ಮಕ್ಕಳಿಗೆ ಮೋಬೈಲ ಕೊಡಬೇಡಿ ಸಂಸ್ಕಾರ ಕೊಡಿ: ರವಿ ಭಜಂತ್ರಿ

ಮಕ್ಕಳಿಗೆ ಮೋಬೈಲ ಕೊಡಬೇಡಿ ಸಂಸ್ಕಾರ ಕೊಡಿ: ರವಿ ಭಜಂತ್ರಿ Don't give mobile phones to children, give them sanskar: Ravi Bhajantri

ಲೋಕದರ್ಶನ ವರದಿ 

ಯಮಕನಮರಡಿ 24: ಆಧುನಿಕ ಯುಗದಲ್ಲಿ ಮಠ ಮಾನ್ಯಗಳು ಶಾಲಾ ಮಕ್ಕಳಿಗೆ ಸಂಸ್ಕಾರ ನೀಡುವುದರ ಜೊತೆಗೆ ಶಿಕ್ಷಣ ವೃದ್ಧಿಗಾಗಿ ಶಿಷ್ಯವೇತನ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರವಿ ಭಜಂತ್ರಿ ಹೇಳಿದರು. 

 ಅವರು ದಿ. 22ರಂದು ಯಮಕನಮರಡಿ ಹತ್ತರಗಿ ಹರಿಮಂದಿರದಲ್ಲಿ ಆಯೋಜಿಸಲಾಗಿದ್ದ ಏಕನಾಥ ದಾದಾ ಮಹಾರಾಜರ 23ನೇ ವರ್ಷದ ಪುಣ್ಯಸ್ಮರಣೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶ್ರೀಮಠವು ಗಡಿಭಾಗದಲ್ಲಿರುವುದರಿಂದ ಪೂಜ್ಯ ಡಾ. ಆನಂದ ಮಹಾರಾಜರು ಜಾತಿ ಮತ ಪಂಥ ಎನ್ನದೆ ಜಾತ್ಯಾತೀತತೆ ಶ್ರೀಮಠದ ಸಂಪತ್ತು. ಎಲ್ಲ ಬಡ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಸುಮಾರು 22 ವರ್ಷಗಳ ಕಾಲ ಬಡ ವಿದ್ಯಾರ್ಥಿಗೆ ಶಿಷ್ಯವೇತನ ನೀಡುವ ಕಾರ್ಯ ನಾಡಿನ ಉದ್ದಕ್ಕೂ ಮೆಚ್ಚುವಂತದಾಗಿದೆ ಎಂದು ಹೇಳಿದರು.  

ಗಡಿಭಾಗದ ಅತಿಥಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದು ಸ್ಥಳೀಯ ಸರ್ಕಾರಿ ಪ ಪೂ ಮಹಾವಿದ್ಯಾಲಯದ ಬಿ ಬಿ ಕೊಡ್ಲಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಭಗವದ್ಗಿತಾ ಪಾರಾಯಣ ಮಾಡಲಾಯಿತು. 

ರಾಜ್ಯ ಮಟ್ಟದ ಕ್ರೀಡಾ ವಿಭಾಗದಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಸಾನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷ ಡಾ. ಆನಂದ ಮಹಾರಾಜ ಗೋಸಾವಿ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಪರವಾಗಿ ಹತ್ತರಗಿ ಯಮಕನಮರಡಿ ಸಿಆರ್‌ಸಿ ಸದಾನಂದ ಭಿಮಗೋಳ ಕನ್ನಡ ರಕ್ಷಣಾ ಜಿಲ್ಲಾ ಉಪಾಧ್ಯಕ್ಷ ರಾಜು ನಾಶಿಪುಡಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರಾಮಚಂದ್ರ ಕುಲಕರ್ಣಿ ವಹಿಸಿ ಮಾತನಾಡಿದರು. ಉಪನ್ಯಾಸಕ ಎಸ್ ಆರ್ ತಬರಿ ನಿರೂಪಿಸಿ ವಂದಿಸಿದರು.