ದೀಪಾವಳಿ ಪೂಜಾ ಕಾರ್ಯಕ್ರಮ
Diwali Puja Program
ಹುಬ್ಬಳ್ಳಿ 30: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ರಾಧಾಕೃಷ್ಣಗಲ್ಲಿಯಲ್ಲಿರುವ ಸುದೀರ್ಘ ನೂರು ವರ್ಷದ ಇತಿಹಾಸವಿರುವ ನ್ಯಾಶನಲ್ ಸ್ಟುಡಿಯೋ ಮಾಲಿಕರಾದ ಅಮಿತ ಹಬೀಬ ಅವರ ವಿಶೇಷ ಆಹ್ವಾನ ಮೇರೆಗೆ ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ಭಾಗವಹಿಸಿದ್ದರು.
1925ರಲ್ಲಿ ಹುಬ್ಬಳ್ಳಿಯ ವಾಳ್ವೇಕರ ಗಲ್ಲಿಯ ನಿವಾಸಿ, ಛಾಯಾಗ್ರಾಹಕ ಮತ್ತು ಚಿತ್ರಕಲಾವಿಧರಾಗಿದ್ದ ಶ್ರೀನಿವಾಸಾಚಾರ್ಯ ಆದವಾನಿ ಅವರು ಪ್ರಾರಂಬಿಸಿದ್ದರು. 1972ರ ನಂತರ ಹನುಮಂತ ಆದವಾನಿ ಅವರು ಕೆಲವು ವರ್ಷ ಸ್ಟುಡಿಯೋ ನಡೆಸಿದರು. ಸ್ಟುಡಿಯೋದಲ್ಲಿ ಕೆಲಸಗಾರರಾಗಿದ್ದ ರಾಮಾಸಾ ಹಬೀಬ ಅವರ ಮಗ ವೆಂಕಟೇಶ ಹಬೀಬ ಅವರಿಗೆ ಇಡೀ ನ್ಯಾಶನಲ್ ಸ್ಟುಡಿಯೋವನ್ನು ಒಪ್ಪಿಸಿದರು. ಅಂದಿನಿಂದ ವೆಂಕಟೇಶ ಹಬೀಬ, ಪತ್ನಿ ಶೋಭಾ ಹಾಗೂ ಮಕ್ಕಳಾದ ಅಮೀತ್, ಅಕ್ಷಯ ಅವರು ನ್ಯಾಶನಲ್ ಸ್ಟುಡಿಯೋವನ್ನು ಅತ್ಯಂತ ವ್ಯವಸ್ಥಿತವಾಗಿ, ಹೊಸ ತಂತ್ರಜ್ಞಾನ ಬಳಿಸಿಕೊಂಡು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಹೊಸ ತಲೆಮಾರಿನ, ಉತ್ಸಾಹಿ ಯುವಕ ಅಮೀತ್ ಹಬೀಬ ಅವರಿಗೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಗ್ರಂಥ ನೀಡಿ ಅಭಿನಂದನೆಗಳನ್ನು ತಿಳಿಸಿದರು. ನ್ಯಾಶನಲ್ ಸ್ಟುಡಿಯೋವನ್ನುಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವಂತಾಗಲಿ ಎಂದು ಶುಭ ಕೋರಿದರು. ಅಮೀತ್ ಅವರ ಪತ್ನಿ ಶ್ವೇತಾ ಹಬೀಬ, ಪುತ್ರಿ, ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 