ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರೀಶೀಲನಾ ಸಭೆ

ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರೀಶೀಲನಾ ಸಭೆ District progress review meeting of guarantee schemes

ಧಾರವಾಡ 05: ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಇಂದು (ನ.5) ಬೆಳಿಗ್ಗೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಮಾತನಾಡಿದರು.  

ಜಿಲ್ಲೆಯ ಯುವನಿಧಿ ಯೋಜನೆಯ ಪ್ರಗತಿಯನ್ನು ಪರೀಶೀಲಿಸಲಾಗಿ ಈ ಯೋಜನೆಯ ಪ್ರಗತಿಯು ತೀರಾ ಕುಂಠಿತವಾಗಿದ್ದು, ಈ ಕೂಡಲೇ ಯೋಜನೆಯ ಬಗ್ಗೆ ತಾಲೂಕಗಳಲ್ಲಿ, ಗ್ರಾಮಗಳಲ್ಲಿ ಹಾಗೂ ನಗರದಲ್ಲಿ ಇರುವ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿ ತಿಂಗಳ ಕನಿಷ್ಠ 10 ಕಾಲೇಜು ಭೇಟಿ ನೀಡಿ, ವಿಧ್ಯಾರ್ಥಿಗಳಿಗೆ ಯೋಜನೆಯ ಹೆಚ್ಚಿನ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡು ಯುವನಿಧಿ ಯೋಜನೆಯ ಪ್ರಗತಿ ಸಾಧಿಸಲು ಸಭೆಯಲ್ಲಿ ಸೂಚಿಸಿದರು. 

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಈಗಾಗಲೇ ಒಟ್ಟು 4,04,848 ಫಲಾನುಭವಿಗಳಿದ್ದು, 3,95,336 ನೊಂದಣಿಯಾಗಿವೆ. ಪ್ರತಿ ಫಲಾನುಭವಿಗಳಿಗೆ ರೂ.2000 ಗಳಂತೆ ಒಟ್ಟು 1,584 ಕೋಟಿ 89 ಲಕ್ಷ 56 ಸಾವಿರ ಜಮೆಯಾಗಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ. 97.65 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಅರ್ಜಿಗಳನ್ನು ಸೂಕ್ತವಾಗಿ ಪರೀಶೀಲಿಸಿ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಹೇಳಿದರು. 

ಸದಸ್ಯರಾದ ಅರವಿಂದ ಏಗನಗೌಡರ ಅವರು ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಕಾಲೇಜು ಪದವಿ ಮುಗಿಸಿದ ವಿಧ್ಯಾರ್ಥಿಗಳಿಗೆ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ದೂರುಗಳು ಬಂದಿದ್ದು. ಈ ಯುವನಿಧಿ ಯೋಜನೆಯ ಬಗ್ಗೆ ನಗರ, ಪಟ್ಟಣ ಹಾಗೂ ಗ್ರಾಮದಲ್ಲಿರುವ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಪ್ರತಿ ತಿಂಗಳ ಕನಿಷ್ಠ 5 ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಮೂಡಿಸಲು ಈ ಬಗ್ಗೆ ತಿಳುವಳಿಕೆ ನೀಡಲು ಸಭೆಯಲ್ಲಿ ತಿಳಿಸಿದರು.  

ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಎಸ್ ಅಕ್ಕಿ, ಸುಧೀರ ಎಸ್ ಬೋಳಾರ, ರೇಹನ್ ರಝಾ ಐನಾಪುರಿ ಹಾಗೂ ರತ್ನಾ ತೇಗೂರಮಠ ಉಪಸ್ಥಿತರಿದ್ದರು.  

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ಮಲ್ಲಿಕಾರ್ಜುನ  ತೊಗಲಬಾಗಿ ಸ್ವಾಗತಿಸಿದರು. 

ಸಭೆಯಲ್ಲಿ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.