ರೋಗಿಗಳೊಂದಿಗೆ ವೈದ್ಯ, ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಬೇಕು: ಶಾಸಕ ಪಠಾಣ

ರೋಗಿಗಳೊಂದಿಗೆ ವೈದ್ಯ, ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಬೇಕು: ಶಾಸಕ ಪಠಾಣ Doctors and staff should respond properly to patients: MLA Pathan

ಶಿಗ್ಗಾವಿ 21 : ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.  

ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಸರ್ಕಾರದ ನಿಯಮ ಪ್ರಕಾರ ಒಂದೇ ಆಸ್ಪತ್ರೆಯಲ್ಲಿ ದಿರ್ಘಕಾಲ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಸಿಬ್ಬಂದಿಗಳ ವರ್ಗಾವಣೆಯಾಗಿದೆ. ಹೊಸದಾಗಿ ನಾಲ್ಕು ವೈದ್ಯರು ಸೇವೆಗೆ ಹಾಜರಾಗಿದ್ದಾರೆ, ಇನ್ನೂ ನಾಲ್ಕು ವೈದ್ಯರು ಕೌನ್ಸಲಿಂಗ್ ಮೂಲಕ ಬರಬೇಕು ಅಲ್ಲದೇ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗದೆ ಇರುವುದನ್ನು ಗಮನಿಸಿ ಸಂಬಂಧಪಟ್ಟ ಏಜೆನ್ಸಿ ಅವರ ಮೇಲೆ ಕ್ರಮ ಜರುಗಿಸಬೇಕು ಹಾಗೂ ಆಸ್ಪತ್ರೆಯ ಆಸ್ತಿ ಹಾಗೂ ಸಿಬ್ಬಂದಿಗಳ ಸುರಕ್ಷತೆಗೆ ಎರಡು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಡಿಎಚ್‌ಓ  ಡಾ.ಜಯಾನಂದ, ಟಿಎಚ್‌ಓ ಡಾ. ಸತೀಶ್,ಎ.ಎಂ.ಓ ಡಾ. ಮಲ್ಲಿಕಾರ್ಜುನಯ್ಯ, ಡಾ.ತಬಸುಮ್, ಡಾ.ರಾಜೇಶ್ವರಿ, ಡಾ.ಮಹೇಶ, ಡಾ.ಪಾಟೀಲ, ಡಾ.ಬಸೀರಾ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಸಂತೋಷ ಚಾಕಲಬ್ಬಿ, ಆಶೀಫ ಕಣವಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.