ಮತದಾನದ ಕುರಿತು ನಿರ್ಲಕ್ಷ ಬೇಡ: ಪ್ರಾಧ್ಯಾಪಕ ಅಬ್ಬಾರ್‌

ಮತದಾನದ ಕುರಿತು ನಿರ್ಲಕ್ಷ ಬೇಡ: ಪ್ರಾಧ್ಯಾಪಕ ಅಬ್ಬಾರ್‌ Don't be careless about voting: Professor Abbar

ತಾಳಿಕೋಟಿ, 25 ; ಮತದಾರ ಮಾಡುವ ಜನಪ್ರತಿನಿಧಿಯ ಆಯ್ಕೆ ಆತನ ಅಭಿರುಚಿಯನ್ನು ಸೂಚಿಸುತ್ತದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ಯುವಜನರ ಪಾತ್ರ ದೊಡ್ಡದು ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 17ರಷ್ಟು ಭಾರತೀಯರು ಇದ್ದಾರೆ ಆದರೆ ಅವರ ಪೈಕಿ ಭಾರತದಲ್ಲಿ ಕೆಲವೇ ಕೆಲವು ಜನ ಮತದಾನದ ಹಕ್ಕನ್ನು ಹೊಂದಿದ್ದಾರೆ.  

ಎಲ್ಲರಿಗೂ ಅದು ಸಿಗುವಂತಾಗಬೇಕು ಯುವ ಮತದಾರರು ಮತದಾನದ ಬಗ್ಗೆ ಅಸಡ್ಡೆ, ಅನಾಸಕ್ತಿ ತೋರಬಾರದು, ಪ್ರತಿಯೊಂದು ಮತವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸಹಾಯಕ ಪ್ರಾಧ್ಯಾಪಕರು ಖಾಸ್ಗತೇಶ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಡಾ. ಅಜೇಯ ಅಬ್ಬಾರ್ ಹೇಳಿದರು. ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ "ಮತದಾನದಲ್ಲಿ ಯುವಕರ ಪಾತ್ರ" ಕುರಿತು ಅತಿಥಿ ಉಪನ್ಯಾಸ ನೀಡುತ್ತಾ ಇತಿಹಾಸ ಮುಖ್ಯವಲ್ಲ. ದೇಶದ ಭವಿಷ್ಯ ಮುಖ್ಯ. ದೇಶದ ಭವಿಷ್ಯ ನಮ್ಮ ಯುವ ಮತದಾರರ ಕೈಯಲ್ಲಿದೆ. ಯುವ ಜನರು ನಿರ್ಧಾರ ಕೈಗೊಳ್ಳವಲ್ಲಿ ಹಿಂಜರಿಯುವುದಿಲ್ಲ ಅವರು ತರ್ಕಬದ್ಧ ಆಲೋಚನೆ ಮಾಡುವವರು ಆಗಿದ್ದಾರೆ ಹಿಂದೆ ಊರಿನ ಹಿರಿಯರೇ ಜನ ಪ್ರತಿನಿಧಿಗಳ ಆಯ್ಕೆಯ ನಿರ್ಧಾರ ಮಾಡುತ್ತಿದ್ದರು ಇಂದು ಯುವಕರು ಜವಾಬ್ದಾರಿಯುತ ಪ್ರತಿನಿಧಿಗಳ ಆಯ್ಕೆಯಲ್ಲಿ ನಿರ್ಧಾರಕ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಎ.ಎ. ಗಂಗನಗೌಡರ್ ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಮುಖಗಳಿದ್ದಂತೆ. ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ಸಂವಿಧಾನ ನೀಡಿರುವ ಒಂದು ಬಲವಾದ ಅಸ್ತ್ರ. ಸಮಾಜದಲ್ಲಿ ಏನೇ ಬದಲಾವಣೆ ತರಬೇಕೆಂದರು ಮುಕ್ತ ಮತದಾನದಿಂದ ಮಾತ್ರ ಸಾಧ್ಯ, ಸಂವಿಧಾನವು ಹೇಳುವ ಪ್ರಕಾರ ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕು. ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಸುವ ಹಕ್ಕನ್ನು ಮತದಾನವು ನೀಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ವೀ. ವಿ. ಸಂಘದ ಸಹ ಕಾರ್ಯದರ್ಶಿಗಳು ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ಚೇರ್ಮನ್ನರಾದ ಕಾಶಿನಾಥ ಎಸ್‌. ಮುರಾಳರವರು ಮಾತನಾಡುತ್ತಾ ನನ್ನ ಒಂದು ಮತದಿಂದ ನಗರವನ್ನು ಬದಲಾವಣೆ ಮಾಡಲಾಗುವುದಿಲ್ಲ ಎಂಬ ನಿರಾಶವಾದ, ರಾಜಕಾರಣಿಗಳೆಲ್ಲ ಒಂದೇ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂಬ ಮನೋಭಾವ, ಐ ಹೇಟ್ ಪೋಲಿಟಿಕ್ಸ್‌ ಎಂಬ ನುಡಿ ಯುವಕರಲ್ಲಿ ಕಾಣುತ್ತೇವೆ ನಿಮ್ಮ ಒಂದೊಂದು ಮತಗಳು ಬಂದೂಕಿನ ಗುಂಡಿಗಿಂತ ಶಕ್ತಿಯುತವಾದದ್ದು ಎಂದು ತಿಳಿಯಬೇಕು ಎಂದರು.  

ಇನ್ನೋರ್ವ ಉಪಸ್ಥಿತರಾದ ಎಂ.ಎಸ್ ಸರಶೆಟ್ಟಿ ಕಾರ್ಯದರ್ಶಿಗಳು ವೀ.ವಿ ಸಂಘ ಮಾತನಾಡುತ್ತಾ ಇಂದಿನ ಯುವಕರಲ್ಲಿ ಮತದಾನದ ಪಾವಿತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ, ಮತದಾನದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಅರಿವು ಮೂಡಿಸಿ, ಯುವಜನರು ಹೆಚ್ಚಿನದಾಗಿ ಮತದಾರರನ್ನಾಗಿ ನೊಂದಾಯಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪ್ರಜಾಪ್ರಭುತ್ವದಲ್ಲಿ ಭಾಗಿಯಾದರೆ ಮಾತ್ರ ಉತ್ತಮ ಆಡಳಿತ ನೋಡಬಹುದು ಎಂದು ಕರೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ನುಡಿಗಳನ್ನಾಡಿದ ಪ್ರಾಚಾರ್ಯರು ಡಾ. ಆರ್‌. ಎಂ. ಬಂಟನೂರ ಪ್ರಜೆಗಳು ಮತದಾನದ ಗುರುತಿನ ಚೀಟಿ ಪಡೆದು ಮತದಾರರಾಗಿ ನೊಂದಾಯಿಸಿಕೊಂಡರೆ ಸಾಲದು, ಚುನಾವಣೆಯ ದಿನದಂದು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದಾಗ ಮಾತ್ರ ನಾವು ಅಂದುಕೊಂಡಂತಹ ದೇಶವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವರ್ಗಪ್ರತಿನಿಧಿ ಮಯೂರ್ ಕೊಡಬಾಗಿ ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಉಮಾ ಯರಗಲ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು ರೇಷ್ಮಾ ಚಲವಾದಿ ಸಂಗಡಿಗರು ಎನ್‌.ಎಸ್‌. ಎಸ್ ಗೀತೆಯನ್ನು ಹಾಡಿದರು ಶಿವರಾಜ್ ಉಪ್ಪಾರ ಸ್ವಾಗತಿಸಿ ಪರಿಚಯಿಸಿದರು ಭಾಗ್ಯಶ್ರೀ ಕಡಕಲ್ ನಿರೂಪಿಸಿದರು.