ಡಿವಿಜನ್ ಲೀಗ್ ಪಂದ್ಯ: ಹಟ್ಟಿಯ ಪ್ರಿಯಾಂಕ ಕ್ರಿಕೆಟ್ ತಂಡ ಸೆಮಿಫೈನಲ್‌ಗೆ ಲಗ್ಗೆ

Division League Match: Hatti's Priyanka Cricket Team advances to the semi-finals

ಡಿವಿಜನ್ ಲೀಗ್ ಪಂದ್ಯ: ಹಟ್ಟಿಯ ಪ್ರಿಯಾಂಕ ಕ್ರಿಕೆಟ್ ತಂಡ ಸೆಮಿಫೈನಲ್‌ಗೆ ಲಗ್ಗೆ 

ವಿಜಯಪುರ 16: ಮಾಣಿಕ್ ನಗರದ ಸಿದ್ದರಾಜ ಕ್ರಿಕೆಟ್ ಮೈದಾನದಲ್ಲಿ ನಡೆದ ಕೆಎಸ್‌ಸಿಎ ರಾಯಚೂರು ವಲಯದ ದ್ವಿತೀಯ ಡಿವಿಜನ್ ಲೀಗ್ ಪಂದ್ಯದಲ್ಲಿ ಹಟ್ಟಿಯ ಪ್ರಿಯಾಂಕ ಕ್ರಿಕೆಟ್ ತಂಡವು ಬೀದರ್‌ನ ಪಾಟ್ನೆ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ತನ್ನ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. 

 ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೀದರ್ ತಂಡವು ವಿಶಾಲ್ ಕಿರು (33) ಹಾಗೂ ಶ್ಯಾಮ್ ಬಾಬು ರಾವ್ (20) ಅವರ ಉತ್ತಮ ಬ್ಯಾಟಿಂಗ್‌ನ ಫಲವಾಗಿ 113 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ ಹಟ್ಟಿಯ ಪ್ರಿಯಾಂಕ ತಂಡದ ಅಕ್ಷಯ್ ಬಿರಾದಾರ್ 4 ವಿಕೆಟ್, ನವೀನ್ ರೆಡ್ಡಿ 3 ಹಾಗೂ ಲೀಲಕೃಷ್ಣ 2 ವಿಕೆಟ್‌ಗಳನ್ನು ಪಡೆದರು. ನಂತರ ಬ್ಯಾಟಿಂಗ್ ಮಾಡಿದ ಹಟ್ಟಿಯ ಪ್ರಿಯಾಂಕ ತಂಡದ ಬ್ಯಾಟರ್‌ಗಳು ನಿರಾಯಾಸವಾಗಿ ಬ್ಯಾಟ್ ಬೀಸಿ 22 ಓವರ್ ಗಳಲ್ಲಿ ಗೆಲುವಿಗೆ ಅಗತ್ಯವಿದ್ದ 114 ರನ್ ಗಳನ್ನು ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ ಹಟ್ಟಿ ಪ್ರಿಯಾಂಕ ತಂಡದ ಚಂದ್ರಕಾಂತ್ 36, ಲೀಲಕೃಷ್ಣ 36 ಹಾಗೂ ನೀಲ್ ರತನ್ ಅಜೇಯ 22 ರನ್‌ಗಳನ್ನು ಗಳಿಸಿದರು.