ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
Dnyaneshwari Parayana in Asangi, Harinama week concludes
ಲೋಕದರ್ಶನ ವರದಿ
ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
ರಬಕವಿ-ಬನಹಟ್ಟಿ 04: ತಾಲೂಕಿನ ಆಸಂಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಕಳೆದೊಂದು ವಾರದಿಂದ ಜರುಗಿದ ಶ್ರೀ ಸಂತ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಪರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಒಂದು ವಾರ ಕಾಲ ಜರುಗಿದ ಪಾರಾಯಣದ ಸಮಾರೋಪದಲ್ಲಿ ದಿಂಡಿ ಸೋಹಳಾ ಮಹಾಪ್ರಸಾದವು ಜರುಗಿತು.
ನೂರಾರು ಸದ್ಭಕ್ತರು ಜ್ಞಾನೇಶ್ವರ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಾಳಗೋಪಾಳ, ತಾಳ, ಮೃದಂಗ ಸಮೇತ ಭಕ್ತರು ಆಗಮಿಸಿದ್ದು ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.
ಸತತ ಏಳು ದಿನಗಳ ಕಾಲ ಪುಂಡಲೀಕರಾವ್ ಜ್ಞಾನಮೋಠೆ (ಜಿ.ಪಿ. ರಾವ್) ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ನಡೆಸಿಕೊಟ್ಟರು.
ಪಾಂಡು ಸಾಲಗುಡೆ, ಕೃಷ್ಣಾ ಸಿಂಧೆ, ದೋಂಡಿಬಾ ಗಾಯಕವಾಡ, ವಿಠ್ಠಲ ಗಾಯಕವಾಡ, ಜ್ಯೋತಿಬಾ ಲೊಂಡೆ, ಪರಶುರಾಮ ಸಾಳುಂಕೆ, ಪಾಂಡು ಶಿರೋಳ, ಕೇದಾರಿ ದುಂಬಾಳೆ, ಪ್ರಕಾಶ ರಾವಳ, ರಾಮಚಂದ್ರ ಪವಾರ, ವಿಠ್ಠಲ ಪೂಜಾರಿ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 