ಆಸ್ಪತ್ರೆಗೆ ಬರುವ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳ ಮಾನವೀಯತೆಯಿಂದ ನಡೆದುಕೊಳ್ಳಿ : ಶಾಸಕ ಬಸವರಾಜ್ ಆಕ್ರೋಶ
Doctors and staff coming to the hospital should behave with humanity towards patients: MLA Basavaraj
.ಬ್ಯಾಡಗಿ 07: ಆಸ್ಪತ್ರೆ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳ ಜೊತೆ ಮಾನವೀಯತೆಯಿಂದ ನಡೆದುಕೊಳ್ಳಿ ಎಂದು ಶಾಸಕ ಬಸವರಾಜ್ ಶಿವಣ್ಣನವರು ಅಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಹಾಗೂ ಆರೋಗ್ಯ ಸಮಿತಿಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದವರು. ನಮ್ಮ ಸರಕಾರಿ ಆಸ್ಪತ್ರೆ ಬಡ ಜನರ ಸೇವೆ ಮಾಡಿ ಅವರನ್ನು ಅರೋಗ್ಯವಂತರನ್ನಾಗಿ ಮಾಡುವ ಮೂಲಕ ರಾಜ್ಯ ಹಾಗೂ ದೇಶದ ಅನೇಕ ಪ್ರಶಸ್ತಿಗಳನ್ನು ಪಡೆದಿರುವದು ಹೆಮ್ಮೆಯ ವಿಷಯ. ಆದರೆ ಆಸ್ಪತ್ರೆಯಲ್ಲಿ ಕೆಲವು ಸಿಬ್ಬಂದಿಗಳು ಹೆರಿಗೆ ಆದ ತಾಯಿಂದಿರಿಗೆ ಕಿರಿ ಕಿರಿ ಮಾಡುವದು ಸಾರ್ವಜನಿಕರಿಂದ ನನಗೆ ತಿಳಿದು ಬಂದಿದೆ. ನೀವು ಸಹ ಮಹಿಳೆಯರು ಆಗಿದ್ದು ಬಡತನ ಅನುಭವಿಸಿ ಉನ್ನತ ಮಟ್ಟಕ್ಕೆ ಬಂದಿದ್ದೀರಾ.
ಹೆರಿಗೆ ಆದವರು ಹಾಗೂ ಇತರ ರೋಗಿಗಳನ್ನು ಗೌರವ ಹಾಗೂ ಪ್ರೀತಿ ವಿಶ್ವಾಸದಿಂದ ಕಾಣಿರಿ. ವೈದ್ಯರು ಹಾಗೂ ಉಳಿದ ಸಿಬ್ಬಂದಿಗಳು ಚೆನ್ನಾಗಿ ನಮ್ಮ ಊರು ಹಾಗೂ ಆಸ್ಪತ್ರೆಗೆ ಇನ್ನೂ ಹೆಚ್ಚು ಹೆಚ್ಚು ಜನರು ಬರುವಂತೆ ವರ್ತನೆ ಮಾಡಿರಿ ಸರಕಾರದಿಂದ ಬೇಕಾದ ಅನುದಾನ ತರುವದು ನನ್ನ ಜವಾಬ್ದಾರಿ ಆಗಿದೆ. ನೂತನ ಶವಾಗಾರ , ವಿದ್ಯುತ್ ಸಮಸ್ಯೆ ಕುಡಿಯುವ ನೀರು ಸ್ವಚ್ಛತೆ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಜೆಟ್ಟಿನಲ್ಲಿ ಸೇರಿಸುವಂತೆ ಮುಖ್ಯ ಮಂತ್ರಿಗಳಿಗೆ ಕೋರುವೆನೆಂದರು.ಸಮಿತಿಯ ಸದಸ್ಯ ಡಾ.ಸೌಧಾಗರ ಮಾತನಾಡಿ ಸರ್ಕಾರದಿಂದ ಸಾಕಷ್ಟು ಅನುದಾನ ತರುವಲ್ಲಿ ನಮ್ಮ ಶಾಸಕರು ಶ್ರಮಿಸಿದ್ದಾರೆ ಇನ್ನೂ ಅವಧಿ ಇರುವರೆಗೂ ನಮ್ಮ ಆಸ್ಪತ್ರೆಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸದಾ ಸಿದ್ಧರಿದ್ದಾರೆ ಆದರೆ ಆಸ್ಪತ್ರೆಯಲ್ಲಿ ಬಹಳಷ್ಟು ಅಪವಾದಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ವೈದ್ಯರು ಕ್ಷಮಾಗಣದಿಂದ ವರ್ತಿಸಬೇಕು ಮತ್ತು ಸಾರ್ವಜನಿಕರ ದೂರು ಪೆಟ್ಟಿಗೆಯನ್ನು ಇಡಲು ಸೂಚಿಸಿದರು.
ಮತ್ತು ಎಕ್ಸರೇ ಮಷೀನ್ ಬಗ್ಗೆ ಸಾಕಷ್ಟು ದೂರು ಬರುತ್ತಿದ್ದು ಕೂಡಲೇ ಅದನ್ನು ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಸೆವೆಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು. ತಾಲೂಕ ಆಸ್ಪತ್ರೆ ಆಡಳಿತಧಿಕಾರಿ ರಾಘವೇಂದ್ರ ಸ್ವಾಮಿ. ಡಾ. ಸುರೇಶ ಗುಂಡಪಲ್ಲಿ. ಡಾ. ಎ.ಎಂ ಸೌದಾಗರ. ಡಾ. ಮಹೇಶ ಭಜಂತ್ರಿ. ಡಾ. ನಾಗರಾಜ. ಡಾ. ವಿರೇಶ ಹೊಸಮನಿ ಡಾ. ಚೇತನ. ಡಾ. ಸುನೀಲ್. ಡಾ. ಬಸವರಾಜ ಗೊಂದಿ.. ಡಾ. ಜ್ಯೋತಿ ಮುದ್ದಿ. ಡಾ ದೀಪಾ. ರಕ್ಷಾ ಸಮಿತಿ ಸದಸ್ಯರಾದ ಲಕ್ಶ್ಮಿ ಜಿಂಗಾಡೆ. ದ್ಯಾಮನನಗೌಡ್ರ. ಮಲ್ಲಪ್ಪ ದೇಸಾಯಿ. ಮಂಜುನಾಥ ಹಾವೇರಿ. ಕರಬಸಪ್ಪ ಹಾದರಗೇರಿ. ಬೀರ್ಪ ಬಣಕಾರ. ಹಾಗೂ ಹಿರಿಯ ಅರೋಗ್ಯ ನೀರೀಕ್ಷಿಕರಾದ ಪ್ರಶಾಂತ ನವಲೆ ಹಾಗೂ ಸಮಿತಿ ಸದಸ್ಯರು.ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 