ಸೆ.11, 12ರಂದು ಹಾರೂಗೇರಿಯಲ್ಲಿ ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಸೆ.11, 12ರಂದು ಹಾರೂಗೇರಿಯಲ್ಲಿ ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟ Divisional level handball tournament to be held at Harugeri on September 11th and 12th

ಸೆ.11, 12ರಂದು ಹಾರೂಗೇರಿಯಲ್ಲಿ ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟ 

ಹಾರೂಗೇರಿ : ಹ್ಯಾಂಡ್‌ಬಾಲ್ ಅಸೋಸಿಯೇಶನ್ ಆಪ್ ಕರ್ನಾಟಕ ಸರಕಾರ ಮತ್ತು   ವಾಲ್ಮೀಕಿ ಶಿಕ್ಷಣ ಸಂಸ್ಥೆಯು ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟವನ್ನು ಸೆ.11 ಮತ್ತು 12ರಂದು ಹಾರೂಗೇರಿಯಲ್ಲಿ ಜಂಟಿಯಾಗಿ ಆಯೋಜಿಸಿವೆ ಎಂದು ಕರ್ನಾಟಕ ಹ್ಯಾಂಡ್‌ಬಾಲ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ.ಎಲ್‌.ಎಸ್‌.ಜಂಬಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

   ಪಟ್ಟಣದ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಗದಗ, ಉತ್ತರಕನ್ನಡ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ, ಮಹಿಳಾ ಮತ್ತು ಪುರುಷರ ಜಿಲ್ಲಾಮಟ್ಟದ ಹ್ಯಾಂಡ್‌ಬಾಲ್‌ನ ವಿಜೇತ ತಂಡಗಳು ಭಾಗವಹಿಸಲಿವೆ ಎಂದರು. 

   ಸೆ.12 ರಂದು ಸಂಜೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಕರಾಗಿ ಆಗಮಿಸಲಿರುವರು. ಅಲ್ಲದೇ ಜಿಲ್ಲೆಯ ಎಲ್ಲ ಶಾಸಕರು, ಪದಾಧಿಕಾರಿಗಳು, ತಹಸೀಲ್ದಾರರು, ಮತ್ತು ಕ್ರೀಡಾಕೂಟಗಳ ಆಯೋಜಕರಾದ ಯುವಸಬಲೀಕರಣ ಮತ್ತು ಕ್ರೀಡಾಕೂಟಗಳ ಜಿಲ್ಲಾಧ್ಯಕ್ಷ ಶ್ರೀನಿವಾಸ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಜಂಬಗಿ ತಿಳಿಸಿದರು. 

  ವಾಲ್ಮೀಕಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಗಸ್ತಿ ಮಾತನಾಡಿ ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಭಾಗದಲ್ಲಿ ನಡೆಯುವ ವಿಭಾಗಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟವನ್ನು ಕ್ರೀಡಾಪ್ರೇಮಿಗಳು, ಕ್ರೀಡಾಸಕ್ತರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಹೇಳಿದರು. 

  ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಮಾರುತಿ ಪೂಜಾರಿ, ಸಂಸ್ಥೆ ಆಡಳಿತಾಧಿಕಾರಿ ಪ್ರಮೋದ ಗಸ್ತಿ, ದೈಹಿಕ ಶಿಕ್ಷಕರಾದ ಮಹಾದೇವ ಅಂಟೀನ, ಜ್ಞಾನೇಶ್ವರ ಸದಲಗಿ, ಕಾಶಪ್ಪ ಧರ್ಮಟ್ಟಿ, ಪ್ರಾಚಾರ್ಯ ವಿಠ್ಠಲ ಮುತ್ತಣ್ಣವರ, ರವಿ ಗಸ್ತಿ ಮತ್ತೀತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಫೋಟೋ ಶಿರ್ಷಿಕೆ : 5ಹಾರೂಗೇರಿ ಸುದ್ದಿ-1 - ಹಾರೂಗೇರಿಯಲ್ಲಿ ಸೆ.11, 12ರಂದು ನಡೆಯಲಿರುವ ವಿಭಾಗಮಟ್ಟದ ಪುರುಷ ಮತ್ತು ಮಹಿಳಾ ಹ್ಯಾಂಡ್‌ಬಾಲ್ ಕ್ರೀಡಾಕೂಟದ ಕುರಿತು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಎಲ್‌.ಎಸ್‌.ಜಂಬಗಿ ಮಾತನಾಡಿದರು.