ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ವಿಶ್ವಾಸದಿಂದ ಬದುಕಿ : ಮಹಾಂತಪ್ರಭು ಸ್ವಾಮೀಜಿ
Do not lose self-confidence; live with confidence: Mahantaprabhu Swamiji
ಲೋಕದರ್ಶನ ವರದಿ
ಮಹಾಲಿಂಗಪುರ 23 : ಇಂದಿನ ಆಧುನಿಕ ಯುಗದಲ್ಲಿ ಭವ್ಯ ಭಾರತ ಕಟ್ಟುವ ಗುರುತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶೇಗುನಶಿಯ ವಿರಕ್ತಮಠದ ಪ. ಪೂ. ಡಾ ಮಹಾಂತಪ್ರಭು ಸ್ವಾಮಿಗಳು ಹೇಳಿದರು.ಅವರು ಮಹಾಲಿಂಗಪುರದ ಬನಶಂಕರಿ ದೇವಸ್ಥಾನದಲ್ಲಿ ನಡೆದ ಚಕ್ರದ ಏಳನೇ ಮಂಡಲದ ಪೂಜಾ ಕಾರ್ಯಕ್ರಮನ್ನು ನೆರವೇರಿಸಿ ಮಾತನಾಡಿ. ಇಂದಿನ ವಿದ್ಯಾರ್ಥಿಗಳು ಶುಲಕ ವಿಚಾರಕ್ಕೆ ಜೀವವನ್ನು ಪಣಕ್ಕಿಡಬಾರದು ಜೀವ ಹೋದ ಮೇಲೆ ಮತ್ತೆ ಬಾರದು ಜೀವವನ್ನಿಕೋಟ್ಟುಕೊಂಡು, ಬಂದ ಸವಾಲುಗಳನ್ನು ಎದುರಿಸಿ ಬದುಕನ್ನು ಗೆಲ್ಲಬೇಕು.
ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಜೀವನದಲ್ಲಿ ವಿಶ್ವಾಸ ಮತ್ತು ಸಂಸ್ಕಾರ ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸದಿಂದ್ ಬದುಕುವುದನ್ನು ಕಲಿಸಿ. ಚಕ್ರ ಪೂಜೆಯು ಅತ್ಯಂತ ಶಕ್ತಿಶಾಲಿ ಆರಾಧನೆಯಗಿದ್ದು, ಸಂಪತ್ತು, ಸಮೃದ್ಧಿ, ಖ್ಯಾತಿ, ಯಶಸ್ಸು, ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ನೀಡಿ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಮಾನಸಿಕ ಶಾಂತಿ ಮತ್ತು ಹಲವು ರೋಗಗಳಿಂದ ಮುಕ್ತಿಯನ್ನು ಕರುಣಿಸುತ್ತದೆ. ಈ ಚಕ್ರ ಪೂಜಾ ಫಲ ಪೂರ್ವ ಜನ್ಮದ ಪುಣ್ಯದ ಫಲವಿದ್ದರೆ. ಮಾತ್ರ್ ನಮಗೆ ಲಭಿಸುತ್ತದೆ. ಇಂತಹ ಸಂಸ್ಕಾರ ವಿದ್ಯಾರ್ಥಿಗಳಿಗೆ ಕೊಡುವುದು ಇಂದಿನ ಅಗತ್ಯವಾಗಿದೆ ಎಂದರು.
ಇಂದಿನ ಪೂಜೆಯಲ್ಲಿ ನಗರದ ಪ್ರತಿಷ್ಟಿತ ಶಾಲೆ ಬಸವಾನಂದ ಶಾಲೆ, ಢಪಾಳಾಪುರ ವಿದ್ಯಾ ವಿಹಾರ ಶಾಲೆ ಹಾಗೂ ಕೆಸರಗೋಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿ ಯು ಸಿ ವಿದ್ಯಾರ್ಥಿಗಳು ಮತ್ತು 10 ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಕುಂಕುಮಾರ್ಚನೆ ಹಾಗೂ ಪೂಜೆಗೆ ಆಹ್ವಾನಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ಕಾರ್ಯ ಯಶಸ್ವಿಯಾಗಿಸಿದರು.ತಮ್ಮ ಭವಿಷ್ಯದಲ್ಲಿ ಏಳಿಗೆಯಾಗಲು ಉನ್ನತ ಸ್ಥಾನಕ್ಕೆ ಏರಲು ಸಂಕಲ್ಪ ಮಾಡಿಸಿದರು. ಈ ಸಂದರ್ಭದಲ್ಲಿ ದ್ರಾಕ್ಷಿಯಣಿ ಮಂಡಿ,ರಾಜು ತಾಳಿಕೋಟಿ ದಂಪತಿಗಳು, ಬಸಪ್ಪ ಸಂಶಿ, ಸಸಾಲಟ್ಟಿ ದಂಪತಿಗಳು ಸೇರಿ ಇನ್ನು ಅನೇಕ ಗಣ್ಯರನ್ನು ಸನ್ಮಾನಿಸಿದರು.
ಎಲ್ಲ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಮಕ್ಕಳ ಏಳಿಗೆಗೆ ಪ್ರಾರ್ಥಿಸಿದರು. ಹಾಗೂ ಅವರಿಗೆ ಭಕ್ತಿಯ ಪಾಠ ಹಾಗೂ ಜ್ಞಾನದ ಪಾಠ ಹಾಗೂ ರಾಷ್ಟ ನಿರ್ಮಾಣ ಹಾಗೂ ಭಾರತದ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸಿದರು. ಈ ಪೂಜಾ ಕಾರ್ಯವನ್ನು ಆಯೋಜಿಸಿದ ಬನಶಂಕರಿ ದೇವಿ ಟ್ರಸ್ಟ್ ಕಮಿಟಿ ಹಾಗೂ ಎಲ್ಲ ಗುರು ಹಿರಿಯರು ಹಾಗೂ ಅಧ್ಯಕ್ಷರು ಪದಾಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇನ್ನು ಇಂತಹ ಹಲವಾರು ಕಾರ್ಯಕ್ರಮಗಳನ್ನು ಮಕ್ಕಳ ಭವಿಷ್ಯದ ಬಗ್ಗೆ ವಿಶೇಷವಾದ ಕಾರ್ಯಕ್ರಮವನ್ನು ಬನಶಂಕರಿ ದೇವಸ್ಥಾನ ಕಮೀಟಿ ಆಯೋಜಿಸುತ್ತಿದ್ದು ಅತ್ಯಂತ ವಿಶೇಷವಾಗಿತ್ತು.
ಈ ಸಂಧರ್ಭದಲ್ಲಿ ಮುಖಾಂಡಾರದ ಬಸವರಾಜ ಢಪಳಾಪುರ್, ಅಶೋಕ್ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಸಿದ್ದಗಿರೆಪ್ಪ ಕಾಗಿ, ಜಿ ಎಸ್ ಗೊಂಬಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ವಿವೇಕ ಢಪಳಾಪುರ, ಗುರುಪಾದ ಅಂಬಿ, ಪ್ರಭು ಬೆಳಗಲಿ, ಶಂಕರ ಅಂಬಿ, ಶಿವಾನಂದ ಕಿತ್ತೂರ, ಸಂಜಯ ಜಮಖಂಡಿ, ಸಿದ್ದಪ್ಪ ನಿಂಬರಗಿ, ಅಶೋಕ್ ಬಣಕಾರ್, ಮಲ್ಲಪ್ಪ ನಿಂಬರಗಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಬಿ ಸಿ ಪೂಜಾರಿ ನಿರೂಪಿಸಿ ವಂದಿಸಿದರು. ಢಪಾಳಾಪುರ ಶಾಲಾ ಮಕ್ಕಳು ಗಣ್ಯರ ಪರಿಚಯ ಕಾರ್ಯ ನಡೆಸಿಕೊಟ್ಟರು ಇಂದಿನ ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ದಿ ಸಿದ್ದಗಿರೆಪ್ಪ ಬೆಳಗಲಿ ಅವರ ಮನೆತನದ ಹೆಣ್ಣು ಮಕ್ಕಳು ನೆರವೇರಿಸಿದ್ದು ವಿಶೇಷವಾಗಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 