ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ : ಲಕ್ಷ್ಮಿ ಹೆಬ್ಬಾಳಕರ

ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ : ಲಕ್ಷ್ಮಿ ಹೆಬ್ಬಾಳಕರ Doctors have the responsibility to end the lament of not having children: Lakshmi Hebbalkara

ಬೆಳಗಾವಿ 25: ಆಧುನಿಕ ಜೀವನಶೈಲಿಯಿಂದಾಗ ಮಕ್ಕಳ ವಂಚಿತ ದಂಪತಿಗಳಿಗೆ ಸಾಮಾಜಿಕ ಪಿಡುಗು ಅಧಿಕವಾಗಿರುತ್ತದೆ. ಅದನ್ನು ತೊಡೆದು ಹಾಕಲು ಆಧುನಿಕ ವೈದ್ಯಪದ್ದತಿಯು ಪರಿಣಾಮಕಾರಿಯಾಗಿದೆ. ಪ್ರತಿಯೊಬ್ಬ ದಂಪತಿಯೂ ಕೂಡ ಮಕ್ಕಳನ್ನು ಪಡೆಯುವ ಅವಕಾಶಗಳು ಹೆಚ್ಚಾಗಿವೆ. ಆದ್ದರಿಂದ ಮಕ್ಕಳಿಲ್ಲ ಎಂಬ ಭಾವನೆಯಿಂದ ದೂರ ಸರಿದು ಸರಿಯಾದ ಚಿಕಿತ್ಸೆಯಿಂದ ಮಕ್ಕಳನ್ನು ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ   ಲಕ್ಷ್ಮಿ ಹೆಬ್ಬಾಳಕರ ಅವರಿಂದಿಲ್ಲಿ ಹೇಳಿದರು. 

 ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಫರ್ಟಿಲಿಟಿ ಕೆಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಾಗದ ದಂಪತಿಗಳಿಗೆ ಸರಿಯಾದ ಮಾರ್ಗದರ್ಶನದೊಂದಿಗೆ ಚಿಕಿತ್ಸೆ ನೀಡಿ ಅವರಿಗಿರುವ ಭಯವನ್ನು ಹೋಗಲಾಡಿಸುವ ಹಾಗೂ ಸಾಮಾಜಿಕವಾಗಿ ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡುವ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ತಿಳಿಸಿದರು. 

ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ಇರದಿದ್ದರೆ ಈ ಭಾಗದಲ್ಲಿ ವೈದ್ಯಕೀಯ ಅಸ್ತವ್ಯಸ್ಥತೆ ಬಹಳ ಉಂಟಾಗುತ್ತಿತ್ತು. ಪ್ರತಿಯೊಂದಕ್ಕೂ ನಾವೂ ನೆರೆಯ ಮಹಾನಗರ ಅಥವಾ ಬೆಂಗಳೂರನ್ನು ಆಸ್ರಯಿಸಬೇಕಾಗುತ್ತಿತ್ತು. ಆದರೆ ಡಾ. ಪ್ರಭಾಕರ ಕೋರೆ ಅವರು ಇದನ್ನೆಲ್ಲ ಮನಗಂಡು ಬೃಹತ್ತಾದ ಆಸ್ಪತ್ರೆಯನ್ನು ತೆರದು ಒಂದೇ ಸೂರಿನಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿ ಈ ಭಾಗದ ಜನರ ಆರೋಗ್ಯ ಕಾಪಾಡುತ್ತಿದ್ದಾರೆ. ಬೆಳಗಾವಿ ವೇಗವಾಗಿ ಬೆಳೆಯುವಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾದದ್ದು. ಸಾಮಾಜಿಕ ಬದ್ದತೆ, ಕಾಳಜಿ ಮೂಲಕ ಎಲ್ಲ ಕ್ಷೇತ್ರದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಅಲ್ಲದೇ ಬೆಳಗಾವಿಯು ವಿಶ್ವಭೂಪಟದಲ್ಲಿ ಕಂಗೊಳಿಸುವಂತೆ ಮಾಡಿದ್ದಾರೆ ಎಂದರು. 

ಲಿಂಗಾಯತ ಸಮಾಜದ ದೊಡ್ಡ ಶಕ್ತಿಯಾಗಿರುವ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನ ಅತ್ಯವಶ್ಯವಾಗಿದ್ದು, ಸಮಾಜವು ಮತ್ತಷ್ಟು ಬಲಿಷ್ಠವಾಗಲು ಅವರ ಸೇವೆ ಬೇಕು. ಕೆಎಲ್‌ಇ ಸಂಸ್ಥೆಯ ಮೂಲಕ ಸುಮಾರು 20 ಸಾವಿರ ಕುಟುಂಬಗಳಿಗೆ ಆಸರೆಯಾಗಿದ್ದು, ಅವರು ಆರ್ಥಿಕ ಹಾಗೂ ಸಾಮಾಜಿಕವಾಗಿ ಏಳ್ಗೆಯಾಗುವಂತೆ ಮಾಡಿದ್ದಾರೆ. ಅವರು ನಿತ್ಯ ಪ್ರಾಥಃಸ್ಮರಣೀಯರು ಎಂದು ಶ್ಲಾಘಿಸಿದರು. 

ಕೆಎಲ್‌ಇ ಸಂಸ್ಥೆಯ ಕಾರಾ​‍್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಫರ್ಟಿಲಿಟಿ ಕೇಂದ್ರ ಜನಸೇವೆಗೆ ಅರೆ​‍್ಣಯಾಗಿರುವದರಿಂದ ಆಸ್ಪತ್ರೆಗೆ ಮತ್ತೊಂದು ಗರಿ ಮುಡಿದೆ. ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಮಕ್ಕಳ ಫಲವತ್ತತೆ ಕಡಿಮೆಯಾಗಿರುವದರಿಂದ ಇದನ್ನು ಸ್ಥಾಪಿಸಲಾಗಿದೆ. ಆದರೆ ನಾವು ವ್ಯವಹಾರಿಕವಾಗಿ ನೋಡದೇ ಮಕ್ಕಳಿಲ್ಲದ ದಂಪತಿಗಳಿಗೆ ಅನೂಕೂಲ ಕಲ್ಪಿಸಲು ತೆರೆಯಲಾಗಿದೆ ಎಂದು ತಿಳಿಸಿದರು.  

ಖಾಸಗಿ ಕ್ಷೇತ್ರದಲ್ಲಿ ಸುಮಾರು 5500ಕ್ಕೂ ಅಧಿಕ ಹಾಸಿಗೆಗಳ ಆಸ್ಪತ್ರೆಯನ್ನು ಮಾಡಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಮುನ್ನಡೆಯುತ್ತಿದ್ದು ಇನ್ನೆರಡು ರಿಂಗಳಲ್ಲಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಜನಸೇವೆಗೆ ಅರ​‍್ಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 7 ಎಕರೆ ವಿಸ್ತೀರ್ಣದಲ್ಲಿ ಸುಮಾರು 200 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಸುಮಾರು 90 ವರ್ಷಗಳ ಆಯುರ್ವೇದ ಆಸ್ಪತ್ರೆಯನ್ನು ಅತ್ಯಾಧುನೀಕರಗೊಳಿಸಲಾಗಿದ್ದು, ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶವಿದೇಶಗಳಿಂದ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆಯುರ್ವೇದವನ್ನು ಪುನರುಜ್ಜೀವನಗೊಳಿಸುವ ಕಾರ‌್ಯವನ್ನೂ ಕೂಡ ಮಾಡಲಾಗುತ್ತಿದೆ. ಅದರಂತೆ ಚಿಮಕ್ಕೋಡಿಯಲ್ಲಿ ಆಯುರ್ವೇದ,  ಬಸವಣ ಕುಡಚಿಯಲ್ಲಿ ಹೊಮಿಯೋಪಥಿ ಮಹಾವಿದ್ಯಾಲಯ ಪ್ರಾರಂಭಿಸಲಾಗುತ್ತಿದೆ ಎಂದು ಹೆಳಿದರು. 

ಮಹಾರಾಷ್ಟ್ರ ಸರಕಾರವು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕೆಎಲ್‌ಇ ಸಂಸ್ಥೆಗೆ ಸಾಕಷ್ಟು ಸಹಾಯ ಹಾಗೂ ಸಹಕಾರ ನೀಡುತ್ತಿದೆ. ಅದರಂತೆ ಮುಂಬೈನ ಫಾಮ್ ಬೀಚನಲ್ಲಿ ಶಾಲೆಯನ್ನು ಜನಸೇವೆಗೆ ಅರ್ಪಿಸಲಾಗುತ್ತಿದೆ. ವಿಶ್ವವಿದ್ಯಾಲಯ ಸ್ಥಾಪನೆಗೆ 10 ಎಕರೆ ಜಾಗೆಯನ್ನು ನೀಡಿದ್ದಾರೆ. ಸರಕಾರದ ಮಾಡುವ ಕಾರ‌್ಯಗಳನ್ನು ನಾವು ಮಾಡುತ್ತಿದ್ದೇವೆ. ಸಾಮಾಜಿಕ ಕಳಕಳಿಯಿಂದ ಎಲ್ಲವನ್ನು ನೆರವೇರಿಸಲಾಗುತ್ತಿದೆ. ಆದ್ದರಿಂದ ಬೀಮ್ಸ್‌ ಸೂಪರ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ವಹಿಸಲು ಕೆಎಲ್‌ಇ ಸಂಸ್ಥೆಗೆ ನೀಡಿದರೆ ಅತ್ಯುತ್ತಮ ಸೇವೆ ನೀಡಲಾಗುತ್ತದೆ. ಅಲ್ಲದೇ ಬಾಲಸಂಜೀವಿನಿ ಯೋಜನೆಯನ್ನು ಮರುಪ್ರಾರಂಭಿಸುವಂತೆ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‌್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿಜಯಕುಮಾರ ಎಸ್‌., ಡಾ. ಸುರಭಿ ಅರೋರಾ, ಡಾ. ಜಯಶ್ರೀ ರೂಗೆ ಉಪಸ್ಥಿತರಿದ್ದರು., ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಸ್ವಾಗತಿಸಿ, ಪರಿಚಯಿಸಿದರು. ಡಾ. ನಂದೇಶ್ವರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಭಿಲಾಷ ಈಶ್ವರ ವಂದಿಸಿದರು. ಡಾ. ವಾನಿಶ್ರೀ ನಿರೂಪಿಸಿದರು.