ಸಂಕೇಶ್ವರ : ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಕಳೆದ ಹಲವಾರು ವರ್ಷದ ಹಿಟ್ಲರ್ ಆಡಳಿತಕ್ಕೆ ಬೇಸತ್ತು ನಾವು 11 ಜನ ನಿರ್ದೇಶಕ ಮಂಡಳಿಯಿAದ ಹೊರಬಂದಿದ್ದೇವೆ. ಸಂಘದ ಅಧ್ಯಕ್ಷರ ವಿರುದ್ದ ನಾವು ಅವಿಶ್ವಾಸ ಮಂಡನೆಗೆ 11 ಜನ ನಿರ್ದೇಶಕರು ಅರ್ಜಿಯನ್ನು ಸಂಘದ ಅಧಿಕಾರಿಗೆ ತಲುಪಿಸಲಾಗಿದೆ. ಈ ವಿಷಯಕ್ಕೆ ಸಂಬAಧಪಟ್ಟAತೆ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದು, ಆ ಜನರನ್ನು ನಂಬಬಾರದು ಎಂದು ಹೇಳುವ ಮೂಲಕ ಕತ್ತಿ ಕುಟುಂಬದ ವಿರುದ್ದ ವಿದ್ಯುತ್ ಸಂಘದ ನಿರ್ದೇಶಕರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ವಿದ್ಯುತ್ ಸಂಘದಿAದ ರೈತರಿಗೆ ಹಲವಾರು ಯೋಜನೆಗಳನ್ನು ನಾವು ಹೇಳತಾ ಬಂದರೂ ಇಲ್ಲಿಯ ವರೆಗೆ ಯಾವದೇ ಕೆಲಸ ಆಗತಾ ಇಲ್ಲ. ತೋಟಪಟ್ಟಿ ಮನೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವ ಆಸೆ ನಮಗೆ ಇತ್ತು. ಆದರೆ ಇಲ್ಲಿ ವರೆಗೆ ಅವರು ಮಾಡಲಿಲ್ಲ. ಸಚಿವ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಅವರ ಸಹಕಾರದೊಂದಿಗೆ ರೈತರಿಗೆ ಕಡಿಮೆ ಅವಧಿಯಲ್ಲಿ 24 ಗಂಟೆ ನಿರಂತರ ವಿದ್ಯುತ್ ಕೊಡುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅದರ ಜೊತೆಗೆ ಈಗಾಗಲೆ ಸುಟ್ಟು ಹೋಗಿರುವ ಟಿ.ಸಿ.ಗಳನ್ನು ರಿಪೇರಿ ಮಾಡಿ ಕೂಡಿಸಲು ಹಿಂದೆ ಮುಂದೆ ಆಗುತ್ತಿದ್ದು, ಹೊಸ ಟಿ.ಸಿಗಳನ್ನು ಖರೀದಿ ಮಾಡಿ ಒಂದೆರಡು ದಿನಗಳಲ್ಲಿ ಟಿ.ಸಿಗಳನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ವಿದ್ಯುತ ಕಂಬ ಮುರಿದರೆ ರೈತರಿಂದ ಬಹಳಷ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಇದನ್ನು ಮನಗೊಂಡು ರೈತರಿಗೆ ತೊಂದರೆ ಆಗಬಾರದೆಂದು ಕಡಿಮೆ ದರದಲ್ಲಿ ವಿದ್ಯುತ್ ಕಂಬಗಳನ್ನು ಕೊಡಲು ನಾವೇಲ್ಲ ನಿರ್ದರಿಸಿದ್ದೇವೆ. ದಯವಿಟ್ಟು ರೈತರು ಯಾರ ಮನೆಗೂ ಹೋಗದೇ ತಮ್ಮ ತಮ್ಮ ಕ್ಷೇತ್ರ ನಿರ್ದೇಶಕರಿಗೆ ಪೋನ್ ಮಾಡಿ ಕೆಲಸಗಳನ್ನು ಹೇಳಿದ್ದಲ್ಲಿ ಅತೀ ಶೀಘ್ರವಾಗಿ ಮಾಡಿಕೊಡಲಾಗುವುದೆಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಎಲ್ಲ ರೈತ ಬಾಂಧವರು ನಮಗೆ ತಮ್ಮ ಎಲ್ಲ ಸಹಕಾರ ನೀಡುವಂತೆ ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಹಾಗೂ ಉದ್ಯಮದವರಿಗೆ ಇನ್ನೂ ಹಲವಾರು ಯೋಜನೆಗಳನ್ನು ತಂದು ಈ ಕ್ಷೇತ್ರದ ಜನತೆ ಅನುಕೂಲ ಮಾಡಿಕೊಡುತ್ತೇವೆ. ಈ ಸಂಘದ ಎಲ್ಲ ಅಧಿಕಾರಿಗಳಿಗೆ ಮತ್ತು ಇಂಜನೀಯರಿಗೆ ರೈತರು ಬಂದರೆ ಅವರಿಗೆ ಸ್ಪಂದಿಸಿ ಆದಷ್ಟು ಬೇಗ ಕೆಲಸ ಮಾಡಿಕೊಡುವಂತೆ ಈಗಾಗಲೇ ನಿರ್ದೇಶನ ನೀಡಿದ್ದೇವೆ, ರೈತರ ಕೆಲಸಕ್ಕೆ ಅಧಿಕಾರಿಗಳು ಸ್ಪಂದಿಸದೇ ಹೋದಲ್ಲಿ ನಾವು 11 ಜನ ನಿರ್ದೇಶಕರಿಗೆ ರೈತರು ಕರೆ ಮಾಡಿ ಸೂಚಿಸಿದರೆ ನಾವು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ರೈತರ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಈಗಾಗಲೇ ಇದೇ ಮೇ. 23ರಂದು ಸಂಘದ ಅಧ್ಯಕ್ಷರ ವಿರುದ್ಧ ಮಾಡಿರುವ ಅವಿಶ್ವಾಸ ಮಂಡನೆಯನ್ನು ಸರ್ಕಾರದವರು ನಿಗಧಿಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ 11 ಜನ ನಿರ್ದೇಶಕರು ಈಗಾಗಲೇ ಅರ್ಜಿಯನ್ನು ಸಂಘದ ಅಧಿಕಾರಿಗೆ ನೀಡಲಾಗಿದೆ. ಈ ವಿಷಯಕ್ಕೆ ಸಂಬAಧಪಟ್ಟAತೆ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದು, ಆ ಜನರನ್ನು ನಂಬಬಾರದು, ರೈತರ ಏಳಿಗೆಗಾಗಿ ನಾವು 24 ಘಂಟೆ ಸದಾ ಕೆಲಸ ಮಾಡುತ್ತೇವೆ ಎಂದು 11 ಜನ ದಿ. ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
11 ಜನ ನಿರ್ದೇಶಕರಾದ ವ್ಹಿ.ಬಿ.ರೇಡೆಕರ, ಜಯಗೌಡಾ ಪಾಟೀಲ, ಶಶಿರಾಜ ಪಾಟೀಲ, ರವಿಂದ್ರ ಹಿಡಕಲ್, ಬಸಗೌಡಾ ಮಗೆನ್ನವರ, ಸೋಮಲಿಂಗ ಪಾಟೀಲ, ಅಶೋಕ ಚಂದಪ್ಪಗೋಳ, ಕುನಾಲ ಪಾಟೀಲ, ಈರಪ್ಪಾ ಬಂಜಿರಾಮ ಇವರೆಲ್ಲರೂ ಈ ಸಂದರ್ಭದಲ್ಲಿ ಹಾಜರರಿದ್ದರು.