಲಹೆ

ನವದೆಹಲಿ, ಅ.19:  ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನಜರ್ಿ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು  ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.   

ಬಿಜೆಪಿ ನಾಯಕರು ತಾವು ಮಾಡಬೇಕಾದ ಕೆಲಸ ಮಾಡದೆ, ಇತರರ ಸಾಧನೆಯನ್ನು ಕಿರಿದಾಗಿ ಬಿಂಬಿಸಲು ಲಘುವಾಗಿ ಮಾತನಾಡುವುದು ತರವಲ್ಲ ಎಂದು ಸಲಹೆ ನೀಡಿದ್ದಾರೆ. 

ತಮ್ಮ ಕೆಲಸಗಳನ್ನು ಮರೆತು ಇತರರ ಸಾಧನೆ ಏನೂ ಅಲ್ಲ ಎಂದು ಬಿಂಬಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ (ಅಭಿಜಿತ್ ಬ್ಯಾನಜರ್ಿ) ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಪ್ರತಿಷ್ಠಿತ ಪುರಸ್ಕಾರ ಪಡೆದುಕೊಂಡಿದ್ದಾರೆ. ಪ್ರಸ್ತುತ ದೇಶದ ಆಥರ್ಿಕ ವ್ಯವಸ್ಥೆ ದುಸ್ಥಿತಿಗೆ ತಲುಪಿದೆ,  ನಿಮ್ಮ (ಬಿಜೆಪಿ ನಾಯಕರ) ಕೆಲಸ ಆಥರ್ಿಕತೆಯನ್ನು ಸರಿದಾರಿಗೆ ತರುವ, ಸುಧಾರಿಸುವ ಕೆಲಸಮಾಡಬೇಕು. ಅದನ್ನು ಬಿಟ್ಟು  ಹಾಸ್ಯ ಮಾಡುವುದು ಅಲ್ಲ ಎಂದು ಪ್ರಿಯಾಂಕಾ ಟ್ವೀಟ್ನಲ್ಲಿ ತಿಳಿಸಿ, ಸರಣಿ ಹಬ್ಬಗಳ ತಿಂಗಳಾಗಿದ್ದ ಸೆಪ್ಟಂಬರ್ನಲ್ಲಿ  ದೇಶದ ಆಟೋಮೊಬೈಲ್ ವಲಯ ಮಂದಗತಿಯಲ್ಲಿ ಸಾಗಿದ್ದ  ಮಾಧ್ಯಮ  ವರದಿ ಹಂಚಿಕೊಂಡಿದ್ದಾರೆ. 

ಪ್ರಮುಖ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಅಭಿಜಿತ್ ಬ್ಯಾನಜರ್ಿ ಅವರು ನೊಬೆಲ್ ಪುರಸ್ಕಾರಕ್ಕೆ ಭಾಜನವಾಗಿರುವುದಕ್ಕೆ ಶುಕ್ರವಾರ  ಅಭಿನಂದನೆ ಸಲ್ಲಿಸಿದ್ದ  ಕೇಂದ್ರ ಸಚಿವ ಪಿಯೂಷ್ ಗೋಯಲ್, ಅಭಿಜಿತ್ ಎಡಪಂಥೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಚುನಾವಣಾ ಘೋಷಣೆಯಾಗಿದ್ದ  ನ್ಯಾಯ್  ಅನ್ನು ಅಭಿಜಿತ್  ಬೆಂಬಲಿಸಿದ್ದರು, ಆದರೆ, ಭಾರತೀಯರು ಅವರ ಪರಿಕಲ್ಪನೆಯನ್ನು ಚುನಾವಣೆಯಲ್ಲಿ ತಿರಸ್ಕರಿಸಿದ್ದರು ಎಂದು ಹೇಳಿದ್ದರು.   

ಭಾರತದ ಆಥರ್ಿಕತೆ ಅಸ್ಥಿರವಾಗಿದೆ,  ಪ್ರಸ್ತುತ ಲೆಕ್ಕಾಚಾರ ಪ್ರಕಾರ ಸದ್ಯದ ಭವಿಷ್ಯದಲ್ಲಿ ದೇಶದ ಆಥರ್ಿಕತೆ ಪುರುಜ್ಜೀವನಗೊಳ್ಳುವ  ಯಾವುದೇ ಸಾಧ್ಯತೆಯಿಲ್ಲ ಎಂದು ಅಭಿಜಿತ್ ಬ್ಯಾನಜರ್ಿ ಇತ್ತೀಚೆಗೆ ವಿಶ್ಲೇಷಿಸಿದ್ದರು.